Mysore : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2023-24ನೇ ಶೈಕ್ಷಣಿಕ ಸಾಲಿನ ಜುಲೈ (ksou admission period extend) ಆವೃತ್ತಿ ಪ್ರವೇಶಾತಿಯ ಅವಧಿ ವಿಸ್ತರಣೆ ಮಾಡಿ
ಮುಕ್ತ ವಿವಿ ಆದೇಶ ಹೊರಡಿಸಿದೆ. ಹೊಸ ಆದೇಶದ ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಸೆಪ್ಟೆಂಬರ್ (September) 30 ರವರೆಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು. ಅದೇ ರೀತಿ ರಾಜ್ಯದಲ್ಲಿರುವ
ವಿವಿಧ ಪ್ರಾದೇಶಿಕ ಕೇಂದ್ರಗಳಲ್ಲಿಯೂ ಸಹ ಸೆಪ್ಟೆಂಬರ್ 30 ರವರೆಗೆ ಪ್ರವೇಶ ಪಡೆಯಬಹುದು ಎಂದು ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದೆಹಲಿಯ (Delhi) ಯುಜಿಸಿಯ ಮಾನ್ಯತೆ ಹೊಂದಿದ್ದು, ಪದವಿ ಕೋರ್ಸ್ಗಳಾದ ಬಿ.ಎ (BA), ಬಿ.ಕಾಂ, ಬಿ.ಬಿ.ಎ (BBA), ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ.,
ಮಹಿಳೆಯರೇ ಫ್ರೀ ಭಾಗ್ಯ ನೀವು ಪಡೆಯಬೇಕಾ? ಹಾಗಾದ್ರೆ BPL ಮತ್ತು APL ಕಾರ್ಡ್ ಗೆ ಇಂದೇ ತಿದ್ದುಪಡಿ ಮಾಡಿಸಿ
ಬಿ.ಎಸ್ಸಿ(B Sc), ಬಿ.ಎಸ್.ಡಬ್ಲ್ಯೂ., ಸ್ನಾತಕೋತ್ತರ ಕೋರ್ಸ್ ಗಳಾದ ಎಂ.ಎ (MA)., ಎಂ.ಸಿ.ಜೆ., ಎಂ.ಕಾಂ. (M.Com), ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ., ಎಂ.ಎಸ್.ಡಬ್ಲ್ಯೂಗಳಿಗೆ (MSW) ಪ್ರವೇಶಾತಿ
ಪಡೆಯಬಹುದಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ನ್ಯಾಕ್ ನಿಂದ “ಎ ಪ್ಲಸ್” (A Plus) ಮಾನ್ಯತೆ ಹೊಂದಿದ್ದು, ಮುಕ್ತ ವಿಶ್ವವಿದ್ಯಾನಿಲಯ ನೀಡುವ ಪದವಿಗಳು ರೆಗ್ಯುಲರ್ ಮೂಲಕ
ನೀಡುವ ಪದವಿಗಳು ಎರಡು ಒಂದೇ ಸಮನಾದ (ksou admission period extend) ಅರ್ಹತೆ ಹೊಂದಿವೆ.
ಪ್ರವೇಶಾತಿ ಶುಲ್ಕದ ವಿವರ :
ಬಿ.ಎ-ರೂ.7,700
ಬಿ.ಸಿ.ಎ/ಬಿ.ಎಸ್ಸಿ-ರೂ.22,500
ಬಿ.ಎಸ್.ಡಬ್ಲ್ಯೂ-ರೂ.12,000
ಬಿ.ಬಿ.ಎ/ಬಿ.ಎಲ್.ಐ.ಎಸ್ಸಿ-11,500
ಬಿ.ಕಾಂ.-ರೂ.8,200

ಎಂ.ಎ-ರೂ.9,800
ಎಂ.ಎಸ್.ಡಬ್ಲ್ಯೂ-ರೂ.20,000
ಎಂ.ಕಾಂ-ರೂ.11,500
ಎಂ.ಸಿ.ಜೆ-ರೂ.15,100
ಎಂ.ಎಲ್.ಐ.ಎಸ್ಸಿ-ರೂ.17,000
ಎಂ.ಎಸ್ಸಿ/ಎಂ.ಬಿ.ಎ/ಎಂ.ಸಿ.ಎ-ರೂ.28,000
ಈ ಹಿಂದೆ ಪ್ರವೇಶಾತಿಗೆ ಅಂತಿಮ ದಿನಾಂಕವನ್ನು ಆಗಸ್ಟ್ (August) 31 ರವರೆಗೆ ಮಾತ್ರ ನೀಡಲಾಗಿತ್ತು. ಇದೀಗ ಯುಜಿಸಿ (UGC) ನಿರ್ದೇಶನದ ಮೇರೆಗೆ ಪ್ರವೇಶಾತಿ ದಿನಾಂಕವನ್ನು
ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರಗಳ ವಿವರಗಳು, ಅಲ್ಲಿನ ದೂರವಾಣಿ ಸಂಪರ್ಕ ಸಂಖ್ಯೆಗಳು, ಪ್ರವೇಶಾತಿ
ವಿಧಾನಗಳು, ಇತರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ – https://ksoumysuru.ac.in/kannada/contact-us.php
ವಿಳಾಸ
ಮುಕ್ತಗಂಗೋತ್ರಿ, ಮೈಸೂರು (Mysore), ಕರ್ನಾಟಕ (Karnataka) – 570006
ಜಾಲತಾಣ
Website: www.ksoumysuru.ac.in
Facebook: www.facebook.com/ksoumysuru
Twitter: www.twitter.com/ksoumysuru
ಮಹೇಶ್