ಕಾವೇರಿ ಕಂಟಕ: ಮುಂಗಾರು ಕೈಕೊಟ್ಟು ಬರಗಾಲವಿದ್ರೂ ತಮಿಳುನಾಡಿಗೆ ನೀರು ಹರಿಸಿ ಕಾವೇರಿಯನ್ನು ಬಸಿತವ್ರೆ !

Mandya: ಕಾವೇರಿ (Kaveri) ಜಲಾನಯನ ಪ್ರದೇಶದ ರೈತರು ನೀರಿಲ್ಲದೆ ಸಂಕಷ್ಟ ಎದುರಿಸುವಂತಾಗಿದ್ದು, ಮುಂಗಾರು ಕೈಕೊಟ್ಟು ಬರಗಾಲ ಆವರಿಸಿದೆ. ಜನ, ಜಾನುವಾರು, ರೈತರ ಬೆಳೆಗಳಿಗೂ ನೀರಿಲ್ಲದೆ ಈ ಸಲ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಆದ್ರೆ ಸರ್ಕಾರ ಮಾತ್ರ ತಮಿಳುನಾಡಿಗೆ (Tamilnadu) ನೀರು ಹರಿಸುತ್ತಿದೆ. ಸಿದ್ದರಾಮಯ್ಯ ಅವರಿಗೆ ನಮ್ಮ ರೈತರ ಸಂಕಟ ಹೇಗೆ ಅರ್ಥವಾಗಬೇಕು. ಇಲ್ಲಿ ಬರಗಾಲ ಇದ್ರೂ ಸುಪ್ರೀಂ ಕೋರ್ಟ್ (Supreme Court) ಹೇಳಿದ ಕೂಡಲೇ ನೀರು ಬಸಿದು ಕೊಡ್ತಾರಾ ಎಂದು ರೈತರು ಆತಂಕಪಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿಗೆ ನಿತ್ಯ 10000 ಕ್ಯೂಸೆಕ್ (Cusec) ನೀರು ಹರಿದುಹೋಗುತ್ತಿರುವುದನ್ನು ತೀವ್ರ ವಿರೋಧಿಸಿದ್ದು, ಕಣ್ಣಿಗೆ ನೀರು ಕಾಣುತ್ತೆ ಅಂತ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಸದ್ಯಕ್ಕೆ ನಮ್ಮಲ್ಲಿ ಮಳೆ ಇಲ್ಲ. ಹಿಂಗಾರು ಕೈಕೊಡುತ್ತೆ ಅಂಥ ರೇಡಿಯೋದಲ್ಲಿ ಯಾವಾಗ್ಲೂ ಹೇಳ್ತಾ ಇರ್ತಾರೆ. ಹಾಗಾಗಿ ಈ ವರ್ಷ ಬಹಳ ಕಷ್ಟವಿರುವುದರಿಂದ ಈ ಬಾರಿ ಕುಡಿಯೋ ನೀರಿಗೂ ವಾರ್‌ ಆಗ್ಬೋದು ಸ್ವಾಮಿ ಎಂದು ತಿಳಿಸಿದರು.

ಪ್ರತಿ ದಿನ 10 ಸಾವಿರ ಕ್ಯೂಸೆಕ್‌ ನೀರು ಬಿಡ್ತಾ ಇರೋದು ಅನ್ಯಾಯ, ಆದರೆ ಕೋರ್ಟಿಗೆ ಹೋಗಲಿ ಅಂಥ ಸರ್ಕಾರದವರು ಹೇಳ್ತಾ ಇದ್ದಾರಲ್ಲ, ಎಂಬ ಪತ್ರಿಕೆಯ ಪ್ರಶ್ನೆಗೆ ಸಿದ್ದರಾಮಣ್ಣನಿಗೆ ನಮ್ಮ ಸಂಕಟ ಹೇಗೆ ಅರ್ಥವಾಗಬೇಕು. ಬರಗಾಲದಲ್ಲಿ ಯಾರಾದ್ರೂ ನೀರು ಬಿಡ್ತಾರ ಸ್ವಾಮಿ ? ಇರೋ ಬರೋ ನೀರನ್ನೆಲ್ಲಾ ತಮಿಳುನಾಡಿಗೆ (Tamilnadu) ಬಿಡ್ತ ಇದ್ದಾರೆ. ನಾಳೆ ಸುಪ್ರೀಂಕೋರ್ಟ್‌ ಏನಾದ್ರೂ ನೀರು ಕೊಡಿ ಅಂದ್ರೆ ಅಳಿದುಳಿದಿರುವ ನೀರನ್ನು ಬಸಿದು ಕೊಡ್ತಾರೆ.

ಈಗಾಗಲೇ ನೀರಿಲ್ದೆ ಬೆಳೆಗಳೆಲ್ಲಾ ಒಣಗುತ್ತಿವೆ. ಮುಂಗಾರು ಬೆಳೆ ಹಾಕೋಕಾಕಿಲ್ಲ. ಹಿಂಗೆ ಆದ್ರೆ ಜೀವನ ಮಾಡೋದೆಂಗೆ ಅನ್ನೋ ಭಯ ಆಗ್ತಿದೆ. ಒಟ್ಟಿನಲ್ಲಿ ರೈತರ ಜೀವನವೇ ಹಾಳಾಗೋಯ್ತು ಎಂದು ಮಾತಲ್ಲೇ ನಿತ್ರಾಣಗೊಂಡರು. ಹಾಗೆ ನೋಡಿದರೆ ಇದು ಕೇವಲ ಸಿದ್ದರಾಮೇಗೌಡರ ಆತಂಕ ಮಾತ್ರವಲ್ಲ. ಕ್ಯಾತಘಟ್ಟ (Kyataghatta), ಪಾಲಹಳ್ಳಿ, ಪಾಂಡವಪುರ, ಕೆ. ಆರ್‌. ಪೇಟೆ (K.R Pete) ಮಾರ್ಗದಲ್ಲಿ ಸಂಚರಿಸಿ, ಯಾವುದೇ ರೈತರನ್ನು ಮಾತನಾಡಿಸಿದರೂ ಇದೇ ಬವಣೆಯನ್ನು ಮುಂದಿಡುತ್ತಿದ್ದಾರೆ.

ಇನ್ನು ರೈತರು ಖುಷಿಯಿಂದಲೇ ಮುಂಗಾರು ಕೃಷಿಯಲ್ಲಿ ನಿರತರಾಗಿರಬೇಕಾದ ಹೊತ್ತಲ್ಲಿ ಅನ್ನದಾತರ ಮುಖದಲ್ಲಿ ನೋವಿನ ಗೆರೆಗಳು ಮೂಡಿವೆ. ಮುಖ್ಯಮಂತ್ರಿ ಆದವರು ರಾಜ್ಯದ ಜನರನ್ನು ಮಕ್ಕಳ ತಾಯಿಯಾಗಿ ಕಾಪಾಡಬೇಕು. ಆದರೆ ಸಿದ್ದರಾಮಯ್ಯ (Siddaramaiah) ಅವರು ಆ ಕೆಲಸ ಮಾಡುತ್ತಿಲ್ಲ. ಸುಪ್ರೀಂಕೋರ್ಟ್‌ ಅಥವಾ ಕಾವೇರಿ ಪ್ರಾಧಿಕಾರದ ಆದೇಶವೇ ಇಲ್ಲದೆ ತಮಿಳುನಾಡಿಗೆ ನೀರು ಬಿಟ್ಟಿದ್ದೇಕೆ ಎಂಬ ಸಂಗತಿಯನ್ನು ಬಹಿರಂಗಪಡಿಸಬೇಕೆಂದು ರೈತರ ಆಗ್ರಹ.

ಭವ್ಯಶ್ರೀ ಆರ್.ಜೆ

Exit mobile version