ಬಹುಮತಕ್ಕೆ ಬೇಕು 1 ಸ್ಥಾನ ಹಾಗದರೆ ಯಾರಾಗ್ತಾರೆ ಮೇಲ್ಮನೆ ಕಿಂಗ್‌

ಬೆಂಗಳೂರು ಡಿ 15 : ರಾಜ್ಯ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಿಸಿದ್ದು ಬಹುಮತಕ್ಕೆ ಇನ್ನು 1 ಸ್ಥಾನ ಕಡಿಮೆಯಾಗಿದೆ. ಬಹುಮತ ಪಡೆಯಲು 38 ಸ್ಥಾನ ಬೇಕಾಗಿದೆ.  ರಾಜ್ಯ ವಿಧಾನಪರಿಷತ್​ನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ತಲಾ 11 ಸ್ಥಾನಗಳನ್ನ ಗೆದ್ದಿವೆ. ಜೆಡಿಎಸ್ ಆರರಲ್ಲಿ ಸ್ಪರ್ಧಿಸಿ ಎರಡು ಸ್ಥಾನ ಗೆದ್ದಿದೆ. ಬೆಳಗಾವಿಯಲ್ಲಿ ಪಕ್ಷೇತರನಾಗಿ ನಿಂತಿದ್ದ ಲಖನ್ ಜಾರಕಿಹೊಳಿ ಗೆದ್ದಿದ್ದಾರೆ. ಮೇಲ್ನೋಟಕ್ಕೆ ಇದು ಬಿಜೆಪಿಗೆ ತುಸು ಹಿನ್ನಡೆ ತಂದ ಫಲಿತಾಂಶವಾಗಿದೆ. ಆ ಪಕ್ಷ 14 ಸ್ಥಾನವಾದರೂ ಸಿಗಬಹುದು ಎಂದು ನಿರೀಕ್ಷಿಸಿತ್ತು. 12 ಸ್ಥಾನ ಸಿಕ್ಕಿದ್ದರೂ ಪರಿಷತ್​ನಲ್ಲಿ ಬಿಜೆಪಿ ನಿರಾಳವಾಗಿರಬಹುದಾಗಿತ್ತು.

ಈಗ 11 ಸ್ಥಾನ ಗೆದ್ದಿರುವ ಬಿಜೆಪಿ ಮೇಲ್ಮನೆಯಲ್ಲಿ ಹೊಂದಿರುವ ಸದಸ್ಯರ ಸಂಖ್ಯೆ 37ಕ್ಕೆ ಏರಿದೆ. ಕಾಂಗ್ರೆಸ್ ಬಲ 26ಕ್ಕೆ ವೃದ್ಧಿಸಿದೆ. ಜೆಡಿಎಸ್ 11 ಸದಸ್ಯರನ್ನ ಹೊಂದಿದೆ. ಪಕ್ಷೇತರ ಸದಸ್ಯರ ಸಂಖ್ಯೆ ಕೇವಲ 1ಮಾತ್ರ. ಪ್ರಸ್ತುತ ಇರುವ ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿ ಬಹುಮತ ಸಾಭೀತು ಪಡಿಸಿಲು ಇನ್ನೂ ಒಂದು ಸ್ಥಾನದ ಅವಶ್ಯಕತೆ ಇದೆ.

ಪ್ರಸ್ತುತ ವಿಧಾನಪರಿಷತ್ ಬಲಾಬಲಾಗಳ ಸಂಖ್ಯೆ  

ಒಟ್ಟು ಸ್ಥಾನಗಳು: 75

ಬಿಜೆಪಿ: 37
ಕಾಂಗ್ರೆಸ್: 26
ಜೆಡಿಎಸ್: 11
ಪಕ್ಷೇತರ: 1

ಬಹುಮತಕ್ಕೆ: 38

Exit mobile version