ಕೋವಿಡ್-19 ಲಸಿಕಾ ಮೇಳ: ಮೊದಲ ದಿನ ರಾಜ್ಯದಲ್ಲಿ 10.86 ಲಕ್ಷ ಮಂದಿಗೆ ಲಸಿಕೆ ಪೂರೈಕೆ

ಬೆಂಗಳೂರು,ಜೂ.22: ರಾಜ್ಯದಲ್ಲಿ ಆರಂಭಗೊಂಡಿರುವ ಕೋವಿಡ್-19 ಲಸಿಕಾ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಮೊದಲ ದಿನವೇ 10 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ವಿತರಣೆ ಮಾಡಲಾಯಿತು.

ರಾಜ್ಯವನ್ನು ಕೊರೊನಾ‌ ಮುಕ್ತಗೊಳಿಸುವ ನಿಟ್ಟಿನಲ್ಲಿ “ಸರ್ವರಿಗೂ ಲಸಿಕೆ, ಉಚಿತ ಲಸಿಕೆ” ಶೀರ್ಷಿಕೆ ಅಡಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರದ ವತಿಯಿಂದ ಲಸಿಕಾ ಮೇಳ ನಡೆಸಲಾಗುತ್ತಿದೆ. ಈ ಮೇಳದ ಮೊದಲ ದಿನವಾದ ಜೂ.21 ರಂದು ರಾತ್ರಿ 9 ಗಂಟೆವರೆಗೆ ಒಟ್ಟು 10,86,714 ಮಂದಿಗೆ ಕೋವಿಡ್-19 ಲಸಿಕೆ ವಿತರಣೆ ಮಾಡಲಾಯಿತು.

ಜಿಲ್ಲಾವಾರು ಅಭಿಯಾನದಲ್ಲಿ ಬೆಂಗಳೂರಿನಲ್ಲಿ(ಬಿಬಿಎಂಪಿ) ಅತಿ ಹೆಚ್ಚು ಅಂದರೆ 1,72,713 ಜನರು ಲಸಿಕೆ ಪಡೆದಿದ್ದಾರೆ. ಉಳಿದಂತೆ ಬೆಂಗಳೂರು ನಗರ 41,996, ಬೆಳಗಾವಿ 86,239, ಬಳ್ಳಾರಿ 64,406, ಮಂಡ್ಯ 51,577, ತುಮಕೂರು 51,552, ದಕ್ಷಿಣ‌ ಕನ್ನಡ 44,047, ಮೈಸೂರು 38,945, ಚಿಕ್ಕಬಳ್ಳಾಪುರ 37,098 ಹಾಗೂ ಉತ್ತರ ಕನ್ನಡ 36,393 ಮಂದಿ ಲಸಿಕೆ ಪಡೆದಿದ್ದಾರೆ.

ಇದರೊಂದಿಗೆ ರಾಜ್ಯದಲ್ಲಿ ಈವರೆಗೂ ಒಟ್ಟು 1,95,86,404 ಡೋಸ್ ಕೋವಿಡ್-19 ಲಸಿಕೆ ವಿತರಣೆ ಮಾಡಲಾಗಿದೆ.

Exit mobile version