‘ಗುಜರಾತ್ ಮಾದರಿ’ ಅಧ್ಯಯನಕ್ಕೆ ಹೊರಟ ಕೇರಳ!

gujarat

ಗುಜರಾತ್(Gujarat) ಮಾದರಿಯಿಂದ ಅಭಿವೃದ್ದಿ(Development) ಸಾಧ್ಯವಿಲ್ಲ. ಕೇರಳಕ್ಕೆ ಕೇರಳದ್ದೆ, ಮಾದರಿ ಇರಲಿದೆ ಎಂದು ಹೇಳುತ್ತಿದ್ದ ಕೇರಳ(Kerala) ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ಸರ್ಕಾರ(Government) ಇದೀಗ ಕೇರಳ ಮುಖ್ಯಕಾರ್ಯದರ್ಶಿ ನೇತೃತ್ವದ ತಂಡವೊಂದನ್ನು ಗುಜರಾತ್‍ನಲ್ಲಿ ಸ್ಥಾಪಿಸಲಾಗಿರುವ ನ್ಯಾಷನಲ್ ಇನ್ಪೋರ್ಮಾಟಿಕ್ ಸೆಂಟರ್ ( ಎನ್‍ಐಸಿ) ತಂದಿರುವ ಡ್ಯಾಶ್‍ಬೋರ್ಡ್ ವ್ಯವಸ್ಥೆಯ ಅಧ್ಯಯನಕ್ಕಾಗಿ ಕಳುಹಿಸಿದೆ.

ಇನ್ನು ಇತ್ತೀಚೆಗಷ್ಟೇ ಕೇರಳದ ಕಣ್ಣೂರಿನಲ್ಲಿ ನಡೆದ ಸಿಪಿಎಂ ಸಮ್ಮೇಳನದಲ್ಲಿ ಮಾತನಾಡಿದ್ದ ಪಿಣರಾಯಿ ವಿಜಯನ್, ‘ಕೇರಳ ಮಾದರಿ’ಯನ್ನು ದೇಶಾದ್ಯಂತ ಪ್ರಚಾರ ಮಾಡಲಾಗುವುದು. ನಮ್ಮ ರಾಜ್ಯದ ಮಾದರಿ ಇದೀಗ ಅಭಿವೃದ್ದಿ ದೆಸೆಯಲ್ಲಿ ಹೊಸ ದೃಷ್ಟಿಕೋನ ಹೊಂದಿದೆ. ಭಾರತದ ಸಮಗ್ರ ಅಭಿವೃದ್ದಿಗೆ ಕೇರಳ ಮಾದರಿಯ ಅಭಿವೃದ್ದಿ ಕಾರ್ಯಕಾರ್ಯಗಳು ನೆರವಾಗಲಿವೆ ಎಂದು ಹೇಳಿದ್ದರು.

ಇನ್ನು ಕೇರಳ ಕೊರೋನಾ ನಿಯಂತ್ರಣದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದೆ. ಹೀಗಾಗಿ ಗುಜರಾತ್‍ನಲ್ಲಿ ಕೊರೋನಾ ನಿಯಂತ್ರಣಕ್ಕೆ ಅಳವಡಿಸಿಕೊಂಡಿರುವ ಕ್ರಮಗಳನ್ನು ಅಧ್ಯಯನ ಮಾಡಲು ಮುಖ್ಯ ಕಾರ್ಯದರ್ಶಿ ವಿ.ಪಿ ಜಾಯ್ ನೇತೃತ್ವದಲ್ಲಿ ತಂಡವೊಂದನ್ನು ಗಾಂಧಿನಗರಕ್ಕೆ ಕಳುಹಿಸಲು ಪಿಣರಾಯಿ ವಿಜಯನ್ ನಿರ್ಧರಿಸಿದ್ದಾರೆ. ಗಾಂಧಿನಗರದಲ್ಲಿರುವ ಇ-ಆಡಳಿತ ವ್ಯವಸ್ಥೆಯ ಅಡಿಯಲ್ಲಿ ಜಾರಿಗೆ ತಂದಿರುವ ಡ್ಯಾಶ್‍ಬೋರ್ಡ್ ವ್ಯವಸ್ಥೆ ಮೂಲಕ ಕೊರೋನಾ ಸೋಂಕು ನಿಯಂತ್ರಣ, ದತ್ತಾಂಶ ಸಂಗ್ರಹಣೆ, ಆಸ್ಪತ್ರೆಗಳ ನಿಗಾ, ದೂರುಗಳ ಪರಿಶೀಲನೆ ಸೇರಿದಂತೆ ಅನೇಕ ಅಂಶಗಳ ಅಧ್ಯಯನವನ್ನು ಈ ತಂಡ ನಡೆಸಲಿದೆ.

ಇನ್ನು ಗಾಂಧಿನಗರಕ್ಕೆ ತಂಡ ಕಳುಹಿಸುವ ಬಗ್ಗೆ ಅಧಿಕೃತ ಹೇಳಿಕೆಯನ್ನು ಕೇರಳ ಸರ್ಕಾರ ನೀಡಿಲ್ಲ. ಆದರೆ ‘ಇಂಡಿಯನ್ ಎಕ್ಸ್‍ಪ್ರೆಸ್’ ಪತ್ರಿಕೆ ಜೊತೆ ಮಾತನಾಡಿರುವ ಆಡಳಿತ ಪಕ್ಷದ ನಾಯಕರೊಬ್ಬರು “ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಮ್ಮ ಮುಖ್ಯಮಂತ್ರಿಗಳು ಕೊರೋನಾ ನಿಯಂತ್ರಣ ಕುರಿತು ಮಾತನಾಡಿದ್ದ ವೇಳೆ, ಗುಜರಾತ್‍ಗೆ ಭೇಟಿ ನೀಡಿ ಡ್ಯಾಶ್‍ಬೋರ್ಡ್ ಕುರಿತು ಅಧ್ಯಯನ ನಡೆಸುವಂತೆ ಸಲಹೆ ನೀಡಿದ್ದರು. ಹೀಗಾಗಿ ನಮ್ಮ ಮುಖ್ಯಮಂತ್ರಿಗಳು ಗುಜರಾತ್‍ಗೆ ರಾಜ್ಯದಿಂದ ತಂಡವೊಂದನ್ನು ಕಳುಹಿಸಲು ನಿರ್ಧರಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಇನ್ನು ಕೇರಳ ರಾಜ್ಯ ತಂಡ ಗಾಂಧಿನಗರಕ್ಕೆ ಡ್ಯಾಶ್‍ಬೋರ್ಡ್ ಅಧ್ಯಯನಕ್ಕಾಗಿ ಬರುತ್ತಿರುವ ಸಂಗತಿಯನ್ನು ಗುಜರಾತ್ ಸರ್ಕಾರ ಸ್ಪಷ್ಟಪಡಿಸಿದೆ.

Exit mobile version