ರಾಹುಲ್ ಗಾಂಧಿ ಅನರ್ಹರಾದ ಬೆನ್ನಲ್ಲೇ ನಟಿ ಖುಷ್ಬೂ ಅವರ ಹಳೆಯ ಟ್ವೀಟ್ ವೈರಲ್!

India : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Khushboo tweet is viral) ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ ಬೆನ್ನಲ್ಲೇ ನಟಿ, ರಾಜಕಾರಣಿ ಖುಷ್ಬೂ ಸುಂದರ್  ಅವರ ಹಳೆಯ ಟ್ವೀಟ್ (Tweet) ಒಂದು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

2018 ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಟಿ ಖುಷ್ಬೂ ಸುಂದರ್ ಅವರು ಮೋದಿ ಹೆಸರಿನ ಅರ್ಥವನ್ನು ಭ್ರಷ್ಟಾಚಾರ ಎಂದು ಬದಲಾಯಿಸಬೇಕು ಎಂದು ಹೇಳಿ ಮಾಡಿದ್ದ ಟ್ವೀಟ್ ಈಗ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಮೋದಿ ಉಪನಾಮದ ಕಾಮೆಂಟ್‌ಗಾಗಿ ರಾಹುಲ್ ಗಾಂಧಿ (Rahul Gandhi) ಅವರನ್ನು ಶುಕ್ರವಾರ ದೋಷಿ ಎಂದು ಸಾಬೀತು ಪಡಿಸಿದ ನಂತರ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಯಿತು.

2019 ರ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರನ್ನು ಇದೀಗ ಲೋಕಸಭೆಯಿಂದ ಅಮಾನತುಗೊಳಿಸಲಾಗಿದ್ದು, ‘ಎಲ್ಲಾ ಕಳ್ಳರಿಗೂ ಸಾಮಾನ್ಯ ಮೋದಿ ಉಪನಾಮ ಹೇಗೆ ಬಂದಿತು’ ಎಂದು ಹೇಳಿದ್ದಕ್ಕಾಗಿ ಸೂರತ್

ನ್ಯಾಯಾಲಯವು (Court of Surat) ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿದ ನಂತರ, ನಟಿ-ರಾಜಕಾರಣಿ (Khushboo tweet is viral) ಖುಷ್ಬು ಸುಂದರ್ ಅವರ ಹಳೆಯ ಟ್ವೀಟ್ ವೈರಲ್ ಆಗಿದೆ.

ಇದನ್ನೂ ಓದಿ : https://vijayatimes.com/state-election-commission/

2018 ರಲ್ಲಿ, ಖುಷ್ಬೂ ಅವರು ಕಾಂಗ್ರೆಸ್‌ನಲ್ಲಿದ್ದಾಗ, (Congress)“ಯಹಾನ್ ಮೋದಿ ವಹಾನ್ ಮೋದಿ ಜಹಾನ್ ದೇಖೋ ಮೋದಿ ಲೇಕಿನ್ ಯೇ ಕ್ಯಾ? ಹರ್ ಮೋದಿ ಕೆ ಆಗೇ ಭ್ರಷ್ಟಾಚಾರ್ ಉಪನಾಮ ಲಗಾ ಹುವಾ

ಹೈ ಮೋದಿ ಮುತ್ಲಾಬ್ ಭ್ರಷ್ಟಾಚಾರ್ ಎಂದು ಟ್ವೀಟ್ ಮಾಡಿದ್ದರು. ಮೋದಿಯ ಅರ್ಥ ಭ್ರಷ್ಟಾಚಾರ ಎಂದು ಹೇಳಿದ್ದು, ಇದು ಉತ್ತಮವಾಗಿ ಹೋಲುತ್ತದೆ.

ನೀರವ್, ಲಲಿತ್, ನಮೋ = ಭ್ರಷ್ಟಾಚಾರ ಎಂದು ಟ್ವೀಟ್ ಮಾಡಿದ್ದರು. ನಟಿ ಖುಷ್ಬು ಅವರು ಮಾಡಿದ್ದ ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಹಲವಾರು ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಲವರು ಗುಜರಾತ್ ಸಚಿವ ಪೂರ್ಣೇಶ್ ಮೋದಿ (Purnesh Modi) ಖುಷ್ಬೂ ಸುಂದರ್ ವಿರುದ್ಧ ಈಗ ಕೇಸ್ ದಾಖಲಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಸದ್ಯ ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ

ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿರುವ ಖುಷ್ಬು ಅವರು, ತಮ್ಮ ಟ್ವೀಟ್ ಅನ್ನು ಉಲ್ಲೇಖಿಸಿ ಮಾಡುತ್ತಿರುವ ಆರೋಪಕ್ಕೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೇ ನೀಡಿಲ್ಲ,

ಮತ್ತು ತಾವು ಮಾಡಿದ ಹಳೆಯ ಟ್ವೀಟ್ ಅನ್ನು ಡಿಲಿಟ್ ಕೂಡ ಮಾಡಿಲ್ಲ! ಮೋದಿ ಉಪನಾಮದ ಕಾಮೆಂಟ್‌ಗಾಗಿ ಗುರುವಾರ (ಮಾರ್ಚ್ 23) ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗರ ಎರಡು ವರ್ಷಗಳ

ಶಿಕ್ಷೆಯನ್ನು ವಿಧಿಸಿತು ಮತ್ತು ಶುಕ್ರವಾರ (ಮಾರ್ಚ್ 24) ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ. ಇದು ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಗಿದ್ದು,

ಇದನ್ನೂ ಓದಿ : https://vijayatimes.com/vijayendra-vs-siddaramaiah/

ಎಲ್ಲಾ ವಿರೋಧ ಪಕ್ಷಗಳು ಈ ನಿರ್ಧಾರವನ್ನು ರಾಜಕೀಯ ಸೇಡಿನ ಕ್ರಮವೆಂದು ಖಂಡಿಸಿವೆ. ಲೋಕಸಭೆಯಿಂದ ರಾಹುಲ್ ಗಾಂಧಿಯ ಅನರ್ಹತೆಯ ವಿರುದ್ಧ ಕಾಂಗ್ರೆಸ್ ರಾಷ್ಟ್ರವ್ಯಾಪಿ ಆಂದೋಲನವನ್ನು ಘೋಷಿಸಿದೆ.
Exit mobile version