ಆನ್ಲೈನ್ ಸಾಲದ ಆ್ಯಪ್ ಕಿರುಕುಳ ; ಹಿಂದೆ ತಾಳಲಾರದೆ ಟೆಕ್ಕಿ ಆತ್ಮಹತ್ಯೆ!

IT

ಅಕ್ಟೋಬರ್ 4, ಮಂಗಳವಾರ ಬೆಳಗ್ಗೆ ಟೆಕ್ಕಿಯೊಬ್ಬರು ತಮ್ಮ ಮನೆಯ ಸೀಲಿಂಗ್‌ ಫ್ಯಾನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾಲದ ಆ್ಯಪ್ (Loan App) ಆಪರೇಟರ್‌ಗಳಿಂದ ನಿರಂತರ ಬೆದರಿಕೆ ಬಂದ ನಂತರ ಟೆಕ್ಕಿ ಆತ್ಮಹತ್ಯೆ (Sucide) ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೃತ ವ್ಯಕ್ತಿ 23 ವರ್ಷದ ನರೇಂದ್ರನ್ ಎಂದು ಗುರುತಿಸಲಾಗಿದ್ದು, ಪೆರುಂಗುಡಿಯ ಐಟಿ(IT) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಎಂಜಿಆರ್ ನಗರ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು,

ನರೇಂದ್ರನ್ ಅವರ ಕುಟುಂಬದವರು ನೀಡಿದ ಪ್ರಾಥಮಿಕ ಮಾಹಿತಿ ಪ್ರಕಾರ ಸಾಲದ ಆ್ಯಪ್ ನೀಡುತ್ತಿದ್ದ ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

https://youtu.be/P1YfiZGjWUw

ಸಾಲದ ಆಪ್ ಮೂಲಕ 33,000 ರೂ. ಪಡೆದ ಟೆಕ್ಕಿ, ನಂತರದ ದಿನಗಳಲ್ಲಿ ಸಾಲ ಮರುಪಾವತಿ (Loan App Harrasment Techie Dies) ಮಾಡಿದ ನಂತರವೂ ಸಾಲದ ಆ್ಯಪ್ ಗ್ರಾಹಕ ಸೇವಾ ನಿರ್ವಾಹಕರು ನಿರಂತರವಾಗಿ ಕರೆ ಮಾಡಿ ಇನ್ನೂ 33 ಸಾವಿರ ರೂ. ಪಾವತಿಸಬೇಕು ಎಂದು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/homeremedies-for-piles/

ಮೂಲಗಳ ಪ್ರಕಾರ ನರೇಂದ್ರನ್ ಕುಟುಂಬದ ಸದಸ್ಯರೊಬ್ಬರ ಬಳಿ 50 ಸಾವಿರ ಸಾಲ ಪಡೆದು ಮರು ಪಾವತಿ (Loan App Harrasment Techie Dies) ಮಾಡಿದ್ದರು. ಇದರ ಹೊರತಾಗಿಯೂ, ನರೇಂದ್ರನ್ ಅವರನ್ನು ಮತ್ತೊಮ್ಮೆ ಲೋನ್ ಆ್ಯಪ್ ಗ್ರಾಹಕ ಸೇವೆಯು ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿತ್ತು.

ಅವರು ಆತನನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಮತ್ತು ಅವರ ಅಶ್ಲೀಲ ಚಿತ್ರಗಳನ್ನು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಸಾಲದ ಆ್ಯಪ್ ತಂಡವು ನರೇಂದ್ರನ್ ಅವರ ಸ್ನೇಹಿತರಿಗೆ ಸಂದೇಶಗಳನ್ನು ಕಳುಹಿಸಿದ್ದಾರೆ ಮತ್ತು ಫೋನ್ ಕರೆಗಳನ್ನು ಮಾಡಿದ್ದಾರೆ,

ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಮತ್ತು ಅವರು ತಮ್ಮ ಸಾಲವನ್ನು ಮರುಪಾವತಿಸಲಿಲ್ಲ ಎಂದು ಹೇಳಿ ಅವರ ಬಗ್ಗೆ ಇಲ್ಲಸಲ್ಲದ ವದಂತಿ ಹಬ್ಬಿಸಿದ್ದಾರೆ.

ಇದನ್ನೂ ಓದಿ : https://vijayatimes.com/our-yatra-is-for-farmers-says-rahul/

ಇದೇ ರೀತಿ ಪ್ರತಿದಿನ ಚಿತ್ರಹಿಂಸೆ ನೀಡಿದ್ದು, ಈ ಹಿಂಸೆ ತಾಳಲಾರದೆ ಮನೆಯಲ್ಲಿ ಒಂಟಿಯಾಗಿದ್ದ ನರೇಂದ್ರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.

ಯುವಕನ ಫೋನ್‌ನಲ್ಲಿದ್ದ ವಿವಿಧ ಲೋನ್ ಆಪ್‌ಗಳ ಬಗ್ಗೆ ಪೊಲೀಸರು ವಿವರಗಳನ್ನು ಪಡೆದುಕೊಂಡಿದ್ದು, ಈಗಾಗಲೇ ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

Exit mobile version