ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ಮಣ್ಣಿನಡಿ ಸಿಲುಕಿರುವ 40ಜನರು

ಹಿಮಾಚಲ ಪ್ರದೇಶ, ಆ. 11: ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ ಭಾರೀ ಭೂಕುಸಿತ ಉಂಟಾಗಿದ್ದು, 40ಕ್ಕೂ ಹೆಚ್ಚು ಜನರು ಮಣ್ಣಿನಡಿ ನಾಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದ ಕಿಣ್ಣಾವುರ್ ಜಿಲ್ಲೆಯಲ್ಲಿ ಈ ದುರಂತ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಇಂದು ಮಧ್ಯಾಹ್ನ 12.45ಕ್ಕೆ ಈ ಭೂಕುಸಿತ ಸಂಭವಿಸಿದ್ದು, ಕಿಣ್ಣಾವುರ್ ಜಿಲ್ಲಾಧಿಕಾರಿ ಅಬಿದ್ ಹುಸೇನ್ ಸಾದಿಖ್ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಹಿಮಾಚಲ ಪ್ರದೇಶದ ಸಾರಿಗೆ ಬಸ್ ಸಂಚರಿಸುತ್ತಿದ್ದಾಗಲೇ ಭೂಕುಸಿತ ಉಂಟಾಗಿದ್ದು, ಬಸ್​ ಹಾಗೂ ಅದರ ಹಿಂದೆ ಮುಂದೆ ಬರುತ್ತಿದ್ದ ಕೆಲವು ವಾಹನಗಳು ಕೂಡ ಮಣ್ಣಿನಡಿ ಮುಚ್ಚಿಹೋಗಿವೆ. ಆ ಬಸ್​ನಲ್ಲಿದ್ದ 40ಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿದ್ದಾರೆ.

ಹೆಚ್​ಆರ್​ಸಿಟಿಸಿ ಸಾರಿಗೆ ಬಸ್, ಟ್ರಕ್, ಕಾರುಗಳು ಭೂಕುಸಿತದಿಂದ ಮಣ್ಣಿನಡಿ ಮುಚ್ಚಿಹೋಗಿವೆ. ರೆಕಾಂಗ್ ಪಿಯೋ- ಶಿಮ್ಲಾ ಹೆದ್ದಾರಿ ಬಂದ್ ಆಗಿದ್ದು, ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Exit mobile version