ಆನ್ಲೈನ್ ಲೋನ್ ಹಿಂಸೆ ತಾಳಲಾರದೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ!

loan

ಆನ್ಲೈನ್ ನಲ್ಲಿ ಸಾಲ ಪಡೆದ ತಪ್ಪಿಗೆ ಲೋನ್ ಆಪ್ ನವರು ವ್ಯಕ್ತಿಗೆ ಮಾನಸಿಕ ಹಿಂಸೆ ನೀಡಿ ಆತನ ಜೀವವನ್ನೇ ಬಲಿಪಡೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಆನ್ಲೈನ್ ಲೋನ್ ಆಪ್ ಗಳ ಹಾವಳಿ ಈ ಹಿಂದೆಯೂ ಅನೇಕ ಜನರ ಜೀವವನ್ನು ಬಲಿಪಡೆದಿದೆ. ಈಗ ಅದೇ ರೀತಿ ಮಾನಸಿಕ ಹಿಂಸೆ ನೀಡುವ ಮೂಲಕ ಮತ್ತೊರ್ವ ವ್ಯಕ್ತಿಯನ್ನು ಬಲಿಪಡೆದಿದೆ. ಈ ಲೋನ್ ಆಪ್ಗಳ ಹಿಂಸೆ ತಾಳಲಾರದೇ ಅಂಬರೀಶ್ ಸಾವಿಗೆ ಶರಣಾಗಿದ್ದಾರೆ. ಹೌದು, ಸಾವಿಗೆ ಶರಣಾದ ಅಂಬರೀಶ್ ಕೆ.ಸಿ ಹಾಸನ ಜಿಲ್ಲೆಯ, ಉದಯಗಿರಿ ಬಡವಾಣೆಯಲ್ಲಿ ಸೆಕ್ಯುರಿಟಿ ಜೀನಿಯಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಅಂಬರೀಶ್ ಅವರು ಆನ್ಲೈನ್ ಆಪ್ ನಲ್ಲಿ ಸಾಲ ಪಡೆದುಕೊಂಡಿದ್ದಾರೆ. ಆನ್ಲೈನ್ ಆಪ್ ನಲ್ಲಿ ಸಾಲ ಪಡೆದಿದ್ದೆ ತಪ್ಪಾಗಿದೆ ನೋಡಿ, ಸಾಲ ಮರುಪಾವತಿ ಮಾಡಲು ಆಪ್ ನ ಸಿಬ್ಬಂದಿಗಳು ಕರೆ ಮಾಡುವ ಮೂಲಕ ಪದೇ ಪದೇ ಹಿಂಸೆ ನೀಡಿದ್ದಾರೆ. ಮರುಪಾವತಿ ಮಾಡಲು ಸಮಯ ಕೇಳಿದರೂ ಕೂಡ ಕೊಡದೆ, ಅಂಬರೀಶ್ ಅವರ ಫೇಸ್‌ಬುಕ್‌ ಖಾತೆಯನ್ನು ಹ್ಯಾಕ್ ಮಾಡಿ ಅವರ ಫೇಸ್‌ಬುಕ್‌ ಸ್ನೇಹಿತರಿಗೆ ಇವರ ಬಗ್ಗೆ ಅವಾಚ್ಯ ಪದಗಳಿಂದ ನಿಂದನೆ ಮಾಡುವುದಲ್ಲದೇ, ಅವರ ಫೋಟೋವನ್ನು ಕೆಟ್ಟದಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ.

ಪ್ರತಿದಿನ ಈ ಹಿಂಸೆಯಿಂದ ಅಂಬರೀಶ್ ಬೇಸತ್ತು ಹೋಗಿದ್ದರು. ಮನವಿ ಮಾಡಿಕೊಂಡರು ಕೇಳದೆ, ದಿನದಿಂದ ದಿನಕ್ಕೆ ತೀವ್ರ ಹಿಂಸೆ ಮುಂದುವರೆಸಿದ ಪರಿಣಾಮ ಅಂಬರೀಶ್ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ವಿಷ ಸೇವಿಸಿದ್ದಾರೆ, ಶೀಘ್ರವೇ ಆಸ್ಪತ್ರೆಗೆ ಕರೆದುಕೊಂಡು ಹೋದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತಂತೆ ಬಡಾವಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ದಿನಗಳಲ್ಲಿ ನೀವು ಕೂಡ ಇಂಥ ಲೋನ್ ಆಪ್ಗಳಿಂದ ಸಾಲ ಪಡೆಯಬೇಡಿ ಎಚ್ಚರಿಕೆ ವಹಿಸಿ!

Exit mobile version