ತುಳು ಜನರ ತೀವ್ರ ವಿರೋಧ : ಬೆಂಗಳೂರಿನಲ್ಲಿ ನಡೆಯಬೇಕಿದ್ದ ‘ಕೊರಗಜ್ಜ ನೇಮೋತ್ಸವ’ ರದ್ದು!

Bengaluru : ರಿಷಬ್ ಶೆಟ್ಟಿ ನಿರ್ದೇಶನದ ಇತ್ತೀಚಿಗೆ ಬಿಡುಗಡೆಯಾದ ಕಾಂತಾರ (Koragajja Nemotsava Stopped) ಚಿತ್ರದಲ್ಲಿನ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿನ ಧಾರ್ಮಿಕ ಆಚರಣೆಗಳು ಹಲವಾರು ಜನರನ್ನು ಪ್ರೇರೇಪಿಸಿದೆ.

ಬೆಂಗಳೂರಿನ ಯಲಹಂಕ ಪ್ರದೇಶದ ದೇವಸ್ಥಾನವೊಂದು ಕರಾವಳಿ (Koragajja Nemotsava Stopped) ಕರ್ನಾಟಕದ ದೇವರನ್ನು ಪೂಜಿಸುವ ಸಲುವಾಗಿ ‘ಕೊರಗಜ್ಜ ನೇಮ’ ಆಚರಣೆಯನ್ನು ಆಯೋಜಿಸಿತ್ತು.

ಆದರೆ ತುಳು ಜನರ ತೀವ್ರ ವಿರೋಧದಿಂದಾಗಿ ಕೊರಗಜ್ಜ ನೇಮವನ್ನು ರದ್ದು ಮಾಡಲಾಗಿದೆ.

‘ಕೊರಗಜ್ಜ ನೇಮ’ ನಡೆಸುವ ಮೂಲಕ ಆಯೋಜಕರು ಹಣವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ‘ದೈವರಾಧನೆ’(Daivaradhane) ಅಂದರೆ ದೇವತಾರಾಧನೆ. ಅದನ್ನು ದೇವರು ನೆಲೆಸಿರುವ ಭೂಮಿಯ ಹೊರಗೆ ನಡೆಸಲಾಗುವುದಿಲ್ಲ.

ಇದನ್ನೂ ಓದಿ : https://vijayatimes.com/nia-enters-mangaluru-blast/

ಹೀಗಾಗಿ ತುಳುನಾಡಿನಲ್ಲಿ ಆಚರಿಸುವ ಕೊರಗಜ್ಜ ನೇಮವನ್ನು ಬೆಂಗಳೂರಿನಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಅನೇಕರು ನೇಮೋತ್ಸವವನ್ನು ವಿರೋಧಿಸಿದ್ದರು. ಹೀಗಾಗಿ ಇಂದು ಬೆಳಗ್ಗೆ ನಡೆಯಬೇಕಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಕರು ಹಿಂಪಡೆದಿದ್ದಾರೆ.

ಇದನ್ನೂ ಓದಿ : https://vijayatimes.com/bmtc-bus-driver-video-viral/

ಕಾಂತಾರ ಚಿತ್ರ ತೆರೆಕಂಡ ನಂತರ ತುಳುನಾಡಿನ ದೈವರಾಧನೆಯೂ ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಹೆಚ್ಚು ವಿಸ್ತರಣೆಯಾಗುತ್ತಿದೆ. ಈ ಭಾಗದಲ್ಲಿ ಅನೇಕ ಕಡೆ ಕೊರಗಜ್ಜ ನೇಮ ಮತ್ತು ದೈವಕಟ್ಟೆಗಳನ್ನು ಸ್ಥಾಪಿಸುವ ಮೂಲಕ ಭಕ್ತರಿಂದ ಹಣ ಸಂಗ್ರಹಿಸಲಾಗುತ್ತಿದೆ.

https://fb.watch/h1pt2la7NX/ ವೀರ ಯೋಧರ ಹೆಸರಿನ ತಂಗುದಾಣ ಈಗ ಕುಡುಕರ ತಾಣ!

ತುಳುನಾಡಿನ ದೈವಗಳ ಹೆಸರಿನಲ್ಲಿ ಅನೇಕರು ಗೂಗಲ್‌ಫೇ ಮತ್ತು ಫೋನ್‌ಫೇ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ಇನ್ನು ಕಾಂತಾರ ಚಿತ್ರ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರವಾಗಿದೆ. ಕನ್ನಡ ಕೆಜಿಎಫ್‌ ೨ ದಾಖಲೆಯನ್ನು ಕಾಂತಾರ ಹಿಂದಿಕ್ಕಿದೆ.  

ಈ ವರ್ಷ ಅತಿಹೆಚ್ಚು ಗಳಿಕೆ ಕಂಡ 6ನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಕಾಂತಾರ ಚಿತ್ರ ಪಾತ್ರವಾಗಿದೆ. ಕರ್ನಾಟಕದ ನೈಋತ್ಯ ಭಾಗವಾದ ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ಜಾನಪದ ಮತ್ತು ಸಂಸ್ಕೃತಿಗಳನ್ನು ಒಳಗೊಂಡಿರುವ ಈ ಚಲನಚಿತ್ರವು ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಗಳನ್ನು ಪಡೆಯುತ್ತಿದೆ.
Exit mobile version