ಬಿಪಿಎಲ್ ಕಾರ್ಡ್ (BPL Card) ನಲ್ಲಿ ಪುರುಷ ಮುಖ್ಯಸ್ಥರಾಗಿದ್ದರಿಂದ ಕೆಲ ಮಹಿಳೆಯರಿಗೆ (Amendment of bpl card) ಸಂಕಷ್ಟ ಎದುರಾಗಿದೆ. ಮನೆ ಮುಖ್ಯಸ್ಥರು ಪುರುಷನಾಗಿದ್ದರಿಂದ
ಮಹಿಳೆಗೆ ಗೃಹಲಕ್ಷ್ಮೀ ಯೋಜನೆ ಸಿಗುತ್ತಿಲ್ಲ. 2000 ರೂ.ಸಿಗುತ್ತಿಲ್ಲ ಎಂದು ನಿರಾಸೆಗೊಂಡ ಮಹಿಳೆಯರಿಗೆ ಸರ್ಕಾರದ ಸಿಹಿ ಸುದ್ದಿ ನೀಡಿದೆ. ಮನೆ ಮುಖ್ಯಸ್ಥರ ಹೆಸರು ಬದಲಾವಣೆಗೆ
ಅವಕಾಶ ಮಾಡಿಕೊಟ್ಟಿದೆ.

ಬೆಂಗಳೂರು (Bengaluru), (ಸೆಪ್ಟೆಂಬರ್ 01): ಹೊಸ ಪಡಿತರ ಚೀಟಿ (Ration Card) ವಿತರಣೆಗೆ ಸರ್ಕಾರ ಯಾವಾಗ ಅನುಮತಿ ಕೊಡುತ್ತದೆ ಎಂಬ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ.
ಇನ್ನು ಈಗಾಗಲೇ ಬಿಪಿಎಲ್ (BPL) ಕಾರ್ಡ್ಗೆ ಸಲ್ಲಿಕೆಯಾದ ಅರ್ಜಿಗಳು ವಿಲೇವಾರಿಯಾಗಿಲ್ಲ. ಇದರ ಮಧ್ಯೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ಗಾಗಿ ಜನರು
ಅಲೆದಾಡುತ್ತಿದ್ದಾರೆ. ಇದರ ಮಧ್ಯೆ ಬಿಪಿಎಲ್ ದಾರರಿಗೆ ಹೊಸ ಸಂಕಷ್ಟ ಎದುರಾಗಿದೆ. ಹೌದು…ಬಿಪಿಎಲ್ ಕಾರ್ಡ್ನಲ್ಲಿ ಪುರುಷರು ಮುಖ್ಯಸ್ಥರಾಗಿದ್ದರಿಂದ ಮಹಿಳೆಯರಿಗೆ ಸರ್ಕಾರ ನೀಡುತ್ತಿರುವ 2000 ರೂ.
ಅನೂರ್ಜಿತ ವಿವಾಹದಿಂದ ಜನಿಸಿದ ಮಕ್ಕಳು ಪೋಷಕರ ಆಸ್ತಿ ಪಡೆಯಲು ಅರ್ಹರು : ಸುಪ್ರೀಂ ಕೋರ್ಟ್
ಗೃಹಲಕ್ಷ್ಮೀ ಯೋಜನೆಯಿಂದ (Gruha Lakshmi Scheme) ವಂಚಿತರಾಗಿದ್ದಾರೆ. ಇದೀಗ ಸರ್ಕಾರ, ಮನೆ ಮುಖ್ಯಸ್ಥರ ಹೆಸರು ಬದಲಾವಣೆಗೆ ಇಂದಿನಿಂದ ಸೆಪ್ಟೆಂಬರ್ (September) 01 ಅವಕಾಶ ನೀಡಿದೆ.
ಇಂದಿನಿಂದ ತಿದ್ದುಪಡಿಗೆ ಅವಕಾಶ
ನಿಯಮದ ಪ್ರಕಾರ ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು. ವಯಸ್ಕ ಮಹಿಳೆ ಮುಖ್ಯಸ್ಥರಿದ್ದರೆ ಮಾತ್ರ ಬಿಪಿಎಲ್ ಸೌಲಭ್ಯ ದೊರೆಯಲಿದೆ ಆದರೆ ಆಹಾರ ಇಲಾಖೆಯ ಪ್ರಕಾರ 6 ಲಕ್ಷಕ್ಕೂ ಹೆಚ್ಚು
ಬಿಪಿಎಲ್ ಪುರುಷ ಮುಖ್ಯಸ್ಥ ಕಾರ್ಡ್ ದಾರರಿದ್ದಾರೆ . ವಯಸ್ಕ ಮಹಿಳೆ ಇದ್ದೂ ಪುರುಷ ಮುಖ್ಯಸ್ಥ ಇರುವ ಕಾರ್ಡ್ ನಿಂದ ಅರ್ಜಿ ಸಲ್ಲಿಸಲು ಬರುವುದಿಲ್ಲ. ಅಲ್ಲದೇ ಮನೆಯ ಮಹಿಳೆ ಇದ್ದರೂ ಗೃಹಲಕ್ಷ್ಮಿ
ಎರಡು ಸಾವಿರ ದುಡ್ಡು ಸಿಗದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಮನೆಯೊಡತಿ ಹೆಸರು ಬದಲಾವಣೆಗೆ ಸೆಪ್ಟೆಂಬರ್ 1ರಿಂದ ಸೆ,10ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಹತ್ತು ದಿನದಲ್ಲಿ
ಹೆಸರು ಬದಲಾವಣೆ (Amendment of bpl card) ಮಾಡಿಸಿಕೊಳ್ಳಬೇಕು.

ರೇಷನ್ ಕಾರ್ಡ್ನಲ್ಲಿ (Ration Card) ಹೆಸರು ಬದಲಾವಣೆ, ಆಧಾರ್ ಕಾರ್ಡ್ನಲ್ಲಿರುವ (Aadhar Card) ಹೆಸರು ಸೇರ್ಪಡೆ, ಹೊಸ ಸದಸ್ಯರು ಸೇರಿಸುವುದು,ಮತ್ತು ಯಾರಾದರೂ ಮೃತಪಟ್ಟರೆ ಅಂಥವರ
ಹೆಸರು ತೆಗೆಯುವುದು. ಮತ್ತು ಬೇರೆ ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆ ಮಾಡಲು ಆಹಾರ ಇಲಾಖೆ ಅವಕಾಶ ಕೊಟ್ಟಿದೆ. ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಓನ್ ಹಾಗೂ ಕರ್ನಾಟಕ
ಓನ್ ಸೇರಿ ಇತರ ಕಡೆಗಳಲ್ಲಿ ರೇಷನ್ ಕಾರ್ಡ್ (Ration Card) ಮಾರ್ಪಾಡು, ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.
ಆಹಾರ ಇಲಾಖೆಯ ಪ್ರಕಾರ 6 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಪುರುಷ ಮುಖ್ಯಸ್ಥ ಕಾರ್ಡ್ ದಾರರಿದ್ದಾರೆ. ಕಾರ್ಡ್ನ ಮುಖ್ಯಸ್ಥರು ಪುರುಷಾರಾಗಿದ್ದರೆ ಅನ್ನಭಾಗ್ಯ, ಗೃಹಲಕ್ಷ್ಮಿ ಸ್ಕೀಂ ಸಿಗಲ್ಲ. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು
ಬಿಪಿಎಲ್, ಎಪಿಎಲ್ ಕಾರ್ಡ್ (APL Card) ಮನೆಯೊಡತಿಯೇ ಆಗಿರಬೇಕು. ಇಲ್ಲದಿದ್ದರೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಎರಡೂ ಯೋಜನೆಗೂ ಅನರ್ಹರು. ಅಲ್ಲದೇ ಕಾರ್ಡ್ ನಲ್ಲಿ 18 ವರ್ಷದ ಒಳಗಿದ್ದ
ಬಾಲಕಿಯರು ಇದ್ರೆ ತೊಂದರೆ ಇಲ್ಲ. ಆದ್ರೆ ವಯಸ್ಕ ಮಹಿಳೆ ಇದ್ದೂ ಕಾರ್ಡ್ ಮುಖ್ಯಸ್ಥ ಗಂಡಸಾಗಿದ್ದರೆ ಅಂತವರಿಗೆ ಅನ್ನಭಾಗ್ಯ ಸ್ಕೀಂ ದೊರೆಯುವುದಿಲ್ಲ. ಹೀಗಾಗಿ ಮನೆ ಮುಖ್ಯಸ್ಥರ ಹೆಸರು ಬದಲಾವಣೆಗೆ
ಅವಕಾಶ ನೀಡಲಾಗಿದೆ.
ಮೇಘಾ