ಪ್ರಾಣಕ್ಕೇ ಕುತ್ತಾಗ್ತಿದೆ ಮೊಬೈಲ್‌ ಚಟ ; ಈ ಚಟ ಬಿಡಿಸೋದು ಹೇಗೆ?

smartphones

ಇಂದಿನ ಮಕ್ಕಳು ಮೊಬೈಲ್‌ ದಾಸರಾಗುತ್ತಿದ್ದಾರೆ. ಅದ್ರಲ್ಲೂ ಸಾಮಾಜಿಕ ಜಾಲತಾಣದ ವ್ಯಸನಿಗಳಾಗ್ತಿದ್ದಾರೆ. ಸೋಶಿಯಲ್ ಮೀಡಿಯಾದ ಪ್ರಭಾವ ನಮ್ಮ ಮಕ್ಕಳನ್ನು ಅಪಾಯದ ಕೂಪಕ್ಕೆ ತಳ್ಳುತ್ತಿರೋದಂತು ಸತ್ಯ. ಈ ಹೊಸ ಬೆಳವಣಿಗೆ ಪೋಷಕರು ಹಾಗೂ ಮಕ್ಕಳ ನಡುವೆ ಸಂಘರ್ಷಕ್ಕೂ ಕಾರಣ ಆಗ್ತಾ ಇದೆ.

ರಾಜೇಶ್ವರಿ, ನೊಂದ ಹೆತ್ತವರು : ಮಕ್ಕಳ ಹಾಗೂ ಹೆತ್ತವರ ನಡುವೆ ಕಂದಕ ಸೃಷ್ಟಿ ಮಾಡುತ್ತಿರೋ ಈ ಮೊಬೈಲ್‌ ವ್ಯಸನದ ಹೊಸ ಸವಾಲನ್ನು ಎದುರಿಸೋದು ಹೇಗೆ? ಮಕ್ಕಳನ್ನು ಈ ವ್ಯಸನದಿಂದ ದೂರ ಮಾಡೋದು ಹೇಗೆ? ಅನ್ನೋದು ಹೆಚ್ಚಿನ ಎಲ್ಲಾ ಪೋಷಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಒಂದೊಂದಾಗಿಯೇ ನಾವು ಉತ್ತರ ಹುಡುಕೋಣ.

ಮೊಬೈಲ್ ಚಟಕ್ಕೆ ಕಾರಣ ಏನು? ಮೊಬೈಲ್‌ ಬಳಕೆಯಿಂದ ಮಕ್ಕಳ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿವೆ. ಏಕಾಗ್ರತೆಯ ಸಮಸ್ಯೆಯಿಂದ ಪ್ರಾರಂಭವಾಗಿ ಕಣ್ಣಿನ ತೊಂದರೆ, ಬೊಜ್ಜಿನ ಸಮಸ್ಯೆಗಳೆಲ್ಲಾ ಕಾಡುತ್ತಿವೆ. ಈ ಮೊಬೈಲ್ ಸಹವಾಸದಿಂದ ಮಕ್ಕಳು ಸಂಬಂಧವನ್ನೇ ಮರೆಯುತ್ತಿದ್ದಾರೆ. ತಾವಾಯ್ತು, ಮೊಬೈಲ್ ಆಯ್ತು ಅಂತ ಮೂಲೆ ಸೇರ್ತಿದ್ದಾರೆ ಅನ್ನೋದು ಹೆತ್ತವರ ಆರೋಪ.

ಯೋಗೇಶ್‌, ನೊಂದ ಹೆತ್ತವರು ಮಕ್ಕಳ ಮೊಬೈಲ್ ಚಟ ಎಷ್ಟು ಹೆಚ್ಚಿರುತ್ತೆ ಅಂದ್ರೆ ಮೊಬೈಲನ್ನು ಏನಾದ್ರೂ ಕಸಿದುಕೊಳ್ಳೋಕೆ ಮುಂದಾದ್ರೆ ಹುಚ್ಚರಂತೆ ಆಡ್ತಾರೆ. ಮೈಯಲ್ಲಿ ಪ್ರಜ್ಞೆ ಇಲ್ಲದಂತೆ ವರ್ತಿಸಿಸ್ತಾರೆ ಅನ್ನೋದು ಇವರ ದೂರು. ಹಾಗಾದ್ರೆ ಮಕ್ಕಳ ಈ ಮೊಬೈಲ್ ಚಟವನ್ನು ಬಿಡಿಸೋದಾದ್ರೂ ಹೇಗೆ? ಈ ಬಗ್ಗೆ ವೈದ್ಯರು ಏನಂತಾರೆ ಕೇಳೋಣ ಬನ್ನಿ

ಡಾ. ಶ್ರೀಧರ್‌, ಮಾನಸಿಕ ತಜ್ಞರು : ಮಕ್ಕಳು ಈ ಚಟ ಬೆಳೆಸಿಕೊಳ್ಳುವುದರಲ್ಲಿ ಹೆತ್ತವರ ಪಾತ್ರ ತುಂಬಾನೇ ಪ್ರಮುಖವಾಗಿದೆ. ಹಾಗಾಗಿ ಈ ಚಟವನ್ನು ಬಿಡಿಸುವಲ್ಲೂ ಹೆತ್ತವರು ಗಣನೀಯ ಪಾತ್ರ ವಹಿಸಬೇಕು. ಮಕ್ಕಳ ಕಡೆ ಹೆಚ್ಚಿನ ಗಮನ ಕೊಟ್ಟು ಅವರನ್ನು ಬೇರೆ ವಿಚಾರಗಳತ್ತ ಗಮನಸೆಳೆಯುವಂತೆ ಮಾಡಬೇಕು ಅಂತಾರೆ ಮಕ್ಕಳ ಮಾನಸಿಕ ತಜ್ಞರು.


ಡಾ. ಪವಿತ್ರ, ಮಕ್ಕಳ ಮಾನಸಿಕ ತಜ್ಞರು : ಹೆತ್ತವರು ತಮ್ಮ ಅನುಕೂಲಕ್ಕಾಗಿ ಮಕ್ಕಳ ಕೈಗೆ ಮೊಬೈಲ್‌ ಕೊಟ್ಟು ಅವರನ್ನು ಮೊಬೈಲ್‌ ದಾಸರನ್ನಾಗಿಸುವ ಪರಿಪಾಠವನ್ನು ಮೊದಲು ಬಿಡಬೇಕು. ಅಲ್ಲದೆ ಮೊಬೈಲ್‌ನ ಅಪಾಯಗಳನ್ನು ಮಕ್ಕಳಿಗೆ ತಿಳಿ ಹೇಳಿ ಅವುಗಳನ್ನು ಹಿತಮಿತವಾಗಿ ಬಳಸುವಂತೆ ಬುದ್ಧಿ ಹೇಳಬೇಕು. ಅಲ್ಲದೆ ಮಕ್ಕಳನ್ನು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.

Exit mobile version