New Delhi: ಪ್ರಸ್ತುತ ದೇಶದಲ್ಲಿ 20 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಲಾಗಿದ್ದು, ಈ ವಿದ್ಯಾಲಯಗಳು (list of fake universities) ವಿತರಿಸಿರುವ ಯಾವುದೇ ರೀತಿಯ ಪ್ರಮಾಣ ಪತ್ರಗಳಿಗೆ
ಮಾನ್ಯತೆ ಇರುವುದಿಲ್ಲ. ಈ ವಿಶ್ವವಿದ್ಯಾಲಯಗಳಿಗೆ ಪ್ರಮಾಣ ಪತ್ರ ವಿತರಿಸುವ ಯಾವುದೇ ಅಧಿಕಾರ ಇಲ್ಲ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಪ್ರಕಟಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಉನ್ನತ ಶಿಕ್ಷಣ ಕಾಯ್ದೆಯ ನಿಯಮಾವಳಿಗೆ ವಿರುದ್ಧವಾಗಿ ದೇಶದಲ್ಲಿರುವ 20 ನಕಲಿ ವಿಶ್ವವಿದ್ಯಾಲಯಗಳು ಪದವಿ
ಪ್ರಮಾಣಪತ್ರ ವಿತರಿಸುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಈ ನಕಲಿ ವಿಶ್ವವಿದ್ಯಾಲಯಗಳು ವಿತರಿಸಿರುವ ಪ್ರಮಾಣಪತ್ರಗಳು ಉನ್ನತ ಶಿಕ್ಷಣ ಹಾಗೂ ಯಾವುದೇ ಉದ್ಯೋಗಕ್ಕೂ ಮಾನ್ಯತೆ ಹೊಂದಿಲ್ಲ ಎಂದು
ಯುಜಿಸಿ (UGC) ಕಾರ್ಯದರ್ಶಿ ಮನೀಶ್ ಜೋಶಿ (list of fake universities) ತಿಳಿಸಿದ್ದಾರೆ.
ಯುಜಿಸಿ ಬಿಡುಗಡೆ ಮಾಡಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ :
ಕರ್ನಾಟಕದಲ್ಲಿನ ಬಡಗಾಂವಿ ಸರ್ಕಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜುಕೇಶನ್ ಸೊಸೈಟಿ, ಮಹಾರಾಷ್ಟ್ರದ ರಾಜಾ ಅರೇಬಿಕ್ ವಿಶ್ವವಿದ್ಯಾಲಯ ಕೇರಳದ ಸೇಂಟ್ ಜಾನ್ಸ್ ಯುನಿವರ್ಸಿಟಿ (St .John University),
ಪುದುಚೇರಿಯ ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (Sri Bodhi Academy of Higher Education), ಉತ್ತರಪ್ರದೇಶದಲ್ಲಿನ ಗಾಂಧಿ ಹಿಂದಿ ವಿದ್ಯಾಪೀಠ, ನ್ಯಾಷನಲ್ ಯುನಿವರ್ಸಿಟಿ ಆಫ್
ಇದನ್ನು ಓದಿ: ‘ಸೂಪರ್ ಸ್ಟಾರ್’ ಟ್ಯಾಗ್ ತೆಗೆಯಿರಿ ಅಂದ್ರು ನಟ ರಜನಿಕಾಂತ್ ! ‘ಜೈಲರ್’ ಟ್ರೈಲರ್‌ನಲ್ಲಿ ರಜನಿ ಯಾಕೆ ಹಾಗೆ ಹೇಳಿದ್ರು?
ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪಥಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಯುನಿವರ್ಸಿಟಿ , ಭಾರತೀಯ ಶಿಕ್ಷಾ ಪರಿಷದ್ ವಿವಿಗಳನ್ನು ನಕಲಿ ಎಂದು ಯುಜಿಸಿ ಘೋಷಿಸಿದೆ.
ನವದೆಹಲಿಯಲ್ಲಿರುವ ಎಡಿಆರ್–ಸೆಂಟ್ರಿಕ್ ಜುರಿಡಿಕಲ್ ಯುನಿವರ್ಸಿಟಿ ಯುನೈಟೆಡ್ ನೇಶನ್ಸ್ ಯುನಿವರ್ಸಿಟಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಂಡ್ ಫಿಜಿಕಲ್ ಹೆಲ್ತ್ ಸೈನ್ಸ್ಸ್, ಕಮರ್ಷಿಯಲ್ ಯುನಿವರ್ಸಿಟಿ
ಲಿಮಿಟೆಡ್–ದರಿಯಾಗಂಜ್, ,ವೃತ್ತಿಪರ ವಿಶ್ವವಿದ್ಯಾಲಯ, , ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ವಿಶ್ವಕರ್ಮ ಒಪನ್ ಯುನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ಮೆಂಟ್ (Vishwakarma
Open University for Self Employment), ಆಧ್ಯಾತ್ಮಿಕ ವಿಶ್ವವಿದ್ಯಾಲಯ ಈ ಪಟ್ಟಿಯಲ್ಲಿವೆ.

ಆಂಧ್ರಪ್ರದೇಶದಲ್ಲಿ ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯುನಿವರ್ಸಿಟಿ, ಬೈಬಲ್ ಓಪನ್ ಯುನಿವರ್ಸಿಟಿ ಆಫ್ ಇಂಡಿಯಾ ನಕಲಿಯಾಗಿದ್ದರೆ; ಪಶ್ಚಿಮ ಬಂಗಾಳದಲ್ಲಿನ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್
ರಿಸರ್ಚ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ (Indian Institute of Alternative Medicine) ಸಂಸ್ಥೆಗಳು ಈ ಪಟ್ಟಿಯಲ್ಲಿದ್ದು, ಅವುಗಳನ್ನು ನಕಲಿ ಎಂದು ಘೋಷಿಷಲಾಗಿದೆ.