ಬೆಂಗಳೂರು-ಮೈಸೂರು ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ : ರಾಜಹಂಸ, ವೋಲ್ವೋ ಬಸ್ಸಿನ ದರ ಎಷ್ಟು?

Bengaluru : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC), ಇದೀಗ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಚಾಲನೆ ಪಡೆದ ಬೆನ್ನಲ್ಲೇ, ಬೆಂಗಳೂರು-ಮೈಸೂರು ಮಾರ್ಗದಲ್ಲಿ ಚಲಿಸುವ ಕೆಎಸ್‌ಆರ್‌ಟಿಸಿ ಬಸ್ಸಿನ (KSRTC bus fare hike) ದರವನ್ನು ಹೆಚ್ಚಳ ಮಾಡಿದೆ.

ಕರ್ನಾಟಕದ ಅಂತರ-ರಾಜ್ಯ ಬಸ್ ಸೇವೆ, ನೂತನವಾಗಿ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bangalore-Mysore Expressway)

ವಿಧಿಸಲಾದ ಟೋಲ್ ಶುಲ್ಕದ ನಂತರದಲ್ಲಿ ಬೆಂಗಳೂರಿನಿಂದ ಮೈಸೂರು ಮಾರ್ಗಗಳಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ ದರವನ್ನು ಹೆಚ್ಚಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕದ ಅಂತರ-ರಾಜ್ಯ ಬಸ್ ಸೇವೆಯು ಬುಧವಾರ ತನ್ನ ಬೆಂಗಳೂರಿನಿಂದ ಮೈಸೂರು ಮಾರ್ಗಗಳಲ್ಲಿ

ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾಗುವ ಬಸ್ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮವು ತನ್ನ ಸಾರಿಗೆ ಬಸ್‌ಗಳಲ್ಲಿ (KSRTC bus fare hike) ಪ್ರಯಾಣಿಸುವ ಪ್ರಯಾಣಿಕರಿಗೆ 15 ರೂ. ನಿಗದಿಪಡಿಸಿದೆ.

ಇದನ್ನೂ ಓದಿ : https://vijayatimes.com/dattatreya-hosabale-statement/

ರಾಜಹಂಸ ಅಲ್ಟ್ರಾ ಡಿಲಕ್ಸ್ ಬಸ್‌ಗಳಲ್ಲಿ 18 ರೂ. ಹೆಚ್ಚಳ ಮಾಡಲಾಗಿದೆ ಮತ್ತು ಮಲ್ಟಿ ಆಕ್ಸಲ್ ಎಸಿ ಬಸ್‌ಗಳಲ್ಲಿ 20 ರೂ. ಹೆಚ್ಚಳ ಮಾಡಲಾಗಿದೆ.

ಈ ರೀತಿ ಶುಲ್ಕವನ್ನು ನಿಗದಿಪಡಿಸಿದೆ ಎಂದು ರಾಜ್ಯ ಸಾರಿಗೆ ಸಂಸ್ಥೆಗಳು ವರದಿಯಲ್ಲಿ ತಿಳಿಸಿದೆ. ಭಾರತೀಯ ರಾಷ್ಟ್ರೀಯ

ಹೆದ್ದಾರಿ ಪ್ರಾಧಿಕಾರ (NHAI) ಮಂಗಳವಾರ ಮಹತ್ವಾಕಾಂಕ್ಷೆಯ ದಶಪಥ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಬೆಂಗಳೂರಿನಿಂದ ನಿಡಘಟ್ಟ ವಿಭಾಗಕ್ಕೆ (55 ಕಿಮೀ) ಟೋಲ್ ಸಂಗ್ರಹಿಸಲು ಪ್ರಾರಂಭಿಸಿದೆ.

ಎಕ್ಸ್‌ಪ್ರೆಸ್‌ವೇಯಲ್ಲಿ ಏಕಮುಖ ಪ್ರಯಾಣಕ್ಕೆ ಮಿನಿ ಬಸ್‌ಗಳಿಗೆ 220 ರೂ. ಮತ್ತು ಬಸ್‌ಗಳಿಗೆ 460 ರೂ. ಟೋಲ್ ಶುಲ್ಕವನ್ನು ರಾಷ್ಟ್ರೀಯ ಹೆದ್ದಾರಿ (National Highway) ಪ್ರಾಧಿಕಾರ ನಿಗದಿಪಡಿಸಿದ್ದರಿಂದ

ಕೆಎಸ್‌ಆರ್‌ಟಿಸಿ ಬಸ್ ದರವನ್ನು ಹೆಚ್ಚಿಸಲು ಕಾರಣ ಎನ್ನಲಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುವ ಬಸ್‌ ಪ್ರಯಾಣಿಕರಿಗೆ ಮಾತ್ರ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸುದ್ದಿಗಾರರಿಗೆ ತಿಳಿಸಿದೆ.

ಇದನ್ನೂ ಓದಿ : https://vijayatimes.com/chatgpt-application/

ಬೆಂಗಳೂರಿನಿಂದ ನಿಡಘಟ್ಟ ಮಾರ್ಗದ ಕಾರುಗಳಿಗೆ 135 ರೂ. ಟೋಲ್ ಶುಲ್ಕವನ್ನು ನಿಗದಿಪಡಿಸಲಾಗಿದೆ, ಆದರೆ ಮದ್ದೂರಿನಿಂದ ಮೈಸೂರಿಗೆ 120 ರೂ.

ನಿಗದಿಪಡಿಸಲಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಸಂಪೂರ್ಣವಾಗಿ ತಗಲುವ ಒಟ್ಟು ಟೋಲ್ (Toll) ಶುಲ್ಕ 255 ರೂ. ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇಯನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ಮಾಡಿದರು.

Exit mobile version