ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ, ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ – ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

ಕೇವಲ ಮತ ಮತ್ತು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ, ಇಂದು ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ (kishore vs modi) ನೀವು ಈಗಲಾದರೂ ನಿಮ್ಮ ಬಾಯಿ ತೆರೆದು ಈ

ಮಹಿಳೆಯರಲ್ಲಿ ಕ್ಷಮೆಯಾಚಿಸದಿದ್ದರೆ ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ ಎಂದು ಕನ್ನಡದ ನಟ ಕಿಶೋರ್ (Kishore) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ದ

ತೀವ್ರ ವಾಗ್ದಾಳಿ (kishore vs modi) ನಡೆಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಿಮ್ಮಿಂದ ನಾವು ಏನನ್ನಾದರೂ ನಿರೀಕ್ಷಿಸಲು ಹೇಗೆ ಸಾಧ್ಯ? ಮಹಿಳಾ ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ಪ್ರಕರಣದ

ಆರೋಪಿಗಳನ್ನು ಸದ್ದಿಲ್ಲದೆ ಬೆಂಬಲಿಸಿದವರು ನೀವೇ ಅಲ್ಲವೇ? ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬಿಡುಗಡೆ ಮಾಡಿ ಸಂಭ್ರಮಿಸಿದವರು ನೀವೇ ಅಲ್ಲವೇ? ಹಾತ್ರಸ್ ನ ದಲಿತ ಹೆಣ್ಣುಮಕ್ಕಳ

ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ಮುಚ್ಚಿ ಮುಗಿಸಿದವರು ನೀವೇ ಅಲ್ಲವೇ???? ನಿಮ್ಮ ಘೋಷಣೆಗಳನ್ನು ನಿಲ್ಲಿಸಿ ಮೊದಲು ಕೆಲಸ ಮಾಡಿ.. ನಿಮ್ಮ ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ

ಇದನ್ನು ಓದಿ: ಮಣಿಪುರ ಕ್ರೌರ್ಯಕ್ಕೆ ಕಾರಣ ಏನು? : ಸುಳ್ಳನ್ನು ನಂಬಿ ಪ್ರತೀಕಾರ ತೆಗೆದುಕೊಳ್ಳಲು ಹೋಗಿ ದುಷ್ಕೃತ್ಯ…. ಇಲ್ಲಿದೆ ಅಸಲಿ ಕಾರಣ..

ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ, ನಮ್ಮ ಡಿಎನ್ಎಯಲ್ಲಿ (DNA) ಇರುವುದು ಪ್ರಜಾಪ್ರಭುತ್ವವಲ್ಲ ಬೂಟಾಟಿಕೆ. ಆದಿವಾಸಿಯನ್ನು ರಾಷ್ಟ್ರದ ಅಧ್ಯಕ್ಷರನ್ನಾಗಿಸುವ ನೆಪದಲ್ಲಿ ಎದೆಬಡಿದುಕೊಳ್ಳುವುದು ಒಂದೆಡೆಯಾದರೆ,

ಇನ್ನೊಂದೆಡೆ ಅದೇ ಆದಿವಾಸಿಯನ್ನು ಹೀನಾಯವಾಗಿ ಅವಮಾನಿಸುವ ಅದೇ ಪಕ್ಷದ ಸದಸ್ಯ. ನಮ್ಮ ಡಿಎನ್ಎಯಲ್ಲಿ ಇರುವುದು ಪ್ರಜಾಪ್ರಭುತ್ವವಲ್ಲ, ಜಾತಿವಾದಿ ಸಮಾಜವು ಬಹುಜನರ ಡಿಎನ್ಎಗೆ

ಬಲವಂತವಾಗಿ ತುರುಕಿರುವ ಕೀಳರಿಮೆ.. ಅದರಿಂದಲೇ ಇಂಥ ಹೀನಾಯ ದಬ್ಬಾಳಿಕೆ ಮತ್ತು ಅವಮಾನವನ್ನೂ ಪ್ರತಿಭಟನೆಯಿಲ್ಲದೆ ತಡೆದುಕೊಳ್ಳಲು ನಾವು ಸಮರ್ಥರಾಗಿದ್ದೇವೆ.

ಇಲ್ಲಿ ಬಲಿಪಶುವಾದವನು ಅವಮಾನದಿಂದ ಅವಿತುಕೊಳ್ಳುತ್ತಾನೆ ಆದರೆ ಅಪರಾಧಿ, ಪೋಲೀಸರು ಅವನನ್ನು ಮುಟ್ಟಲೂ ಹಿಂದೆಮುಂದೆ ನೋಡುತ್ತಿರುವಂತೆಯೇ , ಈ ದೇಶದ ಧರ್ಮಾಂಧ ರಾಜಕೀಯ ಮತ್ತು

ಜಾತಿವಾದಿ ವ್ಯವಸ್ಥೆ ಅವನ ಡಿ ಎನ್ ಎ ಗೆ ತುರುಕಿದ ತನ್ನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯದ ಮೇಲರಿಮೆಯ ಶಕ್ತಿಯನ್ನು ಪ್ರದರ್ಶಿಸುತ್ತಾ ರಾಜನಂತೆ ಠಾಣೆಗೆ ನಡೆದು ಹೋಗುತ್ತಾನೆ. ದೇಶದ

ಕಾನೂನು ಅಥವಾ ಸಂವಿಧಾನವಲ್ಲ , ತಾರತಮ್ಯದ ಧರ್ಮಾಂಧ ಬುಲ್ಡೊಜರ್ ಆಳ್ವಿಕೆ ನಡೆಸುವ ನಾಡಿನಲ್ಲಿ ಈ ಬುಲ್ಡೊಜರ್ (Bulldozer) ನಮ್ಮ ಡಿಎನ್ಎ ಯನ್ನು ಬದಲಾಯಿಸಬಲ್ಲುದೇ? ಎಂದು ಪ್ರಶ್ನಿಸಿದ್ದಾರೆ.

Exit mobile version