500 ನೇ ಅಂತಾರಾಷ್ಟ್ರೀಯ ಪಂದ್ಯವಾಡಿ ಹೊಸ ದಾಖಲೆ ಬರೆಯಲಿದ್ದಾರೆ ಕಿಂಗ್ ಕೊಹ್ಲಿ !

Virat Kohli : ಪ್ರಸ್ತುತ ಟೀಂ ಇಂಡಿಯಾ (Team India), ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ವೆಸ್ಟ್ ಇಂಡೀಸ್ (Kohli international match record) ವಿರುದ್ಧ ಆಡುತ್ತಿದೆ. ಅಷ್ಟೇ ಅಲ್ಲದೆ

ಈಗಾಗಲೇ 141 ರನ್ ಗಳ ಅಂತರದಲ್ಲಿ ಡೊಮಿನಿಕಾದಲ್ಲಿ(Dominica) ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ರೋಹಿತ್ ಪಡೆ ಎರಡನೇ

ಟೆಸ್ಟ್ ಸಹ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ (Kohli international match record) ತವಕದಲ್ಲಿ ಇದೆ.

ಜುಲೈ 20 ರಂದು ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ (Queens Park Oval) ಎರಡನೇ ಟೆಸ್ಟ್ ಪಂದ್ಯ ಇದೀಗ ಉಭಯ ತಂಡಗಳ ನಡುವೆ ಆರಂಭವಾಗಲಿದೆ. ಟೀಂ ಇಂಡಿಯಾದ ಮಾಜಿ ನಾಯಕ ಕಿಂಗ್

ಇದನ್ನು ಓದಿ: 2 ತಿಂಗಳಲ್ಲಿ ರಾಜ್ಯದಲ್ಲಿ 42 ರೈತರ ಆತ್ಮಹತ್ಯೆ: ಜೀವ ಹಿಂಡುತ್ತಿದೆ ಸಾಲ ಬಾಧೆ !

ಕೊಹ್ಲಿ(Virat Kohli) ಇದೇ ಪಂದ್ಯದಲ್ಲಿ ಹೊಸ ದಾಖಲೆಯೊಂದನ್ನು ಬರೆಯುವ ಹೊಸ್ತಿಲಿನಲ್ಲಿದ್ದಾರೆ.

ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ವಾಸ್ತವವಾಗಿ ಇಲ್ಲಿ ನಡೆಯುವ ಪಂದ್ಯವು ಕಿಂಗ್ ಕೊಹ್ಲಿ ವೃತ್ತಿ ಬದುಕಿನ 500 ನೇ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ.

ಈವರೆಗೆ ಕೆಲವೇ ಕೆಲವು ಆಟಗಾರರು 500 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ ಇದೀಗ ಕೆಲವೇ ಕೆಲವು ಆಟಗಾರರಲ್ಲಿ ಕಿಂಗ್ ಕೊಹ್ಲಿ ಕೂಡ ಒಬ್ಬರಾಗಲಿದ್ದಾರೆ.

ಕಿಂಗ್ ಕೊಹ್ಲಿ ಇದುವರೆಗೂ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಕಣಕ್ಕಿಳಿದಿದ್ದಾರೆ. ಇದುವರೆಗೆ ಕೊಹ್ಲಿ 274 ಏಕದಿನ, 110 ಟೆಸ್ಟ್, ಹಾಗೂ 115 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.

ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ 500 ಪಂದ್ಯಗಳನ್ನಾಡಿದ ಅಮೋಘ ಸಾಧನೆಯನ್ನು ಬರೆಯಲಿದ್ದಾರೆ ಕೊಹ್ಲಿ. ಅಷ್ಟೇ ಅಲ್ಲದೆ ಇದುವರೆಗೂ ಅತಿ ಹೆಚ್ಚು

ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆಯಲ್ಲಿದ್ದಾರೆ ಎಂಬುದು ವಿರಾಟ್ ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.

ಹಾಗೆಯೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಟೀಂ ಇಂಡಿಯಾ ಪರ ಆಡಿದ 4ನೇ ಆಟಗಾರ ಎಂಬ ಖ್ಯಾತಿಗೂ ಕೊಹ್ಲಿ ಭಾಜನರಾಗಲಿದ್ದಾರೆ. ಇನ್ನು ಭಾರತದ ಉಳಿದ ಮೂವರು

ಕೊಹ್ಲಿಗೂ ಮುನ್ನ ಈ ಸಾಧನೆ ಮಾಡಿದ ಬ್ಯಾಟರ್ಸ್ ಗಳು(Batters) ಯಾರು ಎಂಬುದನ್ನು ನೋಡುವುದಾದರೆ.

ಸಚಿನ್ ತೆಂಡೂಲ್ಕರ್ 664 ಪಂದ್ಯ

ಎಂಎಸ್ ಧೋನಿ 538 ಪಂದ್ಯ

ರಾಹುಲ್ ದ್ರಾವಿಡ್ 509 ಪಂದ್ಯ

ರಶ್ಮಿತಾ ಅನೀಶ್

Exit mobile version