Tumkur : ಬಿಜೆಪಿ (kumaraswamy statement about cow) ಸರಕಾರ ಕೇವಲ ಬರೀ ಬಾಯಿ ಮಾತಿನಲ್ಲಿ ಗೋವಿನ ಹೆಸರು ಹೇಳುತ್ತಿದೆಯೇ ವಿನಾ ಗೋವುಗಳಿಗಾಗಿ ಏನೂ ಮಾಡುತ್ತಿಲ್ಲ. ಲಸಿಕೆ,
ಚಿಕಿತ್ಸೆ ನೀಡುತ್ತಿಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಜೆಡಿಎಸ್‌ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ (Tweet) ಮೂಲಕ ವಾಗ್ದಾಳಿ ನಡೆಸಿರುವ ಅವರು, ಬಿಜೆಪಿ ಸರಕಾರ ಕೇವಲ ಬರೀ ಬಾಯಿ ಮಾತಿನಲ್ಲಿ ಗೋವಿನ ಹೆಸರು (kumaraswamy statement about cow) ಹೇಳುತ್ತಿದೆಯೇ ವಿನಾ ಗೋವುಗಳಿಗಾಗಿ ಏನೂ ಮಾಡುತ್ತಿಲ್ಲ. ಲಸಿಕೆ, ಚಿಕಿತ್ಸೆ ನೀಡುತ್ತಿಲ್ಲ.
https://vijayatimes.com/chandrababu-2024-last-election/
ನಮ್ಮ ಕಣ್ಮುಂದೆಯೇ ಗೋವುಗಳು ಸಾಯುತ್ತಿವೆ ಎಂದು ಆ ಯುವಕ ಹೇಳಿದರು ಎಂದಿದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ, ರೋಗಪೀಡಿತ ಗೋವುಗಳಿಗೆ ರಾಜ್ಯ ಬಿಜೆಪಿ ಸರಕಾರದಿಂದ ಲಸಿಕೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕುಣಿಗಲ್ ಕ್ಷೇತ್ರದ ಹನುಮಾಪುರ ಗ್ರಾಮದ ಯುವ ರೈತ ಗಿರೀಶ್ ತನ್ನ ಹಸುವಿನೊಂದಿಗೆ ಇಂದು ನನ್ನ ಕಾರನ್ನು ಅಡ್ಡಗಟ್ಟಿ ಮನವಿ ಸಲ್ಲಿಸಿದರು ಎಂದು ಹೇಳಿದ್ದಾರೆ.

ಇನ್ನು ಕಳೆದ ಕೆಲವು ವಾರಗಳಲ್ಲಿ ರಾಜ್ಯದಲ್ಲಿ 2,070 ಜಾನುವಾರುಗಳು ಈ ಚರ್ಮರೋಗಕ್ಕೆ ಬಲಿಯಾಗಿವೆ. ರಾಜ್ಯದ 28 ಜಿಲ್ಲೆಗಳಿಗೂ ಚರ್ಮರೋಗ ವ್ಯಾಪಿಸಿದ್ದು 46 ಸಾವಿರ ಜಾನುವಾರುಗಳಲ್ಲಿ ಸೋಂಕು ಹರಡಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೈನುಗಾರಿಕೆಯನ್ನೇ ನಂಬಿಕೊಂಡಿರುವ ರೈತರು ಬದುಕು ಬೀದಿಗೆ ಬಿದ್ದಿದೆ. ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚರ್ಮರೋಗ ಈ ಹಿಂದೆಂದೂ ಕಂಡರಿಯದ ಚರ್ಮಸೋಂಕು ತೋರಿಸುತ್ತಿದ್ದು ಜಾನುವಾರುಗಳ ಶ್ವಾಸಕೋಶ ಮತ್ತು ಹೊಟ್ಟೆಗೆ ಕೂಡ ವ್ಯಾಪಿಸಿದೆ.
ಮಹಾರಾಷ್ಟ್ರ (Maharashtra) ಮತ್ತು ರಾಜಸ್ತಾನ (Rajastan) ನಂತರ ಕರ್ನಾಟಕದಲ್ಲಿ ಸೋಂಕು ಜಾನುವಾರುಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ರಾಜ್ಯದಲ್ಲಿ ಇದುವರೆಗೂ ಸುಮಾರು 2000ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ ಎನ್ನಲಾಗಿದೆ.
ಹಸುಗಳಿಗೆ ಸೂಕ್ತ ಲಸಿಕೆ ಮತ್ತು ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದು ರೈತರ ವಿರೋಧಕ್ಕೆ ಕಾರಣವಾಗಿದೆ.
- ಮಹೇಶ್.ಪಿ.ಎಚ್