ಅಯ್ಯಪ್ಪನ ದರ್ಶನಕ್ಕೆ ಭಕ್ತರ ಪರದಾಟ: ಶಬರಿಮಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಭಕ್ತಾದಿಗಳ ಗೋಳಾಟ

Thiruvananthapuram: ಪ್ರತಿ ವರ್ಷದಂತೆ ಈ ವರ್ಷವೂ ಅಯ್ಯಪ್ಪನ ದರ್ಶನಕ್ಕೆಂದು ಹೋಗಿರುವ (lackof basic facilities-Sabarimala) ಹರಿಹರಪುತ್ರ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳಿಗೆ

ಶಬರಿಮಲೆಯಲ್ಲಿ ಮೂಲಸೌಕರ್ಯಗಳು ಇಲ್ಲದೆ, ಭಕ್ತರು ಈ ಬಾರಿ ತೀವ್ರ ಸಮಸ್ಯೆ, ಕಿರಿಕಿರಿ ಅನುಭವಿಸುವಂತಾಗಿದೆ. ಹಿಂದೆಂದೂ ಕಂಡುಬಾರದ ಜನಸಂದಣಿ ಈ ವರ್ಷ ಕಂಡುಬಂದಿದ್ದು, ನೂಕುನುಗ್ಗಲಿನಲ್ಲಿ

ದರ್ಶನವೇ ಸಾಧ್ಯವಾಗಲಿಲ್ಲ ಎಂದು ಸಾವಿರಾರು (lackof basic facilities-Sabarimala) ಭಕ್ತರು ದೂರಿದ್ದಾರೆ.

ಆಂಧ್ರಪ್ರದೇಶ, ತಮಿಳುನಾಡು, ತ್ರಿಶೂರ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ (Andhra Pradesh, Tamil Nadu, Thrissur, Kozhikode and Malappuram) ಮುಂತಾದ ಸ್ಥಳಗಳಿಂದ ಬಂದ

ಸಾವಿರಾರು ಯಾತ್ರಾರ್ಥಿಗಳು ಈ ಭಾರಿ ದಟ್ಟಣೆಯನ್ನು ನೋಡಿ, ತಮ್ಮ ದೇಗುಲದ ಪ್ರವಾಸವನ್ನು ಅಲ್ಲಿಗೇ ಮೊಟಕುಗೊಳಿಸಿ ಹಿಂದಿರುಗಿದ್ದು, ಶಬರಿಮಲೆ ದೇಗುಲದಲ್ಲಿಈ ವರ್ಷ ಉಂಟಾದ ಗೊಂದಲ,

ಮೂಲಭೂತ ಸೌಕರ್ಯಗಳು ಮತ್ತು ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಯಾತ್ರಾರ್ಥಿಗಳು ದೂರಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ಸುಮಾರು ೧೦ಕಿ.ಮೀ ವಾಹನಗಳ ಸಾಲು:


ಸುಮಾರು ಹತ್ತು ಕಿಲೋಮೀಟರ್‌ಗಳಷ್ಟುದ್ದದ ವಾಹನಗಳು ಹಾಗೂ ಜನರ ಸಾಲುಗಳು ಕಂಡುಬಂದಿದ್ದು, ಊಟ, ತಿಂಡಿ, ಶೌಚಾಲಯದ ವ್ಯವಸ್ಥೆ ಇಲ್ಲದೆ ಭಕ್ತಾದಿಗಳು ಪರದಾಡುತ್ತಿರುವುದು ಕಂಡುಬಂದಿದೆ.

ಆರೋಗ್ಯ (Health) ಕೆಟ್ಟರೆ ತಕ್ಷಣದ ವೈದ್ಯಕೀಯ ಸೇವೆಯ (Medical service) ವ್ಯವಸ್ಥೆಯೂ ಶಬರಿಮಲೆಯಲ್ಲಿ ಕಂಡುಬಂದಿಲ್ಲ.

ಅರ್ಧ ದಾರಿಯಲ್ಲೇ ವಾಹನಗಳನ್ನು ಪೊಲೀಸರು (Kerala Police) ಅಡ್ಡಗಟ್ಟಿದ್ದು, ಪ್ರವಾಸಿಗರು ಗಂಟೆಗಳ ಕಾಲ ಕಾಯುವಂತಾಗಿದೆ. ಇದರಿಂದ ರೊಚ್ಚಿಗೆದ್ದ ಶಬರಿಮಲೆ ಯಾತ್ರಾರ್ಥಿಗಳು

ಮಂಗಳವಾರ ಎರುಮೇಲಿಯಲ್ಲಿ ರಸ್ತೆ ತಡೆ ನಡೆಸಿ ಪಂಪಾಕ್ಕೆ ಅನುಮತಿ ನೀಡದಿರುವ ಅಧಿಕಾರಿಗಳ ನಿರ್ಧಾರವನ್ನು ವಿರೋಧಿಸಿದರು ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ವಿವಿಧ ರಾಜ್ಯಗಳ ಭಕ್ತರು ಎರುಮೇಲಿ – ರಣ್ಣಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರಮುಖ ಯಾತ್ರಾ ಕೇಂದ್ರವಾದ ಎಟ್ಟುಮನೂರು ಮಹಾದೇವ ದೇವಸ್ಥಾನದಲ್ಲಿ ಮುಂಜಾನೆ ಭಕ್ತರು ಮತ್ತು

ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಗಂಟೆಗಟ್ಟಲೆ ಕಾದರೂ ಯಾತ್ರಾರ್ಥಿಗಳನ್ನು ಶಬರಿಮಲೆಗೆ ತೆರಳದಂತೆ ತಡೆಯಲಾಗಿದೆ ಎಂದು ವರದಿ ತಿಳಿಸಿದೆ. ಎರುಮೇಲಿ ಮತ್ತು ಪಂಪಾದಲ್ಲಿ ಜನಜಂಗುಳಿ

ಇದ್ದ ಕಾರಣ ಹಿಂದಿನ ದಿನ ಬೆಳಗ್ಗೆ ಎಟ್ಟುಮನೂರು ದೇವಸ್ಥಾನಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ಶಬರಿಮಲೆಗೆ ತೆರಳಲು ಅವಕಾಶ ನೀಡಲಿಲ್ಲ.

ಈ ಘಟನೆಗೆ ಕಾರಣವೇನು?


ಡಿಸೆಂಬರ್ 8ರಂದು ಬೆಳಿಗ್ಗೆ ಪ್ರಾರಂಭವಾದ ಸಂಚಾರ ದಟ್ಟಣೆ ಹಾಗೂ ನೂಕುನುಗ್ಗಲು ನಾಲ್ಕು ದಿನಗಳ ಕಾಲ ಪಂಪಾ, ನಿಲಕ್ಕಲ್ ಮತ್ತು ಸನ್ನಿಧಾನಂನಲ್ಲಿ ಮುಂದುವರಿಯಿತು. ಯಾತ್ರೆಯ ಮೊದಲ

ಎರಡು ವಾರಗಳಲ್ಲಿ ಯಾತ್ರಾರ್ಥಿಗಳ ದೈನಂದಿನ ಸರಾಸರಿ ಅರ್ಧ ಲಕ್ಷ ಡಿಸೆಂಬರ್ 7ರ ನಂತರ ಹೆಚ್ಚಿನ ಭಕ್ತರ ಹರಿವು ಪ್ರಾರಂಭವಾಯಿತು. ಇದಕ್ಕೆ ಹಲವು ಕಾರಣ ಊಹಿಸಲಾಗಿದೆ.

ಇನ್ನು ಈ ಬರಿ ಚೆನ್ನೈನಲ್ಲಿ ಉಂಟಾದಾ ಮಿಚಾಂಗ್ ಪ್ರವಾಹದಿಂದ ಕೇರಳಕ್ಕೆ ತೆರಳುವ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಆಗ ಅಲ್ಲೇ ಉಳಿದಿದ್ದವರು ಈಗ ಬರುತ್ತಿದ್ದಾರೆ ಮತ್ತು ನೆರೆಯ ರಾಜ್ಯ

ತೆಲಂಗಾಣದಲ್ಲಿ ಚುನಾವಣೆ ಮುಗಿಸಿದ ನಂತರ ಅಲ್ಲಿಂದ ಬರುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಪೊಲೀಸರು ಹಾಗೂ ಭದ್ರತಾ ವ್ಯವಸ್ಥೆಯಲ್ಲಿಯೂ ತುಸು ಲೋಪವಾಗಿದ್ದು,

ಜನರನ್ನು ನಿಯಂತ್ರಿಸುವುದು ಕಷ್ಟವಾಗಿದೆ.

ಇದನ್ನು ಓದಿL‘ಜಾತಿ ಗಣತಿ’ ವಿರುದ್ಧ ಎಲ್ಲ ಬಲಿಷ್ಠರು ಒಟ್ಟಾಗಿದ್ದಾರೆ: ಡಿಕೆಶಿ ನಿಲುವು ವಿರೋಧಿಸಿದ ಖರ್ಗೆ

Exit mobile version