Bengaluru: ಸ್ಪಂದನಾ (Spandana) ಮುಖದಲ್ಲಿ ಒಂದು ಚೂರು ಕಳೆ ಮಾಸಿಲ್ಲ. ಮಲಗಿರೋದನ್ನು ನೋಡಿದ್ರೆ ಅವಳಿನ್ನೂ ಬದುಕಿದ್ದಾಳೆ ಅಂತ ಅನಿಸ್ತಿದೆ ಎಂದು ನಟಿ ಗಿರಿಜಾ ಲೋಕೇಶ್ (Girija Lokesh) ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ನಟ ವಿಜಯ್ ರಾಘವೇಂದ್ರ (Vijaya Raghavendra) ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ಅವರ ತಂದೆಯ ಮನೆಯಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಗಣ್ಯಾತಿ ಗಣ್ಯರು, ಕಲಾವಿದರು ಸ್ಪಂದನ ಅವರ ಮೃತದೇಹದ ದರ್ಶನ ಮಾಡಿ ಮಾಧ್ಯಮದ ಮುಂದೆ ಬಂದು ಮಾತನಾಡಿದ್ದಾರೆ.

ಹೃದಯಾಘಾತದಿಂದ ಆಗಸ್ಟ್ 7ರಂದು ಸ್ಪಂದನಾ ಅವರು ಬ್ಯಾಂಕಾಕ್ (Bangkok) ಪ್ರವಾಸದಲ್ಲಿದ್ದಾಗ ನಿಧನರಾಗಿದ್ದಾರೆ. ಆಗಸ್ಟ್ 8ರ ಮಧ್ಯರಾತ್ರಿ ಥಾಯ್ಲಾಂಡ್‌ನಿಂದ (Thailand) ಫ್ಲೈಟ್‌ನಲ್ಲಿ (Flight) ಮೃತದೇಹ ಬೆಂಗಳೂರಿಗೆ ಆಗಮಿಸಿದ್ದು, ಇಂದು ಮುಂಜಾನೆ ಬೆಂಗಳೂರಿನ ಬಿ.ಕೆ ಶಿವರಾಂ (B.K Shivaram) ಅವರ ಮನೆಯ ಮುಂದೆ 6 ಗಂಟೆಯಿಂದ ಸ್ಪಂದನಾ ಅವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.
ಶಿವರಾಜ್‌ಕುಮಾರ್ (Shivarajkumar), ಗೀತಾ ಶಿವರಾಜ್‌ಕುಮಾರ್, ಗಿರಿಜಾ ಲೋಕೇಶ್ , ಶ್ರೀನಾಥ್ ನಟ ರಾಘವೇಂದ್ರ ರಾಜ್‌ಕುಮಾರ್ , ಸುಧಾರಾಣಿ, ಗಾಯಕ ವಿಜಯ್ ಪ್ರಕಾಶ್ (Vijay Prakash), ವಿ ನಾಗೇಂದ್ರ ಪ್ರಸಾದ್ (V. Nagendra Prasad), ನಿರ್ದೇಶಕ ನಾಗಣ್ಣ, ಮುಂತಾದವರು ಸ್ಪಂದನಾ ಅವರ ಪಾರ್ಥಿವ ಶರೀರದ ದರ್ಶನ ಪಡೆದು ವಿಜಯ್ ರಾಘವೇಂದ್ರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ರಾಘವೇಂದ್ರ ರಾಜ್‌ಕುಮಾರ್:
ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರು ಈ ಸಂಧರ್ಭದಲ್ಲಿ ಏನು ಹೇಳ್ಬೇಕು, ಹೇಗೆ ಪ್ರತಿಕ್ರಿಯೆ ಕೊಡ್ಬೇಕು ಅಂತ ಗೊತ್ತಾಗಲ್ಲ ನಿಶ್ಯಬ್ಧ ಆಗಿಬಿಡುತ್ತೇವೆ. ತಂದೆಗೆ ಹೇಳೋದಾ, ಗಂಡನಿಗೆ ಹೇಳೋದಾ, ಮಗನಿಗೆ ಹೇಳೋದಾ ಆಗಿದ್ದೆಲ್ಲ ಮರೆತುಬಿಡು ಅಂತ ರಾಘವೇಂದ್ರಗೆ ಹೇಳೋಕೆ ಆಗತ್ತಾ ಹೋದವರು ಹೋಗಿ ಬಿಡುತ್ತಾರೆ, ಇರುವವರ ಕಷ್ಟ ನೋಡಿ. ಮನೆಯವರಿಗೆ ಈ ಕಷ್ಟ ತಡೆದುಕೊಳ್ಳುವ ಶಕ್ತಿ ಸಿಗಲಿ, ಸ್ಪಂದನಾ (Spandana) ಆತ್ಮಕ್ಕೆ ಶಾಂತಿ ಸಿಗಲಿ ಅಂತ ದೇವರಲ್ಲಿ ಕೇಳಿಕೊಳ್ತೀನಿ” ಎಂದಿದ್ದಾರೆ
ಇನ್ನು ಪುನೀತ್ (Punit) ನಿಧನದ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್ ಅವರು ಪ್ರಪಂಚದಲ್ಲಿ ಈ ರೀತಿ ನಡೆಯುತ್ತಾ ಇರುತ್ತದೆ, ವಿಜಯ್ ರಾಘವೇಂದ್ರ (Vijaya Raghavendra) ನಮ್ಮ ಮನೆಯಲ್ಲಿದ್ದು ನಮ್ಮ ಜೊತೆಗೆ ಬೆಳೆದವರು. ರಾಘು ಅವರ ಹೆಂಡ್ತಿಗೆ ಹೀಗೆ ಆಗತ್ತೆ ಅಂದರೆ ತಡೆದುಕೊಳ್ಳೋಕೆ ಆಗೋದಿಲ್ಲ. ಎಲ್ಲ ವಯಸ್ಸಿನವರು ಹೋಗುತ್ತಿರುತ್ತಾರೆ. ನಮ್ಮ ಹತ್ತಿರದವರು ನಿಧನ ಆದಾಗ ಸಂಕಟ ತಡೆದುಕೊಳ್ಳೋಕೆ ಆಗಲ್ಲ. ನಮ್ಮ ಮನೆಯಲ್ಲಿ ನನಗೆ ದೊಡ್ಡ ರಾಘು ಅಂತಾರೆ, ಅವನಿಗೆ ಚಿಕ್ಕ ರಾಘು ಅಂತಾರೆ. ರಾಘುವನ್ನು ತಬ್ಬಿಕೊಂಡು ದುಃಖ ಮಾಡಿಕೊಂಡು ಹೋಗ್ತಿದೀನಿ, ಏನು ಹೇಳೋಕೆ ತೋಚುವುದಿಲ್ಲ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಾತಾಡಿದ ನಟಿ ಸುಧಾರಾಣಿ (Sudharani) ಅವರು ಸ್ಪಂದನಾ, ವಿಜಯ್ ರಾಘವೇಂದ್ರ ಅವರು ತುಂಬ ಮೃದುವಾದ ಮಾತುಗಳನ್ನಾಡುವವರು, ಈ ಜೋಡಿ ಮೇಲೆ ಯಾರ ಕಣ್ಣು ಬಿತ್ತೋ ಏನೋ. ಸಂಸ್ಕೃತಿ ಉಳ್ಳ ದಂಪತಿಗಳು. ಇವರಿಬ್ಬರ ಮಗ ಚಿಕ್ಕವನು. ದೇವರು ಈ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ಕೊಡಲಿ. ಒಂದು ತಿಂಗಳ ಹಿಂದೆ ನಾನು ಸ್ಪಂದನಾ ಅವರನ್ನು ಭೇಟಿ ಮಾಡಿದ್ದೆ. ಆದರೆ ಆ ದಿನ ಜಾಸ್ತಿ ಮಾತನಾಡಲುಆಗಿರ್ಲಿಲ್ಲ. ಈಗ ಹೀಗೆ ಆಗಿರೋದು ನಂಬಲು ಆಗುತ್ತಿಲ್ಲ. ಸ್ಪಂದನಾ (Spandana), ಒಳ್ಳೆಯ ಹುಡುಗಿ, ನಂಬಲು ಆಗುತ್ತಿಲ್ಲ” ಎಂದು ಹೇಳಿದರು
ಗಿರಿಜಾ ಲೋಕೇಶ್ (Girija Lokesh) ಮಾತನಾಡುವಾಗ ಸ್ಪಂದನಾ ನೋಡಿದ್ರೆ ಅವಳಿನ್ನೂ ಬದುಕಿದ್ದಾಳೆ ಅಂತ ಅನ್ನಿಸುತ್ತೆ. ಅವಳ ಮುಖದಲ್ಲಿರುವ ಕಳೆ ಒಂದು ಚೂರು ಮಾಸಿಲ್ಲ. ಇಂತ ಸಾವು ಯಾರಿಗೂ ಬರಬಾರದು, ನಮ್ಮಂತವರಿಗೆ ಮಲಗಿದ್ದಲ್ಲಿ ಸಾವು ಬಂದ್ರೆ ಎಷ್ಟು ಚೆನ್ನಾಗಿರತ್ತೆ, ಇಷ್ಟು ಚಿಕ್ಕ ವಯಸ್ಸಿಗೆ ಹೀಗೆ ಆಗಬಾರದು. ದೇವರು ಈ ಸಂಸಾರವನ್ನು ಹಾಳು ಮಾಡಿದ. ತಂದೆ-ತಾಯಿ ಅವರ ಉಸಿರು ಇರೋವರೆಗೂ ಈ ನೋವಿನಲ್ಲಿ ಇರುತ್ತಾರೆ” ಎಂದರು
ಭವ್ಯಶ್ರೀ ಆರ್.ಜೆ