ರಾಜ್ಯ ಲಾಕ್‌ಡೌನ್‌ ಆಗುತ್ತಾ ? ಈ ಬಗ್ಗೆ ಡಾ. ಸುಧಾಕರ್‌ ಹೇಳಿದ್ದು ಹೀಗೆ

ಬೆಂಗಳೂರು  ಜ 7 :  ರಾಜ್ಯದಲ್ಲಿ ಇನ್ನುಮುಂದೆ ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಮಾಡುವುದೇ ಇಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಲಾಕ್ ಡೌನ್ ಎಂಬುದು ಕಳೆದುಹೋದ ನೀತಿ. ಇನ್ನು ಮುಂದೆ ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.3.5ರಷ್ಟಿದೆ. ಇದು ಹೆಚ್ಚಾಗದಂತೆ ತಡೆಯಲು ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಸಾರ್ವಜನಿಕರು ಲಾಕ್ ಡೌನ್ ಬಗ್ಗೆ ಆತಂಕ ಪಡುವ ಆತಂಕವಿಲ್ಲ ಎಂದು ಹೇಳಿದ್ದಾರೆ.

ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಪಡೆದುಕೊಂಡರೆ ಕೋವಿಡ್ ಸೋಂಕಿನ ತೀವ್ರತೆ ಕಡಿಮೆ ಇರಲಿದೆ. ರಾಜ್ಯದಲ್ಲಿ ಎರಡು ಡೋಸ್ ಲಸಿಕ ಪಡೆದವರ ಪ್ರಮಾಣ ಶೇ. 80ರಷ್ಟಿದೆ. 100% ಲಸಿಕೆ ಪಡೆದಕೊಂಡರೆ  ಕೊರೊನಾಗೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆಗೆ ಹೋಗುವ, ಐಸಿಯುಗೆ ದಾಖಲಾಗುವ ಪ್ರಮೇಯ ಬರುವುದಿಲ್ಲ. ಸಾವಿನ ಪ್ರಮಾಣ ಕೂಡ ಇರುವುದಿಲ್ಲ ಎಂದರು. ಒಮಿಕ್ರಾನ್ ಬಗ್ಗೆ ಆತಂಕ ಪಡುವುದು ಬೇಡ. ಸಾರ್ವಜನಿಕರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಸೋಂಕು ತಡೆಗಟ್ಟಬಹುದು. ಸೋಂಕಿನ ಸ್ಪಷ್ಟ  ಚಿತ್ರಣ ಗೊತ್ತಾಗಿದ್ದು ಸರ್ಕಾರ ಇದನ್ನು ಎದುರಿಸಲು ಸಜ್ಜಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Exit mobile version