ದೇಶಕ್ಕೆ ಸಂವಿಧಾನ(Indian Constitution) ಕೊಟ್ಟ ಬಾಬಾಸಾಹೇಬ್(Babasaheb) ಅಂಬೇಡ್ಕರ್(Ambedkar) ಅವರು ಬದುಕಿನ ಕೊನೆಯವರೆಗೂ ಅವಮಾನಗಳನ್ನು ಅನುಭವಿಸುತ್ತಲೇ ಬದುಕಿದರು. ಅವರು ಸಾವಿನ ನಂತರವೂ ಅವರಿಗೆ ಅವಮಾನ ಮಾಡಲಾಯಿತು. ದೆಹಲಿಯಲ್ಲಿ ಅವರ ಶವವನ್ನು ದಫನ್ ಮಾಡಲು ಕಾಂಗ್ರೆಸ್(Congress) ಸರ್ಕಾರ(Government) ಜಾಗ ನೀಡಲಿಲ್ಲ. ಅನಿವಾರ್ಯವಾಗಿ ಅಂಬೇಡ್ಕರ್ ಅವರ ಶವವನ್ನು ಮುಂಬೈಗೆ ತಂದು, ಅಲ್ಲಿಯ ಕಡಲತೀರದಲ್ಲಿ ದಫನ್ ಮಾಡಲಾಯಿತು ಎಂದು ಕೊಳ್ಳೆಗಾಲ ಶಾಸಕ ಎನ್. ಮಹೇಶ್ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಅಂಬೇಡ್ಕರ್ ಅವರಿಗೆ ಸಾಕಷ್ಟು ಅವಮಾನ ಮಾಡಲಾಗಿದೆ. ದೇಶಕ್ಕೆ ಸಂವಿಧಾನ ನೀಡಿದ ಆ ಮಹಾನ್ ಪುರುಷನನ್ನು ಕಾಂಗ್ರೆಸ್ ಪಕ್ಷ ಅನೇಕ ವರ್ಷಗಳ ಕಾಲ ಸರಿಯಾಗಿ ನಡೆಸಿಕೊಳ್ಳದೇ, ಸತ್ತ ನಂತರವೂ ಅವರಿಗೆ ಸಿಗಬೇಕಾದ ಕನಿಷ್ಠ ಗೌರವವನ್ನು ನೀಡಲಿಲ್ಲ.
ದೆಹಲಿಯಲ್ಲಿ ಸಮಾಧಿ ಮಾಡಲು ಜಾಗ ನಿರಾಕರಿಸಿದಾಗ, ಅವರ ಶವವನ್ನು ತಂದು ಮುಂಬೈನ ಕಡಲತೀರದಲ್ಲಿ ದಫನ್ ಮಾಡಲಾಯಿತು. ಸಾಮಾನ್ಯವಾಗಿ ಸಮುದ್ರದ ದಡದಲ್ಲಿ ಅನಾಥರ ಶವವನ್ನು ದಫನ್ ಮಾಡಲಾಗುತ್ತದೆ. ಆದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅನಾಥರಂತೆ ದಫನ್ ಮಾಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ನಂತರ ಅನೇಕ ವರ್ಷಗಳ ಕಾಲ ಅಂಬೇಡ್ಕರ್ ಅವರಿಗೆ ಸಿಗಬೇಕಾದ ಸ್ಥಾನಮಾನಗಳನ್ನು ಕಾಂಗ್ರೆಸ್ ಪಕ್ಷ ನೀಡಲಿಲ್ಲ. ‘ಭಾರತರತ್ನ’ ಪ್ರಶಸ್ತಿ ನೀಡಲಿಲ್ಲ. ಕಡೆಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದು ಭಾರತರತ್ನ ನೀಡಬೇಕಾಯಿತು. ಆದರೆ ಇತ್ತೀಚೆಗೆ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್ ಅವರಿಗೆ ಸಿಗಬೇಕಾದ ಗೌರವ ಸಿಕ್ಕಿದೆ.
ಈ ಹಿಂದೆ ಉತ್ತರಪ್ರದೇಶದಲ್ಲಿ ಮಾಯಾವತಿಯವರು ಅಧಿಕಾರದಲ್ಲಿದ್ದಾಗಲೂ ಅಂಬೇಡ್ಕರ್ ಅವರಿಗೆ ಗೌರವ ನೀಡುವ ಕೆಲ ಕಾರ್ಯಗಳನ್ನು ಮಾಡಿದ್ದರು. ಅಂಬೇಡ್ಕರ್ ನಮ್ಮನ್ನೆಲ್ಲಾ ಬಿಟ್ಟು ಹೋಗಿ ಏಳು ದಶಕದ ನಂತರ ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿರುವುದು ನಿಜಕ್ಕೂ ದುರದೃಷ್ಠಕರ ಎಂದರು.