RTO ಖತರ್ನಾಕ್ ದಂಧೆ ! ಕದ್ದ ಅಥವಾ ಗುಜರಿ ಹಾಕಬೇಕಾದ ಗಾಡಿಗಳು ಹೊಸ ಮಾಡೆಲ್‌ ಆಗಿ ರಿಜಿಸ್ಟ್ರೇಷನ್‌

ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡ ಬಯಲು ಮಾಡ್ತಿದೆ ಆರ್‌ಟಿಓದ (Kolar RTO scam) ಮತ್ತೊಂದು ಕರ್ಮಕಾಂಡ. ನಮ್ಮ ರಾಜ್ಯದ ಆರ್‌ಟಿಓ ಕಚೇರಿಗಳು ಅಕ್ರಮಗಳ ಅಡ್ಡಗಳಾಗಿವೆ.

ಇಲ್ಲಿನ ಅಧಿಕಾರಿಗಳು ಬರೀ ಭ್ರಷ್ಟರಲ್ಲ, ಕಡು ಭ್ರಷ್ಟರಾಗಿದ್ದಾರೆ. ಲಂಚಕ್ಕಾಗಿ ದೇಶವನ್ನೇ ಮಾರಲು, ಯಾರ ಪ್ರಾಣವನ್ನೂ ಬಲಿ ಕೊಡಲು ಹೇಸದ ದುಷ್ಟರಾಗಿದ್ದಾರೆ. ಇದಕ್ಕೆ ಕೋಲಾರ ಆರ್‌ಟಿಓದಲ್ಲಿ

ನಡೀತಿರೋ ಕರ್ಮಕಾಂಡಗಳೇ ಸಾಕ್ಷಿ. ಕೋಲಾರ (Kolar) ಆರ್‌ಟಿಓದಲ್ಲಿ ನಡೀತಿರೋ ಭಯಾನಕ ದಂಧೆಗಳ ಬಗ್ಗೆ ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡಕ್ಕೆ ಪಕ್ಕಾ ದಾಖಲೆಗಳು

ಲಭ್ಯವಾದವು. ಆ ದಾಖಲೆಗಳನ್ನು ನೋಡಿ ನಾವು ಬೆಚ್ಚಿ ಬಿದ್ದೆವು. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಾವು ಫೀಲ್ಡ್‌ಗಿಳಿದು ರಹಸ್ಯ ಕಾರ್ಯಾಚರಣೆ ಮಾಡಿದೆವು.


ಬಯಲಾಯ್ತು RTO ಭಯಾನಕ ಸತ್ಯ

ಹೌದು ಇದೊಂದು ಭಯಾನಕ ದಂಧೆ. ಇದರ ಮುಖ್ಯ ಕೇಂದ್ರ ಸ್ಥಾನ ಕೋಲಾರದ ಆರ್‌ಟಿಓ ಕಚೇರಿ ಮತ್ತು ಹೊಸಕೋಟೆಯಲ್ಲಿರು (Hosakote) ಈ ಗ್ಯಾರೇಜ್‌. ಈ ದಂಧೆಯ ಮುಖ್ಯ ಕಿಂಗ್ ಪಿನ್‌ಗಳು

ಆರ್‌.ಟಿ.ಓ ಅಧಿಕಾರಿ ಎ.ಬಿ ಯೋಮಕೇಶಪ್ಪ, ಪ್ರಥಮ ದರ್ಜೆ ಸಹಾಯಕ ಜೆ.ವಿ ಶ್ರೀನಿವಾಸ್‌ ಮತ್ತು ಅಧೀಕ್ಷಕ ದೇವರಾಜ್ ಹಾಗೂ ಗ್ಯಾರೇಜ್ ಮಾಲೀಕ ವೇಣು ಗೋಪಾಲ ರೆಡ್ಡಿ. ಇವರೆಲ್ಲಾ ಸೇರಿ ಏನ್ಮಾಡ್ತಾರೆ ಗೊತ್ತಾ?

ಸುಮಾರು 15 ವರ್ಷ ಮೇಲ್ಪಟ್ಟ, ಗುಜರಿ ಹಾಕಬೇಕಾದ ವಾಹನಳು ಅಥವಾ ಅಂತರ ರಾಜ್ಯಗಳಲ್ಲಿ ಕಳ್ಳತನವಾದ ವಾಹನಗಳಿಗೆ Chassis ಮತ್ತು Engine ನಂಬರುಗಳನ್ನು ಬದಲಾಯಿಸ್ತಾರೆ. ಆ ನಂತ್ರ ಅರುಣಾಚಲ ಪ್ರದೇಶ

(Arunachal Pradesh) ಮತ್ತು ನಾಗಲ್ಯಾಂಡ್‌ ರಾಜ್ಯಗಳ ಆರ್‌.ಟಿ.ಓ ಕಚೇರಿಗಳಲ್ಲಿ ಇತ್ತೀಚೆಗಷ್ಟೇ ಅಂದ್ರೆ 2-3 ವರ್ಷಗಳ ಹಿಂದೆ ನೋಂದಣಿ ಆದಂತೆ ಆ ವಾಹನಗಳ ನಕಲಿ ದಾಖಲಾತಿಗಳನ್ನು ಸೃಷ್ಟಿಸ್ತಾರೆ.

ಆ ಬಳಿಕ ಆ ನಕಲಿ ದಾಖಲೆಗಳನ್ನು ವಾಹನ್‌ -4 ತಂತ್ರಾಂಶದಲ್ಲಿ ನಮೂದಿಸ್ತಾರೆ. ಆಮೇಲೆ ಕರ್ನಾಟಕ ರಾಜ್ಯದ ಕೋಲಾರ ಆರ್‌.ಟಿ.ಓ ಕಚೇರಿಗೆ ಎನ್‌.ಓ.ಸಿ ಪಡೆದುಕೊಂಡು ಅವುಗಳನ್ನು ಶಾಲಾ ವಾಹನಗಳನ್ನಾಗಿ,

ಗೂಡ್ಸ್‌ ಲಾರಿ, ಟಿಪ್ಪರ್‌ಗಳಾಗಿ ಪರಿರ್ತಿಸಿ ಕರ್ನಾಟಕದ ಮರುನೋಂದಣಿ ಸಂಖ್ಯೆಯನ್ನು ಪಡೆದು ನೋಂದಣಿ ಮಾಡ್ತಾರೆ. ಇದಕ್ಕೆಲ್ಲಾ ನಮಗೆ ಪಕ್ಕಾ ದಾಖಲೆಗಳು ಸಿಕ್ಕಿವೆ.


ಕದ್ದ ಮತ್ತು ಗುಜರಿ ಗಾಡಿಗಳು ಹೊಸ ರೂಪಕ್ಕೆ ಬರೋದೇ ಹೊಸಕೋಟೆ ಟೋಲ್ ಬಳಿ ಇರೋ ಒಂದು ಗ್ಯಾರೇಜ್‌ನಲ್ಲಿ (Garage). ಈ ಗ್ಯಾರೇಜ್‌ ಮಾಲೀಕನ ಹೆಸರೇ ವೇಣು ಗೋಪಾಲ ರೆಡ್ಡಿ. ಸುಮಾರು

5 ಎಕರೆ ಜಮೀನಿನಲ್ಲಿ 5 ವರ್ಷದಿಂದ ಗ್ಯಾರೇಜ್ ನಡೆಸ್ತಿರುವ ಇವನು ಮಾಡ್ತಿರೋದೇ ಅಕ್ರಮ ಕೆಲಸ. ಗುಜರಿಗೆ ಹಾಕ್ಬೇಕಾದ ಹಳೇ ಗಾಡಿಗಳು, ಇಲ್ಲಿ ಕೆಲವೇ ದಿನಗಳಲ್ಲಿ ಹೊಸ ರೂಪ, ಹೊಸ ಮಾಡೆಲ್‌ಗಳಾಗಿ,

ಹೊಸ ದಾಖಲೆಯೊಂದಿಗೆ ರೋಡಿಗಿಳಿತವೆ (Kolar RTO scam) ಗೊತ್ತಾ?


6 ತಿಂಗಳಲ್ಲಿ 2000 ವಾಹನಗಳು ನೋಂದಣಿ ! ಚಾಸ್ಸಿ ನಂಬರ್‌ಗಳೇ ಚೇಂಜ್‌: ಇಲ್ಲಿ ಹಳೆ ಚಾಸ್ಸಿ ನಂಬರ್‌ಗಳನ್ನು ತೆಗೆದು ತಮಗೆ ಬೇಕಾದ ಚಾಸ್ಸಿಯನ್ನು ಫಿಕ್ಸ್‌ ಮಾಡ್ತಾರೆ. ಅದಕ್ಕೆ ಕೋಲಾರ

ಆರ್‌ಟಿಓದವರು ಸಂಪೂರ್ಣ ಸಹಕಾರ ಮಾಡ್ತಾರೆ. ಹಾಗಾಗಿಯೇ ಆರು ತಿಂಗಳಲ್ಲಿ ಇಲ್ಲಿ ಅರುಣಾಚಲ ಪ್ರದೇಶದಿಂದ ಬಂದ ನಕಲಿ ದಾಖಲೆಯ 2000 ಗಾಡಿಗಳು ನೋಂದಣಿ ಆಗಿವೆ.


ಒಂದೇ ಶಾಲೆಗೆ 125 ಗಾಡಿ ರಿಜಿಸ್ಟ್ರೇಷನ್‌

ಇನ್ನೊಂದು ಬೆಚ್ಚಿ ಬೀಳಿಸೋ ಅಂಶ ಅಂದ್ರೆ ಎಸ್‌ಸಿಟಿ ಕಾಲೇಜಿನ ಹೆಸರಲ್ಲಿ ಫೆಬ್ರವರಿ 2023ರಿಂದ ಜೂನ್ ವರೆಗೆ 125 ಸ್ಕೂಲ್ ಬಸ್‌ಗಳ ರಿಜಿಸ್ಟ್ರೇಷನ್ ಆಗಿವೆ. ತಮಾಷೆ ಅಂದ್ರೆ ಈ ಶಾಲೆಯಲ್ಲಿ

ಇರೋದು 250 ಮಕ್ಕಳು ಮಾತ್ರ. ಅಷ್ಟೇ ಅಲ್ಲ ಇವರ ನರ್ಸಿಂಗ್ ಕಾಲೇಜು ಬಿಲ್ಡಿಂಗ್ಗೇ ಎದ್ದಿಲ್ಲ ಆಗ್ಲೇ 30 ಹೆಚ್ಚು ಸ್ಕೂಲ್ ಬಸ್‌ಗಳು ಕಾಲೇಜು ಹೆಸ್ರಲ್ಲಿ ರಿಜಿಸ್ಟ್ರೇಷನ್ (Registration) ಆಗಿದೆ.

ಆದ್ರೆ ಅಸಲಿಗೆ ಆ ಶಾಲೆಯಲ್ಲಿ ಇರೋದು ಬರೀ 2 ಸ್ಕೂಲ್ ಬಸ್‌ಗಳು. ಉಳಿದ ಬಸ್‌ಗಳು ಎಲ್ಲಿ ಹೋದವು? ಇದೇ ನೋಡಿ ಮ್ಯಾಜಿಕ್‌. ಎಲ್ಲವೂ ಲಂಚದ ಮಹಿಮೆ !

ಅಷ್ಟೇ ಅಲ್ಲ ಇವರ ಸ್ಕೂಲ್ ಹಿಮಾಚಲ ಪ್ರದೇಶದಲ್ಲೂ ಇದೆ ಅಂತ ಬೇರೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ.


ಭರ್ಜರಿ ತೆರಿಗೆ ವಂಚನೆ

ಶಾಲಾ ವಾಹನಗಳಿಗೆ ರಸ್ತೆ ತೆರಿಗೆ ಮೂರು ತಿಂಗಳಿಗೆ ಪ್ರತಿ ಸೀಟಿಗೆ ಕೇವಲ 20 ರೂ. ಇರುತ್ತೆ. ಅದೇ ವಾಣಿಜ್ಯ ವಾಹನಗಳ ತೆರಿಗೆ ಮೂರು ತಿಂಗಳಿಗೆ ಪ್ರತೀ ಸೀಟಿಗೆ 4000 ರೂಪಾಯಿ.

ಈ ತೆರಿಗೆ ವಂಚಿಸಲು ಏನ್ ಮಾಡಿದ್ದಾರಂದ್ರೆ SCT college, ಮುಂತಾದ ಶಾಲೆಗಳ ಹೆಸರಿಗೆ ಶಾಲಾ ಬಸ್ಸುಗಳನ್ನು ನೋಂದಣಿ ಮಾಡಿದ್ದಾರೆ. ಆದ್ರೆ ಇವು ಶಾಲಾ ವಾಹನದ ಪರವಾನಿಗೆಯನ್ನೇ ಪಡೆದಿರಲ್ಲ.

ಬರೀ ರಿಯಾಯಿತಿ ತೆರಿಗೆಯನ್ನು ಪಾವತಿಸಿ ತಮ್ಮ ನಕಲಿ ದಾಖಲಾತಿಗಳನ್ನು ಅಸಲಿಯಾಗಿ ಪರಿವರ್ತಿಸಿಕೊಂಡು ಹೊರರಾಜ್ಯಗಳಿಗೆ ಮಾರಾಟವಾಗಿ ಕೋಲಾರ ಆರ್‌ಟಿಓ ಕಚೇರಿಯಿಂದ ಎನ್‌ಓಸಿ ಪಡೆದಿವೆ.

ಈ ರೀತಿ ರಾಜ್ಯದ ಬೊಕ್ಕಸಕ್ಕೆ ಕೊಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾರೆ.


ತಮಾಷೆ ಅಂದ್ರೆ ಅರುಣಾಚಲ ಪ್ರದೇಶದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಶಾಲೆಯ ಹೆಸರಿನಲ್ಲಿರುವ 15ಕ್ಕೂ ಹೆಚ್ಚು ಬಸ್ಗಳು ವರ್ಗಾವಣೆಯಾಗಿವೆ. ಅವುಗಳನ್ನು ಕೆಎ-07 ಬಿ-5744ರಿಂದ ಕೆಎ-07 ಬಿ-6071

ಸಂಖ್ಯೆವರೆಗೆ ಮರು ನೋಂದಣಿ ಮಾಡಿಕೊಡಲಾಗಿದೆ ಗೊತ್ತಾ? ಅಂದ್ರೆ ಈ ಕೋಲಾರ ಆರ್‌ಟಿಓ ಕಚೇರಿಯಲ್ಲಿ ಲಂಚ ಕೊಟ್ರೆ ಅಸಾಧ್ಯವೆಲ್ಲಾ ಸಾಧ್ಯ ಆಗುತ್ತೆ.

ರಹಸ್ಯ ಕಾರ್ಯಾಚರಣೆಯಲ್ಲಿ ಕೋಲಾರ (Kolar RTO scam)ಬಣ್ಣ ಬಟಾ ಬಯಲು


ಅರ್ಧಕ್ಕರ್ಧ ಬೆಲೆಗೆ ಸಿಗುತ್ತೆ ವೆಹಿಕಲ್
ಗ್ಯಾರೇಜ್ ಮಾಲೀಕ ವೇಣು ಗೋಪಾಲ ರೆಡ್ಡಿಯ ವ್ಯವಹಾರ ನೋಡಿದ್ರೆ ನೀವು ಬೆಚ್ಚಿ ಬೀಳ್ತೀರ. ಈತ ಈಗಾಗ್ಲೇ ಈ ಖತರ್ನಾಕ್ ದಂಧೆಯಿಂದ ಕೊಟ್ಯಾಂತರ ರೂಪಾಯಿ ಲೂಟಿ ಮಾಡಿದ್ದಾನೆ.

ಸರ್ಕಾರಕ್ಕೆ ಮಾತ್ರ ಅಲ್ಲ ಗ್ರಾಹಕರಿಗೆ, ಶೋ ರೂಮ್‌ನವರಿಗೆ, ಸಾಲ ಕೊಡುವವರಿಗೆ ಸರಿಯಾಗಿ ಉಂಡೆ ನಾಮ ಹಾಕಿದ್ದಾರೆ. ಈತನೇ ಹೇಳೋ ಪ್ರಕಾರ ಈತನ ಗ್ಯಾರೇಜ್‌ನಲ್ಲಿ ರೆಡಿ ಆಗೋ ಗುಜರಿ

ಇದನ್ನು ಓದಿ: ಫ್ರಾನ್ಸ್ ಹಿಂಸಾಚಾರ : ಸಂಘರ್ಷಕ್ಕೆ ಕಾರಣವಾಯ್ತಾ ಮೃತನ ಧರ್ಮ..?!

ಗಾಡಿಗಳನ್ನು ಹೊಸ ಮಾಡೆಲ್‌ಗೆ ಪರಿವರ್ತಿಸಿ 15 ರಿಂದ 20 ಲಕ್ಷಕ್ಕೆ ಮಾರಾಟ ಮಾಡ ಮಾಡ್ತಾನಂತೆ. ಅದೇ ಆ ಮಾಡೆಲ್ ಗಾಡಿ ಶೋ ರೂಮಲ್ಲಿ 40-45 ಲಕ್ಷಕ್ಕೆ ಮಾರಾಟ ಆಗುತ್ತಂತೆ


ಗಾಡಿ ನೋಡದೇ ರಿಜಿಸ್ಟ್ರೇಷನ್‌

ಕರ್ನಾಟಕ ರಾಜ್ಯದಲ್ಲಿ ಹೊರ ರಾಜ್ಯಗಳಿಂದ ಎನ್‌.ಓ.ಸಿ ಪಡೆದು ಬರುವ ವಾಹನಗಳಿಗೆ ಮರುನೋಂದಣಿಯನ್ನು ನೀಡಲು 30 ದಿನಗಳ ಕಾಲಾವಕಾಶ ಇರುತ್ತದೆ. ಈ ಅವಧಿಯಲ್ಲಿ ಅಧಿಕಾರಿಗಳು

ವಾಹನದ ದಾಖಲಾತಿಗಳನ್ನು ಮತ್ತು ಎನ್‌.ಓ.ಸಿಯ ನೈಜತೆಯನ್ನು( Genuiness) ಪರಿಶೀಲಿಸಬೇಕಾಗಿರುತ್ತದೆ. ಆದರೆ ಕೋಲಾರ ಆರ್‌ಟಿಓ ಕತೆಯೇ ಬೇರೆ. ಇಲ್ಲಿ ವಾಹನ ತಪಾಸಣೆಗೆ ಬರದೆ ಇದ್ರೂ

ಸಹ ವಾಹನವನ್ನು ನೋಡದೇ , ತಪಾಸಣೆಯನ್ನೇ ಮಾಡದೆ 5 ಸಾವಿರ ಲಂಚ ಪಡೆದು ಒಂದೇ ದಿನದಲ್ಲಿ ತಪಾಸಣಾ ವರದಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಉನ್ನತ ತನಿಖೆ ವೇಳೆ ಸಿಸಿ ಟಿವಿ ಫೂಟೇಜ್

ಚೆಕ್ ಮಾಡಿದ್ರೆ ಗೊತ್ತಾಗುತ್ತೆ. ಸಾರಿಗೆ ಸಚಿವರಿಗೆ ದೂರು, ಬೆಂಗಳೂರು ಗಾ. ಪೊಲೀಸರಿಂದ ದಾಳಿ.


ಈ ಭಾರೀ ಹಗರಣವನ್ನು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ತಂದೆವು. ದಾಖಲೆ ಸಮೇತ ಅವರಿಗೆ ವಿವರಿಸಿದೆವು. ಅವರು ತಕ್ಷಣ ಕಠಿಣ ಕ್ರಮದ ಭರವಸೆ ನೀಡಿದರು.

ನಾವು ಸಚಿವರ ಸಲಹೆ ಮೇರೆಗೆ ಐಜಿ ರವಿಕಾಂತೇ ಗೌಡರನ್ನು (Ravikanthe Gowda) ಭೇಟಿಯಾಗಿ ದೂರು ನೀಡಿದೆವು, ಅವರು ಬೆಂಗಳೂರು ಗ್ರಾಮಾಂತರ ಎಸ್‌ಪಿಯವರ ಬಳಿ ಕಳುಹಿಸಿದ್ರು.

ದಾಖಲೆಗಳನ್ನು ನೋಡಿದ ತಕ್ಷಣ ಕಾರ್ಯಾಚರಣೆಗೆ ಆದೇಶ ನೀಡಿದ್ರು. ಹೊಸಕೋಟೆ ಪೊಲೀಸರ ಸಹಾಯದಿಂದ ಡಿವೈಎಸ್‌ಪಿ ಶಂಕರ್‌ ಗೌಡ ಪಾಟೀಲ್‌ ಅವರ ನೇತೃತ್ವದಲ್ಲಿ ಹೊಸಕೋಟೆ

ಟೋಲ್‌ ಬಳಿ ಇರುವ ವೇಣು ಗೋಪಾಲ ರೆಡ್ಡಿ (Venugopal Reddy) ಗ್ಯಾರೇಜ್‌ಗೆ ದಾಳಿ ಮಾಡಿದೆವು. ಪೊಲೀಸ್‌ ಸಿಬ್ಬಂದಿ ಗ್ಯಾರೇಜ್‌ನ ತಪಾಸಣೆ ಮಾಡಿದರು. ಗ್ಯಾರೇಜ್ ಮ್ಯಾನೇಜರ ಸೀನನ

ಮೊಬೈಲ್ ವಶಕ್ಕೆ ಪಡೆದರು. ಇಡೀ ಗ್ಯಾರೇಜನ್ನು ಸೀಜ್‌ ಮಾಡಿ. ಗ್ಯಾರೇಜ್ ಮಾಲೀಕನ ವಿರುದ್ಧ ದೂರು ದಾಖಲಿಸಿ, ತನಿಖೆ ಪ್ರಾರಂಭಿಸಿದ್ರು.


ಕೋಲಾರ ಆರ್‌ಟಿಓ ಇಂಥಾ ಖತರ್ನಾಕ್ ಕೆಲಸಕ್ಕೆ ಫೇಮಸ್‌ (Famous) ಆಗಿದೆ. ಇಲ್ಲಿ ನೋಂದಣಿಯಾದ ಗಾಡಿ ಖರೀದಿಸೋದಕ್ಕೆ ಭಯ ಆಗೋ ಪ್ರಮೇಯ ಬಂದಿದೆ. ಅಷ್ಟೇ ಅಲ್ಲ ಕಳೆದ ತಿಂಗಳು

ಇದೇ ಆರ್‌ಟಿಓ ನಕಲಿ ಬೋನೋಫೈಡ್‌ ಸರ್ಟಿಫಿಕೇಟ್‌ಗೆ ಟ್ರಾಕ್ಟರ್‌ಗಳನ್ನು ನೋಂದಣಿ ಮಾಡಿರೋ ಪ್ರಕರಣವನ್ನು ಲೋಕಾಯುಕ್ತ ತನಿಖೆ ಮಾಡುತ್ತಿದ್ದಾರೆ. ಅದರಲ್ಲೂ ಇದೇ ಅಧಿಕಾರಿಗಳು ಭಾಗಿಯಾಗಿದ್ದರು.

ಹಾಗಾಗಿ ತಕ್ಷಣ ಸಾರಿಗೆ ಸಚಿವರು ಈ ಭ್ರಷ್ಟ ಅಧಿಕಾರಿಗಳನ್ನು ಕಚೇರಿಯಿಂದ ಅಮಾನತ್ತು ಮಾಡಿ ತನಿಖೆಗೆ ಆದೇಶ ನೀಡಬೇಕು. ಇಲ್ಲದಿದ್ದರೆ ಇವರು ದಾಖಲೆ ತಿದ್ದುವ, ನಾಶ ಮಾಡೋ ಸಾಧ್ಯತೆಗಳಿವೆ.


ಈ ಬಗ್ಗೆ ಸಾರಿಗೆ ಇಲಾಖೆ ಆಯುಕ್ತರು ಈ ಭಾರೀ ಹಗರಣದ ಕುರಿತು ಗಂಭೀರವಾಗಿ ತನಿಖೆ ನಡೆಸಿ, ಆರ್‌.ಟಿ.ಓ ಅಧಿಕಾರಿ ಎ.ಬಿ ಯೋಮಕೇಶಪ್ಪ (A B Yomakeshappa), ಪ್ರಥಮ ದರ್ಜೆ ಸಹಾಯಕ

ಜೆ.ವಿ ಶ್ರೀನಿವಾಸ್‌ ಮತ್ತು ಅಧೀಕ್ಷಕ ದೇವರಾಜ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅಷ್ಟೇ ಅಲ್ಲ ಅಕ್ರಮವಾಗಿ ರಿಜಿಸ್ಟರ್‌ ಆಗಿರುವ ಗಾಡಿಗಳನ್ನು ಸೀಝ್‌ ಮಾಡಬೇಕು.

ಸರ್ಕಾರಕ್ಕೆ ನಷ್ಟ ಆಗಿರೋ ತೆರಿಗೆ ಹಣವನ್ನು ಮರಪಾವತಿಸುವಂತೆ ಆದೇಶ ನೀಡಬೇಕು.

Exit mobile version