ಅಬ್ಬಾ ಬಚಾವಾದೆವು: ಕೆ.ಎಸ್.ಆರ್.ಟಿ.ಸಿ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ 40 ಮಂದಿ ಪಾರು

Davanagere: ಕೆ.ಎಸ್.ಆರ್.ಟಿ.ಸಿಯ (KSRTC) ಒಂದು ತಪ್ಪು ನಿರ್ಧಾರ ಇದೀಗ ಜನರ (KSRTC Break failure near DVG) ಆಕ್ರೋಶಕ್ಕೆ ಕಾರಣವಾಗಿದೆ. ದಾವಣಗೆರೆ ನಗರದಲ್ಲಿ ಸಂಚರಿಸುವ

ಬಸ್ ಅನ್ನು ಸಾರಿಗೆ ಸಂಸ್ಥೆ ಶುಕ್ರವಾರ ಏಕಾಏಕಿ ಚಿತ್ರದುರ್ಗಕ್ಕೆ (Chitradurga) ಟ್ರಿಪ್ ಹೊಡೆದ ಕಾರಣ ನಡು ರಸ್ತೆಯಲ್ಲೇ ಬ್ರೇಕ್ ಫೇಲ್ ಆಗಿ ಅಪಘಾತಕ್ಕೀಡಾಗಿದೆ. ಈ ವೇಳೆ ಬಸ್ ಚಾಲಕನ ಸಮಯ

ಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ ತಪ್ಪಿದೆ. ಬಸ್ ಬ್ರೇಕ್ ಫೇಲ್ (Bus Break Fail) ಆಗಿದ್ದು ಗಮನಕ್ಕೆ ತಕ್ಷಣ ಚಾಲಕ ಖಾಲಿ ಪ್ರದೇಶಕ್ಕೆ ಬಸ್ ಸಂಚರಿಸಿ ನಿಲ್ಲಿಸುವಲ್ಲಿ ಬಸ್ ಚಾಲಕ ಯಶಸ್ವಿಯಾಗಿದ್ದಾರೆ.

ಅದರೊಳಗಿದ್ದ 40 ಪ್ರಯಾಣಿಕರು (KSRTC Break failure near DVG) ಸುರಕ್ಷಿತವಾಗಿ ಬಸ್ ನಿಂದ ಕೆಳಗಿಳಿದಿದ್ದಾರೆ.

ನಗರದಲ್ಲಿ ಸಂಚಾರ ಮಾಡಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್ ಚಿತ್ರದುರ್ಗಕ್ಕೆ ಬಿಟ್ಟಿದ್ದು, ಮಾರ್ಗ ಮಧ್ಯೆ ಅಪಘಾತವಾಗಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 40 ಮಂದಿ

ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ಕೆ.ಎಸ್‌.ಆರ್‌.ಟಿ. ಸಿ ಡಿಸಿ ನಡೆಗೆ ವ್ಯಕ್ತವಾಗಿದೆ. ಸಾರಿಗೆ ಇಲಾಖೆಯ ಬಸ್ ಬ್ರೇಕ್ ಫೇಲ್ ಆಗಿದ್ದ ಪರಿಣಾಮ ದಾವಣಗೆರೆ

ತಾಲೂಕಿನ ರಾಷ್ಟ್ರೀಯ ಹೆದ್ದಾರಿ 04ರ ಹೆಬ್ಬಾಳ್ ಟೋಲ್ ಗೇಟ್ (Hebbal Tollgate) ಬಳಿ ಅಪಘಾತ ನಡೆದಿದೆ. ಈ ನಡುವೆ ಚಾಲಕನ ಸಮಯ ಪ್ರಜ್ಞೆಯಿಂದ 40 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಸ್ ಚಿತ್ರದುರ್ಗದಿಂದ ದಾವಣಗೆರೆಯತ್ತ ತೆರಳುತ್ತಿತ್ತು. ಹೀಗಿರುವಾಗ ಹೆಬ್ಬಾಳ್ ಟೋಲ್ ಗೇಟ್ ಬಳಿ ಇದ್ದಕ್ಕಿದ್ದಂತೆ ಬಸ್ ಬ್ರೇಕ್ ಫೇಲ್ ಆಗಿದೆ. ಚಾಲಕ ಬಸವರಾಜ್ ಪ್ರಯಾಣಿಕರ ಪ್ರಾಣ ಉಳಿಸಲು

ಪ್ರಯತ್ನಿಸಿದರೂ ಬಸ್ ಮಾತ್ರ ನಿಯಂತ್ರಣಕ್ಕೆ ಸಿಕ್ಕಿಲ್ಲ. ಟೋಲ್ ಗೇಟ್ ಹಳಿ ಬರುತ್ತಿದ್ದಂತೆ ಮೊದಲು ಅಲ್ಲಿದ್ದ ಚರಂಡಿಯ ಮೇಲೆ ಹತ್ತಿತ್ತು ಅದರ ವೇಗ ಸ್ವಲ್ಪ ತಗ್ಗಿತ್ತು ಅದಾದ ಬಳಿಕ ಬಸ್ ನಿಯಂತ್ರಣಕ್ಕೆ

ಸಿಕ್ಕಿದ ಮೇಲೆ ಚಾಲಕ ಖಾಲಿ ಜಾಗದಲ್ಲಿ ಬಸ್ ನ್ನು ನಿಲ್ಲಿಸುವಲ್ಲಿ ಬಸ್ ಚಾಲಕ ಬಸವರಾಜ್ (Basavaraj) ಯಶಸ್ವಿಯಾಗಿದ್ದಾರೆ. ಅಲ್ಲಿಯವರೆಗೂ ಭಯದಲ್ಲಿದ್ದ 40 ಪ್ರಯಾಣಿಕರು, ಬಸ್ ಸುರಕ್ಷಿತವಾಗಿ

ನಿಲ್ಲುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.

ತಮ್ಮ ಜೀವ ಉಳಿಸಿದ ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾಲಕ ಸೇರಿದಂತೆ ಕೆಲ ಪ್ರಯಾಣಿಕರಿಗೆ ಚಿಕ್ಕ-ಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ

ಚಿಕಿತ್ಸೆಗಾಗಿ ರವಾನಿಸಲಾಗಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದರು.

ಬಸ್ ನಂಬರ್ ಬೇರೆ, ಟಿಕೆಟ್‌ ನಂಬರ್ ಬೇರೆ:
ಅಪಘಾತಕ್ಕೀಡಾಗಿದ್ದ ಬಸ್ ನಂಬರ್ (Bus Number) ಬೇರೆಯಾಗಿದ್ದು, ಟಿಕೆಟ್‌ನಲ್ಲಿ ನೀಡಲಾದ ಬಸ್ ನಂಬರ್ ಬೇರೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದರ

ಹಿಂದೆ ಏನು ಅವ್ಯವಹಾರ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್‌ಬರದ ಕಾರಣ ಸಾಕಷ್ಟು ತೊಂದರೆಯಾಗುತ್ತಿದೆ ಮತ್ತು ಚನ್ನಗಿರಿ

(Channagiri)– ದಾವಣಗೆರೆ (Davanagere) ಸಂಚರಿಸುವ ಬಸ್‌ನ ಡೋರ್‌ಗಳಿಲ್ಲ. ಇನ್ನು ಚಿತ್ರದುರ್ಗಕ್ಕೆ ಇಂತಹ ಬಸ್‌ಗಳನ್ನು ಕಳಿಸಿದ್ದು, ಬ್ರೇಕ್ ಫೇಲ್ ಆಗಿದೆ.ಹಳೆಯ ಬಸ್‌ಗಳನ್ನು ಮತ್ತೆ ರಿಪೇರಿ

ಮಾಡಿಸಿ ಅವುಗಳನ್ನು ಬಳಸುತ್ತಿದ್ದಾರೆ. ಸಾರ್ವಜನಿಕರ ಜೀವನಕ್ಕೆ ಬೆಲೆಯೇ ಇಲ್ಲ ಎಂದು ಕೆಎಸ್‌ಆರ್‌ಟಿಸಿ ಡಿಸಿ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.

ಕೇಂದ್ರ ಸರಕಾರದ ನೆಹರು ನ್ಯಾಷನಲ್ ಅರ್ಬನ್ ರಿನಿವಲ್ ಮಿಷನ್ (National Urban Renewal Mission) ನಡಿ ನಗರ ಸಂಚಾರ ವ್ಯವಸ್ಥೆಗೆ ಬಸ್ ನೀಡುವುದು ಯೋಜನೆಯ ಉದ್ದೇಶವಾಗಿತ್ತು.

ಮೊದಲ ಹಂತದಲ್ಲಿ 60 ಬಸ್ ಒದಗಿಸಲಾಗಿತ್ತು. ಎರಡನೇ ಹಂತದಲ್ಲಿ ಚಿತ್ರದುರ್ಗ, ದಾವಣಗೆರೆ, ಭದ್ರಾವತಿ, ಶಿವಮೊಗ್ಗ ಸಿಟಿ (Shimoga City) ಸಂಚಾರಕ್ಕೆ ನೂರು ಬಸ್‌ಗಳನ್ನು ನೀಡಲಾಗಿತ್ತು.

ಇವುಗಳಲ್ಲಿ ದಾವಣಗೆರೆ ನಗರಕ್ಕೆ 35 ಬಸ್‌ಗಳನ್ನು ನೀಡಲಾಗಿತ್ತು. ಶಿವಮೊಗ್ಗ 30, ಚಿತ್ರದುರ್ಗ 15,ಭದ್ರಾವತಿ ನಗರಕ್ಕೆ 20 ಬಸ್‌ಗಳನ್ನು ನೀಡಲಾಗಿತ್ತು. ಇವುಗಳು ಲೈಲ್ಯಾಂಡ್ ವಿಎಸ್-4 ಮಾದರಿಯ

ಮಿನಿ ಬಸ್ (Mini Bus) ಆಗಿದೆ. ಅಂದರೆ ತೀರಾ ಚಿಕ್ಕದೂ ಅಲ್ಲದ, ತೀರಾ ದೊಡ್ಡದೂ ಅಲ್ಲದ, ಮಧ್ಯಮ ಗಾತ್ರದ ಸುಮಾರು 35 ಸೀಟುಗಳ ಸಾಮರ್ಥ್ಯದ ಬಸ್‌ಗಳು ಇದಾಗಿದೆ..ಹೀಗಾಗಿ ಇನ್ನಾದರೂ

ಕೆಎಸ್‌ಆರ್‌ಟಿಸಿ ಡಿಸಿ (DC) ಜನರ ಜೀವನದ ಜತೆ ಚೆಲ್ಲಾಟವಾಡದೆ ಉತ್ತಮ ಬಸ್‌ಗಳನ್ನು ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ.

ಇದನ್ನು ಓದಿ: ತಮಿಳುನಾಡಿನವರು ಕೇಳುವ ಮೊದಲೇ ಕಾಂಗ್ರೆಸ್ ಸರ್ಕಾರ ನೀರು ಬಿಟ್ಟಿದೆ – ಸಿ.ಟಿ. ರವಿ ವಾಗ್ದಾಳಿ

ಮೇಘಾ ಮನೋಹರ ಕಂಪು

Exit mobile version