ಲಂಚ ನೀಡುವುದರಲ್ಲಿ ಏಷ್ಯಾ ದೇಶಗಳಲ್ಲಿಯೇ ಭಾರತ ನಂ. 1

ನವದೆಹಲಿ, ನ. 27: ಟ್ರಾನ್ಸ್‌ಪರೆನ್ಸಿ ಇಂಟರ್ ‌ನ್ಯಾಷನಲ್‌ ಭಷ್ಟಚಾರ ಕಣ್ಗಾವಲು ಸಂಸ್ಥೆಯು ಲಂಚದ ವಿಚಾರವಾಗಿ ಭಾರತದ ಬಗ್ಗೆ ಆತಂಕಕಾರಿ ಮಾಹಿತಿಯೊಂದನ್ನು ಹೊರಹಾಕಿದೆ. ಏಷ್ಯಾದ ದೇಶಗಳಲ್ಲಿ ಸಾರ್ವಜನಿಕ ಸೇವೆ ಪಡೆಯಲು ಲಂಚ ನೀಡಬೇಕಾದ ಅನಿವಾರ್ಯತೆ  ಹೆಚ್ಚಿದೆ. ಅದರಲ್ಲಿಯೂ ಭಾರತ ಮೊದಲ ಸ್ಥಾನದಲ್ಲಿದೆ.  ಜತೆಗೆ ಬಹಳಷ್ಟು ಜನರು ಇಂಥ ಸೇವೆ ಪಡೆಯಲು ತಮ್ಮ ವೈಯಕ್ತಿಕ ಪರಿಚಯವನ್ನು ಬಳಕೆ ಮಾಡುತ್ತಾರೆ ಎಂದು ಭಷ್ಟಚಾರ ಕಣ್ಗಾವಲು ಸಂಸ್ಥೆಯಾದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ವರದಿ ತಿಳಿಸಿದೆ.

ಭಾರತದಲ್ಲಿ ಶೇ. 39ರಷ್ಟು ಜನರು ಸರ್ಕಾರಿ ಸೇವೆ ಪಡೆಯಲು ಲಂಚ ನೀಡಿದ್ದಾಗೆ ಈ ವರದಿ ತಿಳಿಸಿದೆ. ಜತೆಗೆ ಶೇ. 32ರಷ್ಟು ಜನರು ಸರ್ಕಾರಿ ಸೇವೆ ಪಡೆಯಲು ತಮ್ಮ ವೈಯಕ್ತಿಕ ಸಂಪರ್ಕ ಉಪಯೋಗಿಸಿದ್ದಾಗಿ ತಿಳಿಸಿದ್ದಾರೆ. ಈ ಮೂಲಕ ಭಾರತ ಏಷ್ಯಾ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಲಂಚ ನೀಡುವುದರಲ್ಲಿ ಕಾಂಬೋಡಿಯಾದಲ್ಲಿ ಶೇ. 37 ರಷ್ಟಾದರೆ, ಇಂಡೋನೇಷ್ಯಾದಲ್ಲಿ ಶೇ. ೩೦ರಷ್ಟು, ಭಾರತ ನಂತರದ ಸ್ಥಾನದಲ್ಲಿವೆ. ಮಾಲ್ಡೀವ್ಸ್‌ ಮತ್ತು ಜಪಾನ್‌ ತಲಾ. ಶೇ. ೨ರಷ್ಟಾದರೆ, ದಕ್ಷಿಣ ಕೊರಿಯಾ ಶೇ. ೧೦ರಷ್ಟು ಹಾಗೂ ನೇಪಾಳ ಶೇ. ೧೨ ರಷ್ಟು ಕೊನೆಯ ಸ್ಥಾನದಲ್ಲಿದೆ ಎಂದು ಈ ವರದಿ ತಿಳಿಸಿದೆ.

ವೈಯಕ್ತಿಕ ಸಂಪರ್ಕ ಬಳಸುವುದರಲ್ಲಿ ಭಾರತದ ನಂತರ ಇಂಡೋನೇಷ್ಯಾ ಶೆ. 36ರಷ್ಟು ಇದ್ದರೆ, ಜಪಾನ್‌ ಶೇ. ೪ ಹಾಘೂ ಕಾಂಬೋಡಿಯಾ ಶೇ. ೬ರಷ್ಟಿದ್ದು ಕೊನೆಯ ಸ್ಥಾನದಲ್ಲಿದೆ ಎಂದು ವರದಿ ಹೇಳುತ್ತದೆ.

ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ 2000 ಜನರನ್ನು ಸಂದರ್ಶಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ದೂರು ನೀಡುವುದು ಪ್ರಮುಖವಾದರೂ ಅಂತಹ ಕ್ರಮದಿಂದ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗಿ ಬರುತ್ತದೆ ಎಂದು ಶೇ. ೬೩ ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇನ್ನು ಶೇ. 89ರಷ್ಟು ಜನರು ಸರ್ಕಾರದ ಭಷ್ಟಾಚಾರ ಅತಿದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ. ಜತೆಗೆ ಶೇ. ೧೮ರಷ್ಟು ಜನರು ಮತಕ್ಕಾಗಿ ಲಂಚ ನೀಡಿದ್ದಾಗಿ ಹೇಳಿದರೆ, ಶೇ. ೧೧ ರಷ್ಟು ಜನರು ತಮಗೆ ಪರಿಚಯ ಇರುವವರಿಂದಲೇ ಲೈಂಗಿಕ ಸುಲಿಗೆ ಕಿರುಕುಳ ಎದುರಿಸಿದ್ದಾಗಿ ತಿಳಿಸಿದ್ದಾರೆ.

ಶೇ. 63 ರಷ್ಟು ಜನರು ಭ್ರಷ್ಟಾಚಾರ ನಿಗ್ರಹಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಬಗ್ಗೆ ಇದೇ ರೀತಿಯ ಅಭಿಪ್ರಾಯವನ್ನು ಶೇ. 73ರಷ್ಟು ಜನರು ವ್ಯಕ್ತಪಡಿಸಿದ್ದಾರೆ.

Exit mobile version