ತೀವ್ರ ಚಳವಳಿಗೆ ಧುಮುಕುತ್ತೇವೆ, ಜೆಲ್ ಬರೋ ಚಳವಳಿ ಮಾಡುತ್ತೇವೆ : ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು, ಏ. 17: 6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವಂತೆ 11 ದಿನ ಮುಷ್ಕರ ಮಾಡಿದರೂ ಕೂಡ ಸರ್ಕಾರ ತಿರಸ್ಕಾರ ಮಾಡುತ್ತಿದೆ. ಆದ್ದರಿಂದ ರಾಜ್ಯಪಾಲರಿಗೆ ಸರ್ಕಾರದ ಧೋರಣೆ ವಿರುದ್ಧ ಪತ್ರವನ್ನು ನೀಡಲು ಸಿದ್ಧತೆ ಮಾಡಿದ್ದೇವೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಶೇಖರ್ ಅವರು ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ರಾಜ್ಯಪಾಲರಿಗೆ ಮನವಿ ಪತ್ರ ಕೊಡುತ್ತೇವೆ. ಈ ವಿಚಾರದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ಸರ್ಕಾರಕ್ಕೆ ಶಿಬಿ, ಬುದ್ಧಿ ಹೇಳಬೇಕು. 11 ದಿನ ಸತ್ಯಾಗ್ರಹ ಮಾಡಿದ್ರು ಸರ್ಕಾರ ತಿರಸ್ಕಾರ ಮಾಡುತ್ತಿದೆ. ನೌಕರರನ್ನು ಅಮಾನತು ಮಾಡಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿ ಸಾವಿನ ದವಡೆಗೆ ತಳ್ಳುತ್ತಿದೆ ಎಂದು ಆರೋಪಿಸಿದರು.

ವಿನಾ ಕಾರಣ ಕೆಲ ನೌಕರರನ್ನು ಬಂಧನ ಮಾಡುತ್ತಿದ್ದಾರೆ. ಸೋಮವಾರದವರೆಗೂ ನೋಡಿ ತೀವ್ರ ಚಳವಳಿಗೆ ಧುಮುಕುತ್ತೇವೆ ಸೋಮವಾರದ ನಂತರ ಜೆಲ್ ಬರೋ ಚಳವಳಿ ಮಾಡುತ್ತೇವೆ. ನೌಕರರು ಮನೆಯಲ್ಲಿ ಇರಲು ಅಧಿಕಾರಿಗಳು ಬಿಡುತ್ತಿಲ್ಲ ಸೋಮವಾರದವರೆಗೆ ಸರ್ಕಾರಕ್ಕೆ ಗಡುವು ನೀಡುತ್ತಿದ್ದು, ಸೋಮವಾರದ ನಂತರ ಜೈಲು ಬರೋ ಚಳವಳಿ ಮಾಡುವ ಕುಟುಂಬ ಸಮೇತರಾಗಿ 133,000 ನೌಕರರು ಜೈಲು ಬರೋ ಚಳವಳಿ ಮಾಡ್ತವೆ ಎಂದು ಎಚ್ಚರಿಕೆ ನೀಡಿದರು.

Exit mobile version