“ಇದು ಇವರ ಸನಾತನ ಧರ್ಮ “ – ಪ್ರಧಾನಿ ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

Karnataka: ಎಥಿಕ್ಸೇ ಇಲ್ಲದ ಎಥಿಕ್ಸ್ ಕಮಿಟಿ (Kishore post against Modi) . ನಾಚಿಕೆಗೇಡು. ಇದು ಇವರ ಸನಾತನ ಧರ್ಮ. ಇದು ಇವರ ಚಾರಿತ್ರ್ಯ.. ಇದು ಇಂದಿನ ವಿಶ್ವಗುರು ಮಹಾ 3

ಭಾರತದ ದುಶ್ಶಾಸನರ ಅಸಲಿ ಮುಖ ಎಂದು ನಟ ಕಿಶೋರ್ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಎಥಿಕ್ಸೇ ಇಲ್ಲದ ಎಥಿಕ್ಸ್ ಕಮಿಟಿ. (Kishore post against Modi) ನಾಚಿಕೆಗೇಡು. ಇದು ಇವರ ಸನಾತನ

ಧರ್ಮ. ಇದು ಇವರ ಚಾರಿತ್ರ್ಯ.. ಇದು ಇಂದಿನ ವಿಶ್ವಗುರು ಮಹಾ ಭಾರತದ ದುಶ್ಶಾಸನರ ಅಸಲಿ ಮುಖ. ಮಣಿಪುರದ ಆದಿವಾಸಿಗಳ ಅತ್ಯಾಚಾರಿಗಳಿಗೆ, ದೆಹಲಿಯಲ್ಲಿ ಕುಸ್ತಿಪಟುಗಳನ್ನು ಬೀದಿಯಲ್ಲಿ

ಎಳೆದು ತುಳಿದಾಡಿದ ಪೊಲೀಸರಿಗೆ, ಅವರ ಮೈಮುಟ್ಟಿದ ರಾಜಕಾರಿಣಿಗೆ, ಗುಜರಾತಿನ ಬಿಲ್ಕಿಸ್ (Bilkis) ಬಾನುವಿನ, ಹಾಥರಸ್ ನ ದಲಿತ ಹೆಣ್ಣುಮಕ್ಕಳ ಅತ್ಯಾಚಾರಿ ಕೊಲೆಗಡುಕರಿಗೆಲ್ಲ

ಇವರೇ ಸ್ಪೂರ್ತಿ, ಇವರೇ ಆದರ್ಶ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೂ ಮುನ್ನ ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಃ. ತಮ್ಮ ಕಲ್ಲಿದ್ದಲು ಕಳ್ಳತನ ಶೇರು ಪೇಟೆ ಹಗರಣಗಳನ್ನು, ಅದರಿಂದ ನಡೆದ ಮಹಾನ್ ದೇಶದ್ರೋಹವನ್ನು ಬಯಲಿಗೆಳೆದದ್ದಕ್ಕೆ

ಒಂದು ಹೆಣ್ಣಿನ ಚಾರಿತ್ರ್ಯವಧೆಗೆ ನಿಂತಿರುವ ಕಲ್ಲಿದ್ದಲು ಕಳ್ಳರು ಮತ್ತವರ ಬಳಗ, ಇವರ ಬೂಟಾಟಿಕೆಯ ಹೊಲಸು ಮನಸ್ಥಿತಿಯಲ್ಲಿ ಯಾವ ನಾರಿಯರ ಶಕ್ತಿ ಅಭಿವಂದನೆ ಮಾಡುವರು? ಒಂದು ಹೆಣ್ಣಿನ ವೈಯುಕ್ತಿಕ

ಜೀವನಕ್ಕೆ ತಲೆ ಹಾಕುವ ಕೊಳಕು ಬುದ್ದಿ ಯಾವ ಸನಾತನ ಧರ್ಮ ಇವರಿಗೆ ಹೇಳಿಕೊಟ್ಟಿತು ?? ಛೀಮಾರಿಗೂ ಯೋಗ್ಯವಲ್ಲದ ರಾಜ ಮತ್ತವನ ಕೂಲಿ ಮಾಧ್ಯಮ.. ಧಿಕ್ಕಾರವಿರಲಿ ಈ ನೀಚ ಮನಸ್ಥಿತಿಗೆ

ಎಂದು ಟೀಕಿಸಿದ್ದರು.

ಟಿಎಂಸಿ (TMC) ಸಂಸದೆ ಮಹುವಾ ಮೊಹಿತ್ರಾ (Mahua Mohitra) ಅವರು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಅವರನ್ನು ಸಂಸತ್ತಿನ ಎಥಿಕ್ಸ್

ಕಮಿಟಿ ಮುಂದೆ ಹಾಜರಾಗಲು ಸೂಚನೆ ನೀಡಲಾಗಿತ್ತು. ಈ ಪ್ರಕರಣ ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನು ಓದಿ: ಛತ್ತೀಸ್‌ಘಡ್ ಮತಗಟ್ಟೆ ಮೇಲೆ ಬಾಂಬ್ ದಾಳಿ, ಓರ್ವ ಯೋಧನಿಗೆ ಗಾಯ

Exit mobile version