ಗೃಹಲಕ್ಷ್ಮೀ ಯೋಜನೆಯ 2000 ರೂ. ಅತ್ತೆಗಾ? ಸೊಸೆಗಾ? ಗೊಂದಲಗಳಿಗೆ ತೆರೆ ಎಳೆದ ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಜೂನ್ (June) 1 ರಿಂದ, 5 ಖಾತರಿಗಳು ಬಹುತೇಕ ಖಚಿತವಾಗಿ ಜಾರಿಗೆ ಬರುವ ಸಾಧ್ಯತೆ ಇದೆ.ಈ ಖಾತರಿಗಳಲ್ಲಿ ಒಂದಾದ ಮುಖ್ಯಮಂತ್ರಿ ಗೃಹಲಕ್ಷ್ಮೀ (Gruhalakshmi) ಯೋಜನೆ ಮೂಲಕ ಗೃಹಿಣಿಯರಿಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ವಿತರಿಸಲಾಗುತ್ತದೆ. ಆದರೆ, ಗೃಹಿಣಿಯಾಗಿ ಅರ್ಹತೆ ಹೊಂದಿರುವವರನ್ನು ಗುರುತಿಸುವಲ್ಲಿ ಸರ್ಕಾರಕ್ಕೆ ಮಹತ್ವದ ಸವಾಲು ಎದುರಾಗಿದೆ.

ಕೆಲವು ಅವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅತ್ತೆ-ಸೊಸೆ ನಡುವೆ ಪೈಪೋಟಿ ಏರ್ಪಟ್ಟು ಗೊಂದಲಕ್ಕೆ ಕಾರಣವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಈ ವಿಷಯದ ಬಗ್ಗೆ ಮಾತನಾಡಿ ಗೃಹಲಕ್ಷ್ಮೀ ಯೋಜನೆಯಿಂದ ಅತ್ತೆಗೆ ಹಣ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದಲ್ಲದೆ, ಸೊಸೆ ಈ ಯೋಜನೆಗೆ ಅರ್ಹರಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಮೇ 30 ರಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಬ್ಬಾಳ್ಕರ್ (Hebbalkar) , ಸಂಪ್ರದಾಯದ ಪ್ರಕಾರ ಮನೆಯ ಯಜಮಾನಿ ಅತ್ತೆಯಾಗುತ್ತಾಳೆ, ಆದ್ದರಿಂದ ಅವರಿಗೆ ಹಣವನ್ನು ನೀಡಲಾಗುತ್ತದೆ ಎಂದು ವಿವರಿಸಿದರು.

ಬೇಕಾದರೆ ಅತ್ತೆ ಪ್ರೀತಿಯಿಂದ ಸೊಸೆಗೆ ಯೋಜನೆಯ ಹಣ ನೀಡಲಿ.ಅವರ ಹೇಳಿಕೆಯ ಪ್ರಕಾರ, ಅನುಷ್ಠಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ಪಡೆಯಲು ನಾಳೆ ಅಧಿಕಾರಿಗಳೊಂದಿಗೆ ಸಭೆ ಕರೆಯಲು ಯೋಜಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ಸೊಸೆಗೆ ವಿಸ್ತರಿಸಬಾರದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಪರೋಕ್ಷವಾಗಿ ಸಲಹೆ ನೀಡಿದರು.

ಅವಿಭಕ್ತ ಕುಟುಂಬಗಳಲ್ಲಿ ಇನ್ನೊಂದೆಡೆ ಪೈಪೋಟಿ ಶುರುವಾಗಿದೆ,ಸರ್ಕಾರ ಅತ್ತೆ ಮತ್ತು ಸೊಸೆ ಇಬ್ಬರಿಗೂ ಎರಡು ಸಾವಿರ ರೂಪಾಯಿ ನೀಡಬೇಕು.ಒಬ್ಬರಿಗೆ ಕೊಟ್ಟು ಇನ್ನೊಬ್ಬರಿಗೆ ಕೊಡದೆ ಇಬ್ಬರ ನಡುವೆ ಭೇದಭಾವ ಮಾಡಬಾರದು ಎನ್ನುವ ಬಹುತೇಕ ಅಭಿಪ್ರಾಯಗಳು ವ್ಯಕ್ತವಾಗಿವೆ. ಹೀಗಾಗಿ ಯೋಜನೆಯು ಅತ್ತೆಗಾ? ಸೊಸೆಗಾ? ಎನ್ನುವುದೇ ಬಹುತೇಕ ಗೊಂದಲವಾಗಿದ್ದು, ಇದೀಗ ಲಕ್ಷ್ಮೀ ಹೆಬ್ಬಾಳರ್ (Lakshmi Hebbalkar) ಅತ್ತೆಯೇ ಗೃಹಲಕ್ಷ್ಮೀ ಯೋಜನೆ ಅರ್ಹರಾಗುತ್ತಾರೆ ಎಂದು ಈ ಬಗ್ಗೆ ತಿಳಿಸಿದರು.

ರಶ್ಮಿತಾ ಅನೀಶ್

Exit mobile version