ಇನ್ಮುಂದೆ ಶಾಲಾ ಮಕ್ಕಳಿಗೆ ಸಿಗಲಿದೆ ಊಟಕ್ಕೆ ನಿಂಬೆ `ಉಪ್ಪಿನಕಾಯಿ’!

lemon

ನಮಗೆಲ್ಲಾ ತಿಳಿದಿರುವಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ಸರ್ಕಾರ ಇಲ್ಲಿಯವರೆಗೂ ಕೂಡ ಪಾಲಿಸಿಕೊಂಡು ಬಂದಿದೆ. ರಾಜ್ಯದ ನಾನಾ ಭಾಗಗಳ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ದೊರೆಯುತ್ತಿದೆ. ಮಕ್ಕಳಿಗೆ ದೊರೆಯುವಂತ ಬಿಸಿಯೂಟದಲ್ಲಿ ಅನ್ನ ಸಾಂಬಾರ್ ನೀಡುತ್ತಿದ್ದರು ಜೊತೆಗೆ ಬೇಯಿಸಿದ ಮೊಟ್ಟೆ ಕೂಡ ಲಬ್ಯವಿತ್ತು. ಆದರೆ ವಿವಾದಗಳಿಂದ ಮೊಟ್ಟೆ ಕೆಲ ಕಡೆ ಸ್ಥಗಿತವಾಗಿದೆ! ಇನ್ಮುಂದೆ ಬಿಸಿಯೂಟದ ಜೊತೆಗೆ ನಿಂಬೆ ಉಪ್ಪಿನಕಾಯಿಯನ್ನು ನೀಡುವ ಬಗ್ಗೆ ಆಹಾರ ಸಚಿವರಾದ ಉಮೇಶ್ ಕತ್ತಿ ತಿಳಿಸಿದ್ದಾರೆ. ಸರ್ಕಾರ ಇಷ್ಟು ದಿನ ಬಿಸಿಯೂಟ ಯೋಜನೆಯನ್ನು ಎಂದಿನಂತೆ ಪಾಲಿಸಿಕೊಂಡು ಬಂದಿದೆ.

ಈ ಬಿಸಿಯೂಟದ ಜೊತೆಗೆ ಮಕ್ಕಳಿಗೆ ನಿಂಬೆ ಉಪ್ಪಿನಕಾಯಿ ನೀಡುವ ಮುಖೇನ ನಿಂಬೆ ಬೆಳೆಗಾರರಿಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ನಿಂಬೆ ಬೆಳೆಗಾರರಿಗೆ ಬೆಂಬಲ ನೀಡುವುದು ಅಗತ್ಯವಾಗಿದೆ. ಸರ್ಕಾರ ಎಂದಿನಂತೆ ನೀಡುತ್ತಿರುವ ಬಿಸಿಯೂಟದಲ್ಲಿ ನಿಂಬೆ ಉಪ್ಪಿನಕಾಯಿ ನೀಡುವ ಮೂಲಕ, ನಿಂಬೆ ಬೆಳೆಗಾರರಿಗೆ ಪ್ರೋತ್ಸಾಹ ನೀಡಬಹುದು ಜೊತೆಗೆ ಮಕ್ಕಳಿಗೂ ಊಟಕ್ಕೆ ಉಪ್ಪಿನಕಾಯಿ ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸಚಿವ ಉಮೇಶ್ ಕತ್ತಿ.

ಈ ಕುರಿತು ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ನಿಂಬೆ ಬೆಳಗಾರರಿಗೆ ಒಳ್ಳೆಯ ಬೆಂಬಲ ನೀಡುವುದರ ಬಗ್ಗೆ ಚಿಂತನೆ ಮಾಡಿದ್ದೇವೆ ಮತ್ತು ಮಕ್ಕಳಿಗೂ ಬಿಸಿಯೂಟಕ್ಕೆ ನಿಂಬೆ ಉಪ್ಪಿನಕಾಯಿ ದೊರೆಯುವಂತೆ ಮಾಡುವುದರ ಬಗ್ಗೆ ಶೀಘ್ರ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Exit mobile version