ಕೊಚ್ಚಿ-ಮಂಗಳೂರು ನೈರ್ಸಗಿಕ ಅನಿಲ ಪೈಪ್ ಲೈನ್‌ಗೆ ಚಾಲನೆ ನೀಡಲಿದ್ದಾರೆ ಮೋದಿ

ಕೊಚ್ಚಿ, ಜ. 2:  2009ರಲ್ಲಿ ಪ್ರಾರಂಭಗೊಂಡಿದ್ದ ಮಂಗಳೂರು ಕೊಚ್ಚಿ ನಡುವಣ ಕೈಗೊಂಡ ಈ ಪೈಪ್‌ಲೈನ್‌ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದ್ದು,ಜನವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಕೊಚ್ಚಿ- ಮಂಗಳೂರು ನಡುವಣ ನೈಸರ್ಗಿಕ ಅನಿಲ ಪೈಪ್ ಲೈನ್ ನ್ನು ವರ್ಚುಯಲ್ ನಲ್ಲಿ ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಗೇಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಜೈನ್ ಶನಿವಾರ ತಿಳಿಸಿದ್ದಾರೆ. ಕೈಗಾರಿಕಾ ಮತ್ತು ವಸತಿ ಗ್ರಾಹಕರಿಗೆ ಶುದ್ಧ ಮತ್ತು ಅಗ್ಗದ ದರದಲ್ಲಿ ಅನಿಲ ಒದಗಿಸಿ ಅನಿಲ ಆರ್ಥಿಕತೆಗೆ ಪೈಪ್ ಲೈನ್ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಕರ್ನಾಟಕ-ಕೇರಳ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ವರ್ಚುಯಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮನೋಜ್ ಜೈನ್ ತಿಳಿಸಿದರು.

450 ಕಿಲೋ ಮೀಟರ್ ಉದ್ದದ ಪೈಪ್ ಲೈನ್ ಪ್ರತಿದಿನ 12 ಮಿಲಿಯನ್ ಮೆಟ್ರಿಕ್ ಸ್ಟಾಂಡರ್ಡ್ ಕ್ಯೂಬಿಕ್ ಮೆಟ್ರಿಸ್ ನೈಸರ್ಗಿಕ ಅನಿಲನ್ನು ಕೊಚ್ಚಿಯ ದ್ರವೀಕೃತ ನೈಸರ್ಗಿಕ ಅನಿಲ ಗ್ಯಾಸಿಫಿಕೇಶನ್ ಟರ್ಮಿನಲ್ ನಿಂದ ಮಂಗಳೂರಿಗೆ ಸಾಗಿಸುವ ಸಾಮರ್ಥ್ಯ ಹೊಂದಿದೆ. ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲ್ಲಪುರಂ, ಕೊಝಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಮುಖಾಂತರ ಸಾಗುವ ಈ ಪೈಪ್ ಲೈನ್ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕೊನೆಗೊಳ್ಳುತ್ತಿದೆ.

ಸುಮಾರು 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಈ ಪೈಪ್ ಲೈನ್ ನಿಂದ ಮನೆಗಳು, ವಾಣಿಜ್ಯ ಘಟಕಗಳಿಗೆ ಅಡಚಣೆಯಿಲ್ಲದೆ ಪರಿಸರ ಸ್ನೇಹಿ ನೈಸರ್ಗಿಕ ಅನಿಲವನ್ನು ಪೂರೈಸಲಾಗುತ್ತದೆ ಅಲ್ಲದೇ, ಸಾರಿಗೆ ವಲಯಕ್ಕೆ ಕೇರಳ ರಾಜ್ಯಾದ್ಯಂತ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್ ಜಿ) ಪೂರೈಸಲಾಗುವುದು ಎಂದು ಗೇಲ್ ನಿರ್ದೇಶಕ ಎಂ.ವಿ. ಅಯ್ಯರ್ ತಿಳಿಸಿದ್ದಾರೆ.

Exit mobile version