ಸಮುದ್ರಕ್ಕೆ ಜಿಗಿದು 10 ನಿಮಿಷ ಈಜಾಡಿ ಗಮನ ಸೆಳೆದ ಕಾಂಗ್ರೆಸ್ ನಾಯಕ

ನವದೆಹಲಿ ಫೆ, 25: ಕೇರಳದ ಕೊಲ್ಲಮ್ ಜಿಲ್ಲೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮುದ್ರಕ್ಕೆ ಜಿಗಿದು ಈಜಾಡಿದ ದೃಶ್ಯ ಸೋಷಿಯಲ್ ಮಿಡಿಯಾಲ್ಲಿ ವೈರಲ್ ಆಗಿದೆ.

ಕೇರಳ ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ರಂಗೆರಲ್ಲಿದ್ದು, ನಿನ್ನೆ ಕೊಲ್ಲಂ ಜಿಲ್ಲೆಗೆ ಕಾಂಗ್ರೇಸ್ ನಾಯಕರೊಂದಿಗೆ ಭೇಟಿ ನಿಡಿದ್ದ ರಾಹುಲ್ ಗಾಂಧಿ ಅಲ್ಲಿ ತಂಗಸ್ಸೆರಿ ಸಮುದ್ರದಲ್ಲಿ ತಮ್ಮ ಕೆಲವು ಸ್ನೆಹಿತರು ಹಾಗೂ ಮಿನುಗಾರರೊಂದಿಗೆ ಸುಮಾರು 10 ನಿಮಿಷ ಈಜಾಡಿ ಗಮನ ಸೆಳೆದರು.

ರಾಹುಲ್ ಗಾಂಧಿಯವರು ಸಮುದ್ರ ತೀರಕ್ಕೆ ಆಗಮಿಸಿದಾಗ, ಕೆಲವು ಮೀನುಗಾರರು ಮೀನು ಹಿಡಿಯಲು ಬಲೆ ಬೀಸಿ ಸಮುದ್ರಕ್ಕೆ ಜಿಗಿದರು. ಆಗ ಅವರೊಂದಿಗೆ ದೋಣಿಯಿಂದ ನೀರಿಗೆ ಜಿಗಿದು ಈಜಾಡಿದರು.

ನಮಗೆ ಅವರು ಸಮುದ್ರಕ್ಕಿಳಿಯುತ್ತಾರೆ ಎಂದು ಗೊತ್ತಿರಲಿಲ್ಲ. ನಮಗೆಲ್ಲಾ ಒಂದು ಕ್ಷಣ ಅಚ್ಚರಿಯಾಯಿತು, ಆದರೆ ರಾಹುಲ್ ಗಾಂಧಿಯವರು ಬಹಳ ಆರಾಮವಾಗಿ ಈಜಾಡಿದರು. ಸಮುದ್ರದ ನೀರಿನಲ್ಲಿ ಸುಮಾರು 10 ನಿಮಿಷಗಳ ಕಾಲ ಈಜಿದರು. ಅವರಿಗೆ ಈಜಲು ಚೆನ್ನಾಗಿ ಗೊತ್ತಿದೆ ಎಂದು ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರು ತೊಟ್ಟಿದ್ದ ನೀಲಿ ಬಣ್ಣದ ಟಿ-ಶರ್ಟ್ ಮತ್ತು ಖಾಕಿ ಚಡ್ಡಿಯಲ್ಲಿಯೇ ಇಳಿದರು. ಈಜಾಡಿದ ನಂತರ ತೀರಕ್ಕೆ ಬಂದು ಬಟ್ಟೆ ಬದಲಿಸಿಕೊಂಡರಂತೆ. ಸಮುದ್ರ ತೀರದಲ್ಲಿ ಸುಮಾರು ಎರಡೂವರೆ ಗಂಟೆ ಕಾಲ ಕಳೆದ ಅವರು ಅಲ್ಲಿನ ಮೀನುಗಾರರೊಂದಿಗೆ ಕುಶಲೋಪಚಾರ ವಿಚಾರಿಸಿ ಅವರು ಮಾಡಿದ ಮೀನಿನ ಅಡುಗೆ ತಿಂದು ಖುಷಿಟ್ಟರು.

Exit mobile version