ಖರಗ್ಪುರ IITಯಲ್ಲಿ ವಿದ್ಯಾರ್ಥಿಯ ಕೊಳೆತ ಶವ ಹಾಸ್ಟೆಲ್ ಕೊಠಡಿಯಲ್ಲಿ ಪತ್ತೆ! ;

Kharagpur : ಐಐಟಿ(IIT) ಖರಗ್ಪುರದಲ್ಲಿ(Kharagpur) ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯ ಕೊಳೆತ(Kharagpur student decomposed body found) ಶವ ಹಾಸ್ಟೆಲ್ ಕೋಣೆಯಲ್ಲಿ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು 23 ವರ್ಷದ ಫಯಾಜ್ ಅಹ್ಮದ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : https://vijayatimes.com/police-officer-hair-pulled-by-bjp-workers/

ಅಸ್ಸಾಂನ(Assam) ತಿನ್ಸುಕಿಯಾ ನಿವಾಸಿಯಾಗಿರುವ ಫಯಾಜ್ ಐಐಟಿ ಖರಗ್ಪುರದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದನು.

ಆತ ಇತ್ತೀಚೆಗೆ ಮನೆಯಿಂದ ಹಿಂತಿರುಗಿದ್ದನು. ಎರಡು ದಿನಗಳಿಂದ ಆತನ ಸ್ನೇಹಿತರು ಆತ ಎಲ್ಲಿಯೂ ಕಾಣದೇ ಇದ್ದಾಗ ಆತನ ಕೊಠಡಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Assam CM Himanth Biswa Sharma

ನಂತರ, ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಆತನ ಕೋಣೆಯಲ್ಲಿ ಪರೀಕ್ಷಿಸಿದಾಗ, ಮಲಗಿದ್ದ ಕೊಳೆತ ಮೃತದೇಹ(Dead Body) ಪತ್ತೆಯಾಗಿದೆ.

ನಂತರ ಫಯಾಜ್ ಅಹ್ಮದ್ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಆತನ ಸಾವಿನ ಕಾರಣ ತಿಳಿಯಲು ಶವವನ್ನು ಮರಣೋತ್ತರ(Autopsy) ಪರೀಕ್ಷೆಗೆ ಕಳುಹಿಸಲಾಗಿದೆ.

ಇನ್ನು ಈ ಘಟನೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanth Biswa Sharma) ಸಂತಾಪ ವ್ಯಕ್ತಪಡಿಸಿದ್ದಾರೆ.

“ಪ್ರತಿಷ್ಠಿತ ಐಐಟಿ ಖರಗ್ಪುರದಲ್ಲಿ ಓದುತ್ತಿರುವ ತಿನ್ಸುಕಿಯಾದ ಪ್ರಕಾಶಮಾನವಾದ ಯುವ ವಿದ್ಯಾರ್ಥಿ ಫೈಜಾನ್ ಅಹ್ಮದ್ ಅವರ ದುರದೃಷ್ಟಕರ ಸಾವಿನಿಂದ ತೀವ್ರ ನೋವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ. ಅವನ ಆತ್ಮಕೆ ಶಾಂತಿ ಸಿಗಲಿ.” ಎಂದು ಟ್ವೀಟ್‌ ಮಾಡಿದ್ದಾರೆ.

ಫಯಾಜ್ ಅಹ್ಮದ್ ಸಾವಿನ ಕುರಿತು(Kharagpur student decomposed body found) ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಪ್ರತಿಷ್ಠಿತ ಶಿಕ್ಷಣ ಕೇಂದ್ರದಲ್ಲಿ ಈ ರೀತಿಯ ಘಟನೆಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ, ತನಿಖೆಯನ್ನು ಮುಂದುವರೆಸಲಿದ್ದಾರೆ.

https://youtu.be/TVNsomKcxtI ಕಂಠೀರವ ಕ್ರೀಡಾಂಗಣ ಖಾಸಿಗಿಯವರಿಗೆ ಮಾರಾಟ?

ಫಯಾಜ್ ಅಹ್ಮದ್ ಸಾವು ಇದೀಗ ಇಡೀ ಅಸ್ಸಾಂ ರಾಜ್ಯದಾದ್ಯಂತ ಹೆಚ್ಚು ಸುದ್ದಿಯಲ್ಲಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

Exit mobile version