KPTCL ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

karnataka power transmission limited

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (KPTCL )ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಫೆಬ್ರವರಿ 07, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 07, 2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಮಾರ್ಚ್ 09, 2022

ಅರ್ಜಿ ಸಲ್ಲಿಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.

ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ, ಆನ್‌ಲೈನ್‌ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ

ಒಟ್ಟು ಹುದ್ದೆಗಳು: 1492

ಹುದ್ದೆಗಳ ಹೆಸರು:
ಸಹಾಯಕ ಇಂಜಿನಿಯರ್, ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್, ಕಿರಿಯ ಇಂಜಿನಿಯರ್, ಕಿರಿಯ ಸಹಾಯಕ

ಸಹಾಯಕ ಇಂಜಿನಿಯರ್: 505 ಹುದ್ದೆ
ವೇತನ ಶ್ರೇಣಿ : ರೂ. 41,130 ರಿಂದ ರೂ. 72,920

ಶೈಕ್ಷಣಿಕ ಅರ್ಹತೆ: 
ಮನ್ನಣೆ ಪಡೆದ ಯಾವುದೇ ವಿಶ್ವವಿದ್ಯಾಲಯ/ ಸಂಸ್ಥೆಯ (ಎ.ಐ.ಸಿ.ಟಿ.ಇ ಇಂದ ಮಾನ್ಯತೆ ಪಡೆದಿರುವ) ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗನಲ್ಲಿ ಬಿ.ಇ/ ಬಿ.ಟೆಕ್ ಪದವಿ ಹೊಂದಿರತಕ್ಕದ್ದು ಅಥವಾ ಎ.ಎಂ.ಐ.ಇ. (ಭಾಗ-ಎ ಮತ್ತು ಬಿ ಎಲೆಕ್ಟ್ರಿಕಲ್) ಪರೀಕ್ಷೆಯಲ್ಲಿ ಉತ್ತೀರ್ಣತೆ.

ಸಹಾಯಕ ಇಂಜಿನಿಯರ್ (ಸಿವಿಲ್) : 28 ಹುದ್ದೆ
ವೇತನ ಶ್ರೇಣಿ : ರೂ. 41,130 ರಿಂದ ರೂ. 72,920

ಶೈಕ್ಷಣಿಕ ಅರ್ಹತೆ: 
ಮನ್ನಣೆ ಪಡೆದ ಯಾವುದೇ ವಿಶ್ವವಿದ್ಯಾಲಯ/ ಸಂಸ್ಥೆಯ (ಎ.ಐ.ಸಿ.ಟಿ.ಇ ಇಂದ ಮಾನ್ಯತೆ ಪಡೆದಿರುವ) ಸಿವಿಲ್ ಇಂಜಿನಿಯರಿಂಗನಲ್ಲಿ ಬಿ.ಇ/ ಬಿ.ಟೆಕ್ ಪದವಿ ಹೊಂದಿರತಕ್ಕದ್ದು ಅಥವಾ ಎ.ಎಂ.ಐ.ಇ. (ಭಾಗ-ಎ ಮತ್ತು ಬಿ ಸಿವಿಲ್) ಪರೀಕ್ಷೆಯಲ್ಲಿ ಉತ್ತೀರ್ಣತೆ.

ಕಿರಿಯ ಇಂಜಿನಿಯರ್ (ವಿದ್ಯುತ್): 570 ಹುದ್ದೆ
ವೇತನ ಶ್ರೇಣಿ : ರೂ. 26,270 ರಿಂದ ರೂ. 65,020

ಶೈಕ್ಷಣಿಕ ಅರ್ಹತೆ: 
ಕರ್ನಾಟಕ ರಾಜ್ಯದ ಪಾಲಿಟೆಕ್ನಿಕ್ ನಿಂದ ವ್ಯಾಸಂಗ ಮಾಡಿ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರತಕ್ಕದ್ದು.

ಕಿರಿಯ ಇಂಜಿನಿಯರ್ (ಸಿವಿಲ್ : 29 ಹುದ್ದೆ
ವೇತನ ಶ್ರೇಣಿ : ರೂ. 26,270 ರಿಂದ ರೂ. 65,020

ಶೈಕ್ಷಣಿಕ ಅರ್ಹತೆ: 
ಕರ್ನಾಟಕ ರಾಜ್ಯದ ಪಾಲಿಟೆಕ್ನಿಕ್ ನಿಂದ ವ್ಯಾಸಂಗ ಮಾಡಿ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರತಕ್ಕದ್ದು.

ಕಿರಿಯ ಸಹಾಯಕ: 360 ಹುದ್ದೆ
ವೇತನ ಶ್ರೇಣಿ: ರೂ. 20,220 ರಿಂದ ರೂ. 51,640

ಶೈಕ್ಷಣಿಕ ಅರ್ಹತೆ: 
ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲಾಗುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಸಿಬಿ.ಎಸ್.ಸಿ ಮತ್ತು ಐ.ಎಸ್.ಸಿ ಪರೀಕ್ಷಾ ಮಂಡಳಿಗಳಿಂದ ನಡೆಸಲಾಗುವ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣತೆ.

ಕರ್ತವ್ಯ ಸ್ಥಳ: ಕರ್ನಾಟಕ

Exit mobile version