ಕಾಶ್ಮೀರ ವಶಪಡಿಸಿಕೊಂಡ ನಂತರ ಭಾರತವನ್ನು ಆಕ್ರಮಿಸುತ್ತೇವೆ: ಶೋಯೆಬ್ ಅಖ್ತರ್

ನವದೆಹಲಿ, ಡಿ. 25: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್, ನಾವು ಮೊದಲು ಕಾಶ್ಮೀರವನ್ನು ವಶಪಡಿಸಿಕೊಂಡು ನಂತರ ಭಾರತದ ಮೇಲೆ ಘಜ್ವಾ ಎ ಹಿಂದ್ ಗಾಗಿ ಎಲ್ಲ ಕಡೆಯಿಂದ ದಾಳಿ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಸಾಮಾ ಟಿವಿಯೊಂದಿಗೆ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ. ಅಖ್ತರ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಖ್ತರ್ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮೊದಲ ಕ್ರಿಕೆಟಿಗ ಅಲ್ಲ. ಇದಕ್ಕೂ ಮೊದಲು ಶಾಹಿದ್ ಅಫ್ರಿದಿ ಮತ್ತು ಜಾವೇದ್ ಮಿಯಾಂದ್‌ರಂತಹ ಕ್ರಿಕೇಟಿಗರು ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ಈ ಮೊದಲು ನೀಡಿದ್ದರು.

ಗಜ್ವಾ-ಎ-ಹಿಂದ್ ಎಂದರೆ ‘ಭಾರತದ ವಿರುದ್ಧ ಧರ್ಮ ಯುದ್ಧ’ ಎಂದರ್ಥ. ‘ನಮ್ಮ ಧರ್ಮಗ್ರಂಥಗಳಲ್ಲಿ ಘಜ್ವಾ-ಎ-ಹಿಂದ್ ನಡೆಯುತ್ತದೆ ಮತ್ತು ಅಟೊಕ್ ನದಿಯು ಎರಡು ಬಾರಿ ಕೆಂಪು ಬಣ್ಣದಲ್ಲಿ ಇರುತ್ತದೆ ಎಂದು ಬರೆಯಲಾಗಿದೆ. ಅಫ್ಘಾನಿಸ್ತಾನದಿಂದ ಪಡೆಗಳು ಅಟೊಕ್ ವರೆಗೆ ತಲುಪುತ್ತವೆ. ಶಾಮಲ್ ಮಶ್ರಿಕ್‌ನಿಂದ ಆ ಪಡೆಗಳು ಉದಯಿಸಿದ ನಂತರ, ಉಜ್ಬೇಕಿಸ್ತಾನದಿಂದ ವಿವಿಧ ತುಕಡಿಗಳು ಬರುತ್ತವೆ. ಇವೆಲ್ಲವೂ ಲಾಹೋರ್‌ನ ಐತಿಹಾಸಿಕ ಪ್ರದೇಶವಾದ ಖೋರಾಸನ್‌ ಅನ್ನು ಉಲ್ಲೇಖಿಸುತ್ತದೆ’ ಎಂದು ಅಖ್ತರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಮೂಲಕ ಶೋಯೆಬ್ ಅವರು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Exit mobile version