Cockroach : ನಿಮ್ಮ ಕಿವಿಗಳು ಜಿರಳೆಗಳಿಗೆ ಸ್ವರ್ಗ ; ಕಿವಿಯಿಂದ ಬರುವ ವಾಸನೆ ಜಿರಳೆಗಳಿಗೆ ಬಹಳ ಪ್ರಿಯವಂತೆ!

Cockroach

Fact : ಜಿರಳೆಯ (Cockroach) ಹೆಸರು ಕೇಳಿದರೆ ಸಾಕು ಅಸಹ್ಯ ಎನ್ನುವ ಭಾವನೆ ಮೂಡುತ್ತದೆ. ಕೆಲವರಂತೂ ಜಿರಳೆ ಕಂಡೊಡನೆ ಸಾಯಿಸಲು ಪೊರಕೆಯೊ, ಕಡ್ಡಿಯೊ ಎತ್ತಿಕೊಳ್ಳುತ್ತಾರೆ.

ಆಹಾರ ಪದಾರ್ಥಗಳನ್ನು ಮಾತ್ರವಲ್ಲ, ಮನುಷ್ಯರ ಆರೋಗ್ಯವನ್ನು ಹಾಳು ಮಾಡುವ ಈ ಜಿರಳೆಗಳ ಅಸ್ತಿತ್ವವು ಇತಿಹಾಸಪೂರ್ವ ಯುಗಕ್ಕೆ ಸೇರಿದ್ದು.

ಸುಮಾರು 70 ದಶಲಕ್ಷ ವರ್ಷಗಳ ಹಿಂದೆ, ಪರಮಾಣು ಸ್ಫೋಟದಿಂದ ಬದುಕುಳಿದ ಏಕೈಕ ಜೀವಿ ಜಿರಳೆ ಎನ್ನುವುದು ಆಶ್ಚರ್ಯಕರ ಸಂಗತಿ. ಇಂತಹ ಜಿರಳೆಗಳು,

ಸಾಮಾನ್ಯವಾಗಿ ನಾವು ತಿನ್ನುವ ಆಹಾರದ ಹೊರತಾಗಿ, ಸತ್ತ ಸಸ್ಯ, ಪ್ರಾಣಿಗಳು, ಮಲ ವಸ್ತು, ಅಂಟು, ಸಾಬೂನು, ಕಾಗದ, ಚರ್ಮ ಮತ್ತು ಕೂದಲಿನ ಎಳೆಗಳನ್ನೂ ಸಹ ತಿನ್ನುತ್ತವೆ.

ರಾತ್ರಿ ವೇಳೆ ಜಿರಳೆಗಳು ತೆವಳುವಾಗ, ತೆರೆದಿಟ್ಟ ಆಹಾರ ಪದಾರ್ಥಗಳ ಮೇಲೆ ಮಲವಿಸರ್ಜನೆ ಮಾಡುವ ಮೂಲಕ ಕಲುಷಿತಗೊಳಿಸುತ್ತವೆ.

ಜಿರಳೆಗಳು ಇರದ ಮನೆ ಜಗತ್ತಿನಲ್ಲಿರಲು ಸಾಧ್ಯವಿಲ್ಲ. ನಿಮ್ಮ ಮನೆಯ ಸಿಂಕ್‌ನಲ್ಲಿ, ಪೈಪ್ ರಂಧ್ರದ ಕೆಳಗೆ ಕಸದ ರಾಶಿಯ ಮೇಲೆ ಅಥವಾ

ನಿಮ್ಮ ರೆಫ್ರಿಜರೇಟರ್‌ನ ಮೂಲೆಗಳಲ್ಲಿ ಶಾಂತಿಯುತವಾಗಿ ವಿಶ್ರಾಂತಿ ಪಡೆಯುವ ಜಿರಳೆಗಳು, ಹಗಲಿಗಿಂತ ರಾತ್ರಿ ವೇಳೆ ತಮ್ಮ ಪರಾಕ್ರಮವನ್ನು ತೋರಿಸುತ್ತವೆ.

ಇದನ್ನೂ ಓದಿ : https://vijayatimes.com/ranveer-singh-about-his-nude-photoshoot/


ಆದರೆ, ಗಂಭೀರವಾದ ವಿಷಯವೆಂದರೆ, ಈ ಜಿರಳೆಗಳು ಮುಜುಗರವನ್ನು ಉಂಟು ಮಾಡುವುದಲ್ಲದೆ, ಸದ್ದಿಲ್ಲದೆ ನಿಮ್ಮ ಕುಟುಂಬದವರ ಆರೋಗ್ಯ ಕ್ಷೀಣಿಸುತ್ತಿರುವುದಕ್ಕೂ ಆತಂಕಕ್ಕೆ ಕಾರಣವಾಗಿದೆ.

ನಿಜ ಹೇಳಬೇಕೆಂದರೆ ಈ ಜಿರಳೆಗಳು ಲಕ್ಷಾಂತರ ಬ್ಯಾಕ್ಟೀರಿಯಾ ಮತ್ತು ಸಾಂಕ್ರಾಮಿಕ ರೋಗಗಳನ್ನು ಹರಡುತ್ತದೆ. ಇದರಿಂದಲೇ ನಿಮಗೆ ಅತಿಸಾರ, ಫುಡ್ ಪಾಯಿಸನ್ ನಂತಹ ರೋಗಗಳು ಬರುವುದು.


ಜಿರಳೆಗಳು ನಿಮ್ಮ ಮನೆಯ ಮೇಲೆ ಮಾತ್ರವಲ್ಲ, ನಿಮ್ಮ ದೇಹದ ಭಾಗಗಳ ಮೇಲೂ ಆಕ್ರಮಣ ಮಾಡಬಹುದು. ನಿದ್ದೆ ಮಾಡುವಾಗ ಕಿವಿ ಮತ್ತು ಮೂಗಿಗೆ ಜಿರಳೆ ಪ್ರವೇಶಿಸಿದ ಹಲವಾರು ಪ್ರಕರಣಗಳಿವೆ.

ನೀವು ಗಾಢ ನಿದ್ರೆಯಲ್ಲಿದ್ದರೆ ಸಣ್ಣ ಜಿರಳೆಗಳು ದೇಹದ ಕಕ್ಷೆಗಳನ್ನು ಸುಲಭವಾಗಿ ಪ್ರವೇಶಿಸಬಹುದು.


ಜಿರಳೆಯನ್ನು ಹೊಡೆದೋಡಿಸಲು ಔಷಧಿಗಳನ್ನು ಕಂಡು ಹಿಡಿದ ನಂತರ ಫುಡ್ ಪಾಯಿಸನ್, ಸಾಂಕ್ರಮಿಕ ಕಾಯಿಲೆಗಳಂತಹ ಪ್ರಕರಣಗಳು ಹಠಾತ್ತನೆ ಇಳಿದಿರುವುದು ಕಂಡುಬಂದಿದೆ. ಜಿರಳೆಯು ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾಗೆ ನೆಲೆಯಾಗಿದ್ದು, ಇದು ಟೈಫಾಯಿಡ್ ಮತ್ತು ಆಹಾರ ವಿಷವಾಗಲು ಕಾರಣವಾಗಿದೆ.


ಜಿರಳೆಯ ಕಾಟದಿಂದ ಮುಕ್ತಿ ಸಿಗಬೇಕೆಂದರೆ ಮೊದಲು ನಿಮ್ಮ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳಿ. ಇಡೀ ಮನೆಯನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿದರೆ ಒಳ್ಳೆಯದು. ನೀವು ರಾತ್ರಿ ಮಲಗುವ ಮೊದಲು ಸಿಂಕ್ ಮತ್ತು ಅಡುಗೆ ಮನೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ನಿಮ್ಮ ಅಡುಗೆ ಮನೆಯಲ್ಲಿರುವ ಡಸ್ಟ್‌ಬಿನ್ ಅನ್ನು ಆಗಾಗ ಖಾಲಿ ಮಾಡಿ, ಅದನ್ನು ಯಾವಾಗಲೂ ಮುಚ್ಚಿಡಿ.

https://youtu.be/8J5dV92RbgI COVER STORY PROMO ಲೋನ್ ಮಾಫಿಯಾ !

ಕಸದ ರಾಶಿ ಇದ್ದರೆ ಜಿರಳೆಗಳಿಗೆ ಮುಕ್ತ ಆಹ್ವಾನ ಕೊಟ್ಟಂತೆ. ಜಿರಳೆ ಔಷಧಗಳನ್ನು ತಂದಿಟ್ಟುಕೊಳ್ಳಿ. ಇದರಿಂದ ನೀವು ಅವುಗಳನ್ನು ನೋಡಿದ ತಕ್ಷಣ ಕೊಲ್ಲಬಹುದು. ನಿಮ್ಮ ಮನೆಯಲ್ಲಿ ಅಡಗಿರುವ ಜಿರಳೆಗಳನ್ನು ಓಡಿಸಲು ನೀವು ಮಾರುಕಟ್ಟೆಯಲ್ಲಿ ಸಿಗುವ ಜಿರಳೆ ಬೈಟ್ಸ್ ಮತ್ತು ಇತರ ಉತ್ಪನ್ನಗಳನ್ನು ಸಹ ಬಳಸಬಹುದು.

ಬಿರುಕುಗಳ ಬಳಿ ಬೋರಿಕ್ ಆಮ್ಲವನ್ನು ಸಿಂಪಡಿಸಿ. ಜಿರಲೆಗಳು ಅಲ್ಲಲ್ಲಿ ಶಾಶ್ವತವಾಗಿ ಮನೆ ಮಾಡದಂತೆ ತಡೆಯಲು ಗೋಡೆಗಳಲ್ಲಿ ಇರುವ ಸಣ್ಣ ಬಿರುಕುಗಳು ಮತ್ತು ರಂಧ್ರಗಳನ್ನು ಮುಚ್ಚಿ.

Exit mobile version