ಪಂಚರಾಜ್ಯಗಳ ಚುನಾವಣೆಗೆ ಇಂದು ಮತದಾನ: ಕೇರಳ, ತಮಿಳುನಾಡು, ಪುದುಚೇರಿ ಒಂದೇ ಹಂತದಲ್ಲಿ ಪೂರ್ಣ

ಹೊಸದಿಲ್ಲಿ, ಏ. 06: ಭಾರೀ ಕುತೂಹಲ ಮೂಡಿಸಿರುವ ಪಂಚ ರಾಜ್ಯಗಳ ವಿಧಾನಸಭೆಗೆ ಮಂಗಳವಾರ ಮತದಾನ ನಡೆದಿದ್ದು, ಕೇರಳ, ತಮಿಳುನಾಡು, ಪುದುಚೇರಿ ವಿಧಾನಸಭಾ ಚುನಾವಣೆಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದರೆ. ಅಸ್ಸಾಂಗೆ ಮೂರನೇ ಮತ್ತು ಕೊನೆಯ, ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆದಿದೆ.

ಕೇರಳದಲ್ಲಿ 140, ತಮಿಳನಾಡು 234, ಪುದುಚೇರಿಯ 30 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅಸ್ಸಾಂನಲ್ಲಿ ಕೊನೆಯ ಹಂತದಲ್ಲಿ 40 ಕ್ಷೇತ್ರಗಳಲ್ಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಮೂರನೆ ಹಂತದಲ್ಲಿ 31 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಮತದಾನದ ಹಿನ್ನೆಲೆಯಲ್ಲಿ
ಮಂಗಳವಾರ ಬೆಳಗ್ಗೆನಿಂದಲೇ ಮತದಾರರು ಉತ್ಸಾಹದಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದರು. ಇನ್ನೂ ತಮಿಳುನಾಡಿನಲ್ಲಿ ಪ್ರಮುಖರಾದ ನಟ ರಜನಿಕಾಂತ್‌, ಎಂಎನ್‌ಎಂ ಮುಖ್ಯಸ್ಥ ಕಮಲ್‌ ಹಾಸನ್‌, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಸೇರಿದಂತೆ ಹಲವು ಪ್ರಮುಖರು ಮತದಾನ ಮಾಡಿದ್ದಾರೆ.

ದೇಶದ ರಾಜಕೀಯದಲ್ಲಿ ಪಂಚ‌ ರಾಜ್ಯಗಳ ಈ ಚುನಾವಣೆ ಅತ್ಯಂತ ಕುತೂಹಲ ಕೆರಳಿಸಿದ್ದು, ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಪಾಲಿಗೆ ಈ ಚುನಾವಣೆ ಅತ್ಯಂತ ಮಹತ್ವದಾಗಿದ್ದರೆ. ಸ್ಥಳೀಯ ರಾಜಕೀಯ ಪಕ್ಷಗಳು ಸಹ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರುವ ನಿರೀಕ್ಷೆಯಲ್ಲಿವೆ.

Exit mobile version