ಕೆರಗೋಡು ಹನುಮಧ್ವಜ ವಿವಾದ: ಮಂಡ್ಯದ ಕೆರಗೋಡು ಗ್ರಾಮ ಬಂದ್, ಹಿಂದೂಪರ ಕಾರ್ಯಕರ್ತರಿಂದ ಬೈಕ್ ರಾಲಿ

Mandya: ಇಂದು ಮಂಡ್ಯ ನಗರದ ಕೆರಗೋಡು (Keragodu Hanuma Flag Controversy) ಗ್ರಾಮದಲ್ಲಿ ಹನುಮಧ್ವಜ ತೆರವು ಖಂಡಿಸಿ ಬಂದ್​​ಗೆ ಕರೆ ನೀಡಲಾಗಿದೆ.

ನೂರಾರು ಹಿಂದೂಪರ ಕಾರ್ಯಕರ್ತರಿಂದ ಬೈಕ್ ರಾಲಿ (Bike Rally) ಆರಂಭವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಕೆರಗೋಡು, ಹುಲಿವಾಹನ, ಸಾತನೂರು, ಚಿಕ್ಕಮಂಡ್ಯ ಮೂಲಕ ಮಂಡ್ಯದ ಆಂಜನೇಯ ದೇಗುಲದವರೆಗೆ ರಾಲಿ ಸಾಗಲಿದ್ದು, ಬಳಿಕ ಮಂಡ್ಯದ ಡಿಸಿ ಕಚೇರಿವರೆಗೆ ಪಾದಯಾತ್ರೆ

ನಡೆಸಲಿದ್ದಾರೆ. ಪಾದಯಾತ್ರೆಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು, ಕೆರಗೋಡು ಗ್ರಾಮಸ್ಥರು, ಬಿಜೆಪಿ (BJP) ಕಾರ್ಯಕರ್ತರು, ಮುಖಂಡರು ಭಾಗಿಯಾಗಲಿದ್ದಾರೆ.

ಬೈಕ್​ ರಾಲಿ ಮತ್ತು ಪಾದಯಾತ್ರೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿದ್ದು ಭದ್ರತೆಯನ್ನು

ನೀಡುತ್ತಿದ್ದಾರೆ. ಕೆರಗೋಡು ಗ್ರಾಮಕ್ಕೆ ಎಸ್​​ಪಿ​​ ತಿಮ್ಮಯ್ಯ (S P Timmayya) ಭೇಟಿ ನೀಡಿ ಎಲ್ಲವನ್ನು ಪರಿಶೀಲನೆ ಮಾಡಿ, ಸಿಬ್ಬಂದಿಗೆ ಮಾರ್ಗದರ್ಶನ ನೀಡಿದ್ದಾರೆ.

ವಾರದ ಹಿಂದೆ ಕೆರಗೋಡದಲ್ಲಿ ಹೊತ್ತಿಕೊಂಡಿದ್ದ ಆಕ್ರೋಶ ಇನ್ನೂ ಹಾಗೆಯೇ ಉಳಿದಿದೆ. ಜನವರಿ (January) 28ರಂದು ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿಚಾರಕ್ಕೆ ಗಲಾಟೆ

ಆಗಿತ್ತು. ಬಳಿಕ ಆವೇಶ ತಗ್ಗಿದ್ದರೂ ಆಕ್ರೋಶ ತಗ್ಗಿರಲಿಲ್ಲ. ಇಂದು ಮಂಡ್ಯ (Mandya) ನಗರ ಹಾಗೂ ಕೆರಗೋಡು ಬಂದ್ ಆಗಲಿದೆ.

ಸಿಲ್ವರ್ ಜುಬಿಲಿ ಪಾರ್ಕ್‌ (Silver Jubili Park)ನಲ್ಲಿರುವ ಆಂಜನೇಯನ ದೇವಾಲಯದಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ರಾಲಿ ನಡೆಸಲಿದ್ದಾರೆ. ಇನ್ನು, ಈ ಬಂದ್​ಗೆ ಬಿಜೆಪಿ ಬಾಹ್ಯ

ಬೆಂಬಲ ಸೂಚಿಸಿದ್ದು, ಬೈಕ್ ರಾಲಿಯಲ್ಲಿ ಹಾಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತ್ರ ಪಾಲ್ಗೊಳ್ತಿದೆ. ಭಜರಂಗದಳ, ವಿಶ್ವ ಹಿಂದೂಪರಿಷತ್ ಹಾಗೂ ಶ್ರೀರಾಮ ಭಜನಾ ಮಂಡಳಿ ಮಂಡ್ಯ

ನಗರ ಹಾಗೂ ಕೆರಗೋಡು ಗ್ರಾಮ (Keragodu Hanuma Flag Controversy) ಬಂದ್​ಗೆ (Bandh) ಮುಂದಾಗಿವೆ.

ಮೊದಲು ಪ್ರತಿಭಟನೆ ನಡೆಸಲಿರೋ ಹಿಂದೂ ಪರ ಕಾರ್ಯಕರ್ತರು, ಬಳಿಕ ಅಲ್ಲಿಂದ ನೂರಾರು ಬೈಕ್​ಗಳ (Bike) ಮೂಲಕ ಮಂಡ್ಯಕ್ಕೆ ಬರಲಿದ್ದಾರೆ. ಸಂಜೆ 6 ಗಂಟೆಯವರೆಗೂ ಈ

ಬಂದ್​ನ ಬಿಸಿ ಇರಲಿದೆ.

ಇದನ್ನು ಓದಿ: ಬೆಳಗಾವಿ ಜಿಲ್ಲೆ ವಿಭಜನೆಯಾಗುತ್ತಾ? ಚುನಾವಣೆ ಹೊತ್ತಲ್ಲೇ ವಿಭಜನೆಗೆ ಆಸಕ್ತಿ ತೋರಿಸಿದ ಸರ್ಕಾರ

Exit mobile version