ಹಾಸನದಲ್ಲಿ ಭವಾನಿ ಸ್ಪರ್ಧೆ ಮಾಡಿದ್ರೆ ಗೆಲ್ಲುವುದಿಲ್ಲ : ಕುಮಾರಸ್ವಾಮಿ ಹೊಸ ಬಾಂಬ್

Hubballi : ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ (JDS) ಟಿಕೆಟ್‌ಯಾರಿಗೆ ಎಂಬ ಗೊಂದಲದ ನಡುವೆಯೇ ಎಚ್.ಡಿ. ಕುಮಾರಸ್ವಾಮಿ (H. D. Kumaraswamy) ಅವರು ಹೊಸ ಬಾಂಬ್‌ ಸಿಡಿಸಿದ್ದು, ಹಾಸನ ವಿಧಾನಸಭಾ ಕ್ಷೇತ್ರದಿಂದ (Hassan Assembly Constituency) ಭವಾನಿ ರೇವಣ್ಣ (Bhavani Revanna) ಅವರು ಸ್ಪರ್ಧೆ ಮಾಡಿದ್ರು, ಅವರು ಯಾವುದೇ ಕಾರಣಕ್ಕೂ (Kumaraswamy statement) ಗೆಲ್ಲುವುದಿಲ್ಲ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಜನತಾದಳ ಪಕ್ಷಕ್ಕೆ ಬೆನ್ನೆಲುಬಾಗಿ ಸದೃಢ ಕಾರ್ಯಕರ್ತರಿದ್ದಾರೆ.

ನಮ್ಮ ಪಕ್ಷದಲ್ಲಿ ಕಾರ್ಯಕರ್ತರ ನಿರ್ಧಾರವೇ ಅಂತಿಮ. ನಾನು ನನ್ನದೆಯಾದ ರೀತಿಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸರ್ವೇ ಮಾಡಿಸಿ ವರದಿ ತರಿಸಿಕೊಂಡಿದ್ದೇನೆ.

ಆ ಪ್ರಕಾರ ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೇ ಗೆಲ್ಲುವುದಿಲ್ಲ.

ಹೀಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು, ನಾವು ನಮ್ಮ ಪಕ್ಷದಿಂದ ಸಾಮಾನ್ಯ ಕಾರ್ಯಕರ್ತನನ್ನೇ ಅಭ್ಯರ್ಥಿಯನ್ನಾಗಿ ಮಾಡಿ ಗೆಲುವು ಸಾಧಿಸುತ್ತೇವೆ  ಎಂದರು.

ಹಾಸನ ಟಿಕೆಟ್‌ ವಿಚಾರವಾಗಿ ಮಾದ್ಯಮಗಳು ತಮಗೆ ಬೇಕಾದಂತೆ ಸುದ್ದಿ ಮಾಡುತ್ತಿವೆ. ನಾಲ್ಕು ಗೋಡೆಗಳ ನಡುವೆ ನಡೆದ ಚರ್ಚೆ (Kumaraswamy statement) ಮಾದ್ಯಮಗಳಿಗೆ ಹೇಗೆ ತಿಳಿಯುತ್ತದೆ.

ಇದನ್ನೂ ಓದಿ : https://vijayatimes.com/shruti-haasan-appeals-producers/

ಇನ್ನು ಈಗ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಟ್ಟು ನಾಳೆ ಅವರು ಸೋತ ಮೇಲೆ ನಾನು ಮಾಧ್ಯಮಗಳಿಗೆ ಆಹಾರವಾಗಲ್ಲ.

ನಾನು ಮೊದಲಿಂದಲೂ ಹಾಸನ ಕ್ಷೇತ್ರದಲ್ಲಿ ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡುತ್ತೇವೆ ಎಂದೇ ಹೇಳಿದ್ದೇನೆ.

ನಾನು ಈಗಲೂ ನನ್ನ ಮಾತಿಗೆ ಬದ್ದನಾಗಿದ್ದೇನೆ. ಒಬ್ಬ ವ್ಯಕ್ತಿ ನಮ್ಮ ಕುಟುಂಬದ ಮೇಲೆ ಸವಾಲು ಹಾಕಿದ್ದು,

ಆಗಿನಿಂದ ನಾನು ಹಾಸನ ಕ್ಷೇತ್ರವನ್ನು ಗೆಲ್ಲುವ ನಿರ್ಧಾರ ಮಾಡಿದ್ದೇನೆ. ಹಾಸನದಲ್ಲಿ ಜನತಾದಳದ ಈ ಬಾರಿ ಪ್ರಚಂಡ ಬಹುಮತದಲ್ಲಿ (Kumaraswamy statement) ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಎಚ್.ಡಿ.ರೇವಣ್ಣ ಅವರ ಕುಟುಂಬಕ್ಕೆ ಯಾರು ತಲೆ ತುಂಬಿತ್ತಿದ್ದಾರೆ ಎಂದು ನನಗೆ ಗೊತ್ತು.

ಕೆಲ ಶಕುನಿಗಳು ದೇವೇಗೌಡರ (H. D. Deve Gowda) ಕುಟುಂಬವನ್ನು ಮುಗಿಸಬೇಕು ಎಂದು ಕುತಂತ್ರ ರೂಪಿಸುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/bollywood-actor-shahrukhkhan/

ಈ ರೀತಿಯ ಕುತಂತ್ರಗಳಿಂದಲೇ ಕುರುಕ್ಷೇತ್ರ ಯುದ್ಧವಾಗಿದೆ.  ನಮ್ಮ ಕುಟುಂಬದಲ್ಲಿ ನಡೆಯುತ್ತಿರುವ ಬೆಳವಣಿಗೆ ಮಾಧ್ಯಮ ಸೃಷ್ಟಿಯಾಗಿದೆ.

ಇದೆಲ್ಲಾ ಮಾಧ್ಯಮಗಳ ಸೃಷ್ಟಿಸುತ್ತಿರುವ ಸುದ್ದಿಯಾಗಿದೆ. ಎಲ್ಲಾ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರತಿಕ್ರಿಯೆ ನಡೆಯುತ್ತಿದೆ. ಅದೇ ರೀತಿ ನಮ್ಮ ಪಕ್ಷದಲ್ಲೂ ನಡೆಯುತ್ತಿದೆ ಎಂದರು.

Exit mobile version