KPTCL ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 1492 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಒಟ್ಟು 1492 ಹುದ್ದೆಗಳು ಖಾಲಿಯಿದ್ದು ಅದರಲ್ಲಿ ಸಹಾಯಕ ಇಂಜಿನಿಯರ್ (ವಿದ್ಯುತ್) 505, ಸಹಾಯಕ ಇಂಜಿನಿಯರ್ (ಸಿವಿಲ್) 28, ಕಿರಿಯ ಇಂಜಿನಿಯರ್ (ವಿದ್ಯುತ್) 570, ಕಿರಿಯ ಇಂಜಿನಿಯರ್ (ಸಿವಿಲ್) 29, ಕಿರಿಯ ಸಹಾಯಕ 360 ಹುದ್ದೆಗಳಿವೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.


ಕಿರಿಯ ಇಂಜಿನಿಯರ್ ವಿಭಾಗದಲ್ಲಿ ಸಾಮಾನ್ಯ 477, ಬ್ಯಾಕ್ಲಾಗ್ 9 ಹುದ್ದೆಗಳಿವೆ. ಕಲ್ಯಾಣ ಕರ್ನಾಟಕ ಸಾಮಾನ್ಯ 82, ಬ್ಯಾಕ್ಲಾಗ್ 2 ಒಟ್ಟು 570 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳು. ಸಾಮಾನ್ಯ 21, ಬ್ಯಾಕ್ಲಾಗ್ 0 ಹುದ್ದೆಗಳು. ಕಲ್ಯಾಣ ಕರ್ನಾಟಕ ಸಾಮಾನ್ಯ 8, ಬ್ಯಾಕ್ಲಾಗ್ 0 ಒಟ್ಟು 29 ಹುದ್ದೆಗಳಿವೆ.
ಸಹಾಯಕ ಇಂಜಿನಿಯರ್ ವಿಭಾಗದಲ್ಲಿ ಸಾಮಾನ್ಯ 393, ಬ್ಯಾಕ್ಲಾಗ್ 6 ಹುದ್ದೆಗಳು. ಕಲ್ಯಾಣ ಕರ್ನಾಟಕ ಸಾಮಾನ್ಯ 106, ಬ್ಯಾಕ್ಲಾಗ್ 0 ಒಟ್ಟು 505 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸಹಾಯಕ ಇಂಜಿನಿಯರ್ (ಸಿವಿಲ್). ಸಾಮಾನ್ಯ 21, ಬ್ಯಾಕ್ಲಾಗ್ 0 ಹುದ್ದೆಗಳು. ಕಲ್ಯಾಣ ಕರ್ನಾಟಕ ಸಾಮಾನ್ಯ 07, ಬ್ಯಾಕ್ಲಾಗ್ 0 ಒಟ್ಟು 28 ಹುದ್ದೆಗಳಿವೆ.

ಅರ್ಜಿ ಸಲ್ಲಿಸುವ ವಿಧಾನ :
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆವಿಪ್ರನಿನಿ) ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಹುದ್ದೆಗಳ ವರ್ಗೀಕರಣ, ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ಅರ್ಹತೆ ಮುಂತಾದ ವಿವರಗಳನ್ನು ದಿನಾಂಕ 7/2/2022ರ ನಂತರ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ವೆಬ್ಸೈಟ್ ವಿವರ http://kptcl.karnataka.gov.in

ಅಭ್ಯರ್ಥಿಯ ಆಯ್ಕೆಯ ವಿವರ : ಅಭ್ಯರ್ಥಿಯ ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

Exit mobile version