ಶಾಲಾ ಪಠ್ಯದಲ್ಲಿ ಕೆಂಪೇಗೌಡ, ಸಿದ್ದರೂಢ ಜಾತ್ರೆ, ಚೆನ್ನಭೈರಾದೇವಿ!

karnataka

2022-23ನೇ ಸಾಲಿನ ಶಾಲಾ ಶೈಕ್ಷಣಿಕ ಪಠ್ಯ ಪರಿಷ್ಕರಣೆ ಕುರಿತು ಎಲ್ಲೆಡೆ ಚರ್ಚೆ ಪ್ರಾರಂಭವಾಗಿದೆ.

ಆರ್‍ಎಸ್‍ಎಸ್ ಸಂಸ್ಥಾಪಕ(RSS Founder) ಹೆಡಗೇವಾರ್(Hedgewar) ಅವರ ಭಾಷಣವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಿರುವುದಕ್ಕೆ ವಿಪಕ್ಷ ಕಾಂಗ್ರೆಸ್(Congress) ವಾಗ್ದಾಳಿ ನಡೆಸಿ, ಬಿಜೆಪಿ(BJP) ತನ್ನ ಕೋಮುವಾದಿ ಸಿದ್ದಾಂತವನ್ನು ಮಕ್ಕಳ ಮೇಲೆ ಹೇರಲು ಹೊರಟಿದೆ ಎಂದು ಆರೋಪಿಸಿತ್ತು. ಇದೀಗ ನೂತನ ಶಾಲಾ ಪಠ್ಯದಲ್ಲಿ ಮತ್ತೆ ಕೆಲ ಪ್ರಮುಖ ಪರಿಷ್ಕರಣೆಗಳನ್ನು ಮಾಡಲಾಗಿದ್ದು,

ನಾಡಪ್ರಭು(Nadaprabhu) ಕೆಂಪೆಗೌಡರು(Kempegowda) ಬೆಂಗಳೂರು ನಗರವನ್ನು ಕಟ್ಟಲು ಶ್ರಮಿಸಿದ ಕಥೆ, ಉತ್ತರಕರ್ನಾಟಕದ ಆಧ್ಯಾತ್ಮಿಕ ಪರಂಪರೆಯ ಶ್ರೇಷ್ಠ ಚೇತನ ಶ್ರೀ ಸಿದ್ದರೂಢ ಜಾತ್ರೆಯ ಹಿನ್ನಲೆ ಮತ್ತು ಇತಿಹಾಸ, ರಾಣಿ ಚೆನ್ನಭೈರಾದೇವಿಯ ಹೋರಾಟವನ್ನು ನೂತನ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. ಇನ್ನು ಟಿಪ್ಪು ಸುಲ್ತಾನ್‍ನನ್ನು ವೈಭವೀಕರಿಸುವ ಪಠ್ಯಕ್ಕೆ ಬ್ರೇಕ್ ಹಾಕಿ, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ದ ನಡೆಸಿದ ಹೋರಾಟವನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ನೂತನ ಪಠ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ‘ವೋಕಲ್ ಫಾರ್ ಲೋಕಲ್ ಮಂತ್ರ’ ಮತ್ತು ‘ಆತ್ಮ ನಿರ್ಭರ್’ವನ್ನು ಸೇರಿಸಲಾಗಿದೆ. ಸ್ವದೇಶಿ ಕರಕುಶಲ ಕಾರ್ಮಿಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ‘ಸ್ವದೇಶಿ ಸೂತ್ರದ ಸರಳ ಹಬ್ಬಗಳು’ ಪಠ್ಯದಲ್ಲಿ ಸೇರಿಸಲಾಗಿದೆ. ಇದರಲ್ಲಿ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹಬ್ಬ-ಹರಿದಿನಗಳನ್ನು ಹೇಗೆ ಆಚರಿಸಲಾಗುತ್ತಿತ್ತು ಎಂಬುದನ್ನು ಉಲ್ಲೇಖಿಸಲಾಗಿದೆ. ಅದೇ ರೀತಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಭಗತ್‍ಸಿಂಗ್ ಕುರಿತು ಬರೆದಿರುವ ‘ತಾಯಿ ಭಾರತೀಯ ಅಮರ ಪುತ್ರರು’ ಎಂಬ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ.

ಇನ್ನು 10ನೇ ತರಗತಿ ಪಠ್ಯದಲ್ಲಿ ಸ್ವಾಮಿ ವಿವೇಕಾನಂದರ ಉದಾತ್ತ ಚಿಂತನೆಗಳ ಪೂರಕ ಪಠ್ಯವಿತ್ತು. ಇದೀಗ ಅದರ ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಜೀಯವರ ಉದಾತ್ತ ಚಿಂತನೆಗಳನ್ನು ನೂತನ ಪಠ್ಯದಲ್ಲಿ ಸೇರಿಸಲಾಗಿದೆ. ಇನ್ನು ಗೋವಿಂದ ಪೈ ಅವರ ‘ನಾನು ಪ್ರಾಸ ಬಿಟ್ಟ ಕತೆ’ ಮತ್ತು ಪಂಜೆ ಮಂಗೇಶರಾಯರ ‘ಸೀಗಡಿ ಯಾಕೆ ಒಣಗಲಿಲ್ಲ’ ಮಕ್ಕಳ ಕತೆಯನ್ನು ಸೇರ್ಪಡೆ ಮಾಡಲಾಗಿದೆ.

Exit mobile version