ರಂಗಸಮುದ್ರದಲ್ಲಿ ಭಾಷಾ ವೈವಿಧ್ಯ ಸಂಗಮ

ಬಹು ನಿರೀಕ್ಷಿತ ಸ್ಯಾಂಡ್ ವುಡ್ ನ ರೆಟ್ರೋ ಚಿತ್ರ ರಂಗಸಮುದ್ರ ಮಾತಿನ ಮನೆಯಿಂದ ಸಂಗೀತದ ಮನೆಗೆ ಶಿಫ್ಟ್ ಆಗಿದೆ. ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೊಣನೂರು ನಿರ್ಮಿಸುತ್ತಿರುವ ರಂಗಸಮುದ್ರ ಚಲನಚಿತ್ರದ ಡಬ್ಬಿಂಗ್ ಪೂರ್ಣಗೊಂಡಿದೆ.

ಚಿತ್ರದ ಪ್ರಮುಖ ಭೂಮಿಕೆಯಲ್ಲಿರುವ ರಂಗಾಯಣ ರಘು ಅವರು ಡಬ್ಬಿಂಗ್ ಕಾರ್ಯದಲ್ಲಿ ಭಾಗಿಯಾಗಿದ್ದರು. ಚಿತ್ರದ ಕಲಾವಿದರಾದ ಸಂಪತ್ ರಾಜ್, ಕಾರ್ತಿಕ್ , ಉಗ್ರಂ ಮಂಜು ಮತ್ತು ನಾಯಕಿ ದಿವ್ಯ ಹಾಗೂ ಸಹ ಕಲಾವಿದರ ಭಾಗದ ಡಬ್ಬಿಂಗ್ ಈಗಾಗಲೇ ಪೂರ್ಣಗೊಂಡಿದೆ.

2-3 ದಶಕಗಳ ಹಿಂದಿನ ಮಾನವೀಯ ಸೆಲೆಯ ಗ್ರಾಮೀಣ ಕಥಾ ವಸ್ತುವನ್ನು ರಂಗಸಮುದ್ರ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ಚಿತ್ರದ ನಿರ್ದೇಶಕರಾಗಿರುವ ರಾಜ್ ಕುಮಾರ್ ಅಸ್ಕಿ ಅವರೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಕಲ್ಯಾಣ ಕರ್ನಾಟಕದ ಜವಾರಿ ಭಾಷೆ-ಕರಾವಳಿ-ಮೈಸೂರು ಕರ್ನಾಟಕ ಭಾಗದ ಸಂಭಾಷಣೆಯ ಸೊಗಸು ಚಿತ್ರದಲ್ಲಿದೆ. ಭಾಷಾ ವೈವಿದ್ಯತೆಯ ಜುಗಲ್ ಬಂದಿ ಜೊತೆಗೆ ಭಾಂಧವ್ಯದ ಬೆಸುಗೆಯ ಕಥಾ ಹಂದರ ಚಿತ್ರದ ಹೈಲೈಟ್ ಆಗಿದೆ. ಚಿತ್ರದ ಚಿತ್ರೀಕರಣ ಕೂಡ ಮೈಸೂರು-ಬೆಂಗಳೂರು-ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ವಿವಿಧ ಪ್ರದೇಶಗಳು ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಂಗಸಮುದ್ರ ಚಿತ್ರಕ್ಕೆ ಗೀತ ಸಾಹಿತ್ಯ ವಾಗೀಶ್ ಚನ್ನಗಿರಿ, ಸಂಗೀತ ದೇಸೀ ಮೋಹನ್, ಸಂಕಲನ ಶ್ರೀಕಾಂತ್ ಹಾಗೂ ಹಿರಿಯ ತಂತ್ರಜ್ಞ ಗಿರಿ ಛಾಯಾಗ್ರಹಣ ಇದೆ.

Exit mobile version