ಕೆಪಿಟಿಸಿಎಲ್‌ನಲ್ಲಿ 200 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು, ಜ. 04: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಸುಮಾರು 200 ಹುದ್ದೆಗಳಿಗೆ ಆಹ್ವಾನಿಸಲಾಗಿದೆ. ಹೊಸದಾಗಿ ಡಿಪ್ಲೋಮಾ, ಬಿ.ಇ ಮಾಡಿದವರಿಗೆ ಪದವಿ ಅಪ್ರೆಂಟಿಸ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಜನವರಿ 19ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಶೈಕ್ಷಣಿಕ ಅರ್ಹತೆ, ಪ್ರಮಾಣ ಪತ್ರ ಪರಿಶೀಲನೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.

ಉದ್ಯೋಗ ಸ್ಥಳ: ಬೆಂಗಳೂರು

ವಿದ್ಯಾರ್ಹತೆ: ಡಿಪ್ಲೋಮಾ/ಇಂಜಿನಿಯರಿಂಗ್ ಪದವಿಯನ್ನು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

ಹುದ್ದೆಯ ವಿವರ: ಪದವಿ/ ಟೆಕ್ನಿಷಿಯನ್ ಅಪ್ರೆಂಟಿಸ್

ಪದವೀಧರ ಅಪ್ರೆಂಟೀಸ್‌ (Graduate Apprentice) ಎಲೆಕ್ಟ್ರಿಕಲ್‌ ಆಂಡ್‌ ಎಲೆಕ್ಟ್ರಾನಿಕ್‌ ಇಂಜಿನಿಯರಿಂಗ್‌- 100 ಹುದ್ದೆ, ಸಿವಿಲ್‌ ಇಂಜಿನಿಯರಿಂಗ್‌- 25 ಹುದ್ಎಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 19-1-2021 ಕೊನೆ ದಿನಾಂಕವಾಗಿದೆ.

Exit mobile version