”ಇನ್ನೂ ಯೌವನದ ಮಧ್ಯದಲ್ಲಿದ್ದೇನೆ” : ಪೆಸಿಫಿಕ್ ಸಾಗರವನ್ನು ಏಕಾಂಗಿಯಾಗಿ ದಾಟಿದ 83 ವರ್ಷದ ಕಿಂಚಿ ಹೋರಿ!

ತಮ್ಮ 83 ನೇ ವಯಸ್ಸಿನಲ್ಲಿ ಜಪಾನಿನ(Japan) ಕೆನಿಚಿ ಹೋರಿ(Kenichi Horie) ಅವರು ಪೆಸಿಫಿಕ್ ಮಹಾಸಾಗರದಾದ್ಯಂತ(Pacific Ocean) ಒಬ್ಬಂಟಿಯಾಗಿ,

ತಡೆರಹಿತ ಪ್ರಯಾಣವನ್ನು ಪೂರ್ಣಗೊಳಿಸಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಮತ್ತು ಅವರು ತಮ್ಮ ಹೇಳಿಕೆಯಲ್ಲಿ ನಾನು ಇನ್ನೂ ನನ್ನ ಯೌವನದ ಮಧ್ಯದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಾನು ಏನೂ ಸಾಧಿಸಿಲ್ಲ, ಇನ್ನೂ ಸಾಧಿಸುವ ಹಂಬಲ ಇದೆ ಎಂದು ಹೇಳಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ(San Francisco) ವಿಹಾರ ನೌಕೆ ಬಂದರನ್ನು ತೊರೆದ ನಂತರ 69 ದಿನಗಳಲ್ಲಿ ತಮ್ಮ ಟ್ರಾನ್ಸ್-ಪೆಸಿಫಿಕ್ ಏಕಾಂಗಿ ಪ್ರಯಾಣವನ್ನು ಪೂರ್ಣಗೊಳಿಸಿದ ಹೋರಿ ಅವರು, ಶನಿವಾರದ ಆರಂಭದಲ್ಲಿ ಜಪಾನ್‌ನ ಪಶ್ಚಿಮ ಕರಾವಳಿಯ ಕಿಯಿ ಸ್ಟ್ರೇಟ್ ದಾಟಿ ಮನೆಗೆ ಹಿಂದಿರುಗಿದರು.

ಭಾನುವಾರದಂದು, ತಮ್ಮ 19 ಅಡಿ ಉದ್ದದ, 990 ಕೆಜಿಯಷ್ಟು ಸುಂಟೋರಿ ಮರ್ಮೇಡ್ III ನಲ್ಲಿ ರಾತ್ರಿಯನ್ನು ಕಳೆದ ನಂತರ, ಹೋರಿ ಅವರು ಶಿನ್ ನಿಶಿನೋಮಿಯಾ ಯಾಚ್ ಬಂದರಿಗೆ ಬಂದಿಳಿದ ಬಳಿಕ ಅಲ್ಲಿನ ಸ್ಥಳೀಯ ನಿವಾಸಿಗಳು ಮತ್ತು ಬೆಂಬಲಿಗರು ಅವರನ್ನು ಪ್ರೋತ್ಸಾಹಿಸಿದ್ದಾರೆ. ಬ್ಯಾನರ್‌ಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ “ಸ್ವಾಗತ, ಶ್ರೀ ಕೆನಿಚಿ ಹೋರಿ” ಎಂದು ಕೂಗಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಹೋರಿ ಸ್ಯಾನ್ ಫ್ರಾನ್ಸಿಸ್ಕೋದಿಂದ ಔಷಧದ ಸ್ಟಾಕ್ ಅನ್ನು ತಮ್ಮ ಜೊತೆಯಲ್ಲೇ ಕೊಂಡೊಯ್ದರು.

ಆದರೆ ಸಮುದ್ರದಲ್ಲಿ ಕೇವಲ ಎರಡು ತಿಂಗಳಿಗಿಂತ ಹೆಚ್ಚು ಅವಧಿಯಲ್ಲಿ ಕಣ್ಣಿನ ಡ್ರಾಪ್ಸ್ ಮತ್ತು ಬ್ಯಾಂಡ್-ಏಡ್‌ಗಳನ್ನು ಮಾತ್ರ ಬಳಸಿದ್ದಾರೆ ಎನ್ನಲಾಗಿದೆ. ನಾನು ಎಷ್ಟು ಆರೋಗ್ಯವಾಗಿದ್ದೇನೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೋರಿ ಬಹಳ ಸಂತಸದಿಂದ ಹೇಳಿಕೊಂಡಿದ್ದಾರೆ. 83 ವರ್ಷದಲ್ಲಿ ಮನೆಯಲ್ಲಿದ್ದು, ಆರಾಮದಾಯಕವಾಗಿ ವಿಶ್ರಾಂತಿ ಪಡೆಯಬೇಕಾದವರು,

ಯುವ ಉತ್ಸಾಹಿಯಂತೆ ಸಾಧನೆ ಮಾಡಲು ಹೆಜ್ಜೆಯಿಟ್ಟಿರುವುದಕ್ಕೆ ಅನೇಕರಿಂದ ಶ್ಲಾಘನೆ, ಮೆಚ್ಚುಗೆಗಳು ಹರಿದುಬಂದಿದೆ.

Exit mobile version