ಮಹಿಳಾ ಹಕ್ಕುಗಳ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನಗೊಂಡ ನಟಿ ಖುಷ್ಬು ಸುಂದರ್!

Tamilnadu : ನಟಿ, ರಾಜಕಾರಣಿ ಖುಷ್ಬು ಸುಂದರ್ (khushbu congratulated by annamalai) ಅವರನ್ನು ಬಿಜೆಪಿ ಇದೀಗ ಮಹಿಳಾ ಹಕ್ಕುಗಳ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನಗೊಳಿಸಿದೆ.

ಈ ಬಗ್ಗೆ ನಟಿ ಖುಷ್ಬು ಸುಂದರ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

Khushbu Sundar

ಬಹುಭಾಷಾ ನಟಿಯಾಗಿ ಚಿತ್ರರಂಗದಲ್ಲಿ ದಶಕಗಳ ಕಾಲ ಮಿಂಚಿದ ನಟಿ ಖುಷ್ಬು ಸುಂದರ್(Khushbu Sundar) ಅವರು, ಕೇವಲ ನಟಿಯಾಗಿ ಮಾತ್ರವಲ್ಲದೇ ನಿರೂಪಕಿಯಾಗಿ, ರಾಜಕಾರಣಿಯಾಗಿ ಕೆಲಸ ಮಾಡಿದ್ದಾರೆ.

ನಟಿಯಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಟಿ ಖುಷ್ಬೂ, ಆರಂಭದಲ್ಲಿ ಡಿಎಂಕೆಗೆ ಸೇರಿದ್ದರು. ನಂತರ ಕಾಂಗ್ರೆಸ್‌ಗೆ ಸೇರಿದರು ಮತ್ತು ಅಂತಿಮವಾಗಿ (khushbu congratulated by annamalai) ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಸದ್ಯ ಬಿಜೆಪಿ ನಾಯಕಿಯಾಗಿರುವ ನಟಿ ಖುಷ್ಬು ಸುಂದರ್ ಅವರು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.

ಇದನ್ನು ಓದಿ: ಪಾಕ್ ನೆಲದಲ್ಲಿ ಪಾಕಿಗಳಿಗೇ ಬಯ್ದು ಬಂದ ಬಾಲಿವುಡ್ ಚಿತ್ರ ಸಾಹಿತಿ ಜಾವೇದ್ ಅಖ್ತರ್

ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುಂದರ್ ಅವರು ತಮ್ಮ ನೇಮಕಾತಿಯ ಅಧಿಸೂಚನೆಯನ್ನು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.

.K.Annamalai


ಖುಷ್ಬು ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (K.Annamalai) ಅವರು ಅಭಿನಂದಿಸಿದ್ದಾರೆ, ಅವರ ನೇಮಕವು ಮಹಿಳಾ ಹಕ್ಕುಗಳಿಗಾಗಿ ಅವರ ಅವಿರತ ಅನ್ವೇಷಣೆ ಮತ್ತು ಹೋರಾಟಕ್ಕೆ ಮನ್ನಣೆಯಾಗಿದೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟಿ ಖುಷ್ಬು, ಇಂತಹ ಬಹುದೊಡ್ಡ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ನಾನು ನಮ್ಮ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ (Narendra Modi) ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳು ತಿಳಿಸುತ್ತೇನೆ.

ನಿಮ್ಮ ನಾಯಕತ್ವದಲ್ಲಿ ಚಿಮ್ಮಿ ಬೆಳೆಯುತ್ತಿರುವ ನಾರಿ ಶಕ್ತಿಯನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಪೋಷಿಸಲು ನಾನು ಶ್ರಮಿಸುತ್ತೇನೆ. ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್‌ ಮಾಡಿ ಧನ್ಯವಾದ ತಿಳಿಸಿದ್ದಾರೆ.

ರಾಜಕೀಯಕ್ಕೆ ಕಾಲಿಟ್ಟ ನಟಿ ಖುಷ್ಬು ಅವರು, ಹಲವು ಪಕ್ಷಗಳಲ್ಲಿ ಕೆಲಸ ಮಾಡಿ ಕಡೆಯದಾಗಿ ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು 2021 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು.

ಹಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ನಟಿ ಖುಷ್ಬು ಅವರನ್ನು ಬೆಂಬಲಿಸುತ್ತ ಬಂದಿರುವ ಪಕ್ಷ ಮತ್ತು ಜನಸಾಮಾನ್ಯರು ಇಂದಿಗೂ ಕೂಡ ಖುಷ್ಬು ಅವರಿಗೆ ಹೆಚ್ಚಿನ ಮನ್ನಣೆ ನೀಡಿದ್ದಾರೆ.

Exit mobile version