ಕೊರೊನಾ ರಣಕೇಕೆ: ರಾಜ್ಯದಲ್ಲಿ ಏ.21ರಿಂದ ಹೊಸ ರೂಲ್ಸ್‌ ಜಾರಿ: ಏನಿರುತ್ತೆ? ಏನಿರಲ್ಲ

ಬೆಂಗಳೂರು, ಏ. 21: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ‌ ಸೋಂಕು ಹರಡುವಿಕೆ ತಡೆಗಟ್ಟಲು ರಾಜ್ಯ ಸರ್ಕಾರ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಮೊರೆ ಹೋಗಿದೆ.

ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವೆರೆಗೂ ನೈಟ್ ಕರ್ಪ್ಯೂ ಹಾಗೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೂ ವೀಕೆಂಡ್ ಕರ್ಪ್ಯೂ ( ಶನಿವಾರ ಭಾನುವಾರ ಪೂರ್ತಿ ದಿನ ) ವಿಧಿಸಲಾಗಿದೆ.

ನಿರ್ಬಂಧ ವಿಧಿಸಲಾಗಿರುವ ಚಟುವಟಿಕೆಗಳು
ಶಾಲಾ, ಕಾಲೇಜು, ವಿದ್ಯಾಸಂಸ್ಥೆಗಳು ತರಬೇತಿ ಸಂಸ್ಥೆಗಳು, ಸಿನಿಮಾಹಾಲ್ ಶಾಪಿಂಗ್ ಮಾಲ್, ಜಿಮ್, ಯೋಗಾ ಸೆಂಟರ್, ಸ್ಪಾ, ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೈದಾನಗಳು, ಈಜುಕೊಳ, ಮನರಂಜನಾ ತಾಣಗಳು ಸಮುದಾಯ ಭವನ. ಸಾಮಾಜಿಕ‌, ರಾಜಕೀಯ, ಧಾರ್ಮಿಕ, ಕ್ರೀಡಾ, ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಸೇರಿದಂತೆ ಜನ ಸೇರುವ ಸ್ಥಳಗಳಿಗೆ ನಿರ್ಬಂಧ. (ಈಜುಕೊಳದಲ್ಲಿ ಕ್ರೀಡಾ ಉದ್ದೇಶಕ್ಕೆ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ. ಕ್ರೀಡಾ ಮೈದಾನ ಸಹಾ ತರಬೇತಿಗೆ ಅವಕಾಶ ) ಉಳಿದಂತೆ ಧಾರ್ಮಿಕ ಕೇಂದ್ರಗಳು ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹೋಟೆಲ್, ಬಾರ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಇನ್ನೂ, ಕಟ್ಟಡ ನಿರ್ಮಾಣ ಕೆಲಸಕ್ಕೆ ಅನುಮತಿ, ಕೃಷಿ ಚಟುಟಿಕೆ, ಕೈಗಾರಿಕೆ ಪ್ರದೇಶದಲ್ಲಿ ಕೆಲಸ‌ ಮಾಡುವವರಿಗೆ ಅವಕಾಶ, ದಿನಬಳಕೆ ವಸ್ತುಗಳು, ತರಕಾರಿ, ಹಾಲು ಮಾಂಸ ಮೀನು ಹೂವಿನ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಇದಲ್ಲದೇ ಲಾಡ್ಜ್‌ನಲ್ಲಿ ತಂಗಲು ಪ್ರವಾಸಿಗರಿಗೆ ಅನುಮತಿ, ಬ್ಯಾಂಕ್, ಇನ್ಸುರೆನ್ಸ್ ಎಟಿಎಂಗಳಿಗೆ ಅವಕಾಶ, ಆನಲೈನ್ ಮೂಲಕ ಸರಬರಾಜು ಮಾಡಲು ಅವಕಾಶ, ಮಾಧ್ಯಮದವರಿಗೆ ಅವಕಾಶ, ಕಟಿಂಗ್ ಶಾಪ್, ಸಲೂನ್, ಬ್ಯೂಟಿಪಾರ್ಲರ್‌ಗೆ ಅವಕಾಶ, ಸರ್ಕಾರಿ ಕಚೇರಿ ಖಾಸಗಿ ಕಚೇರಿಯ ಕೆಲಸಕ್ಕೆ ಕಡಿಮೆ ಜನರೊಂದಿಗೆ ಅವಕಾಶ, ಸರ್ಕಾರಿ ಕೆಲಸದಲ್ಲಿ ಶೇಕಡ 50ರಷ್ಟು ಸಿಬ್ಬಂದಿಗೆ ಅವಕಾಶ. ಉಳಿದವರನ್ನು ಕೋವಿಡ್ 19 ಕೆಲಸಕ್ಕೆ ಬಳಸಿಕೊಳ್ಳಲು ಸೂಚನೆ.

ನ್ಯಾಯಾಲಯ ಹಾಗೂ ಅದರ ಸಂಬಂಧಪಟ್ಟ ಕಚೇರಿಗಳು, ಪೆಟ್ರೋಲ್ ಡೀಸೆಲ್‌ ಬಂಕ್‌ಗಳಿಗೆ ಅವಕಾಶ. ಅಂತರರಾಜ್ಯ ಓಡಾಟಕ್ಕೆ ಯಾವುದೇ ವಿಶೇಷ ಅನುಮತಿ ಇಲ್ಲದೆ ಅವಕಾಶ. ಆಟೋ, ಟ್ಯಾಕ್ಸಿ, ಬಸ್ ಸೇರಿದಂತೆ ಎಲ್ಲಾ ವಾಹನಗಳಿಗೆ ಅವಕಾಶ ಶೇಕಡ 50ರಷ್ಟು ಪ್ರಯಾಣಿಕರಿಗೆ ಅನುಮತಿ. ಗೂಡ್ಸ್ ವಾಹನಗಳು ಆರೋಗ್ಯ ಇಲಾಖೆ ವಾಹನಗಳಿಗೆ ಅವಕಾಶ. ಮದುವೆಗೆ 50 ಜನರಿಗೆ ಹಾಗೂ ಸಾವಿಗೆ 20 ಜನರಿಗೆ ಅವಕಾಶ ಕಲ್ಪಿಸಲಾಗಿದೆ.

Exit mobile version