ಲೋಕಸಮರ 2024: ಬಿಜೆಪಿಯಿಂದ ಯಾವ ಜಾತಿಗೆ ಎಷ್ಟು ಟಿಕೆಟ್..?

Bengaluru: ರಾಜ್ಯದ 20 ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಬಿಜೆಪಿ (BJP) ಘೋಷಣೆ ಮಾಡಿದೆ. ಸಾಕಷ್ಟು ಅಳೆದು-ತೂಗಿ ಈ ಬಾರಿ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. 9 ಹಾಲಿ ಸಂಸದರನ್ನು ಕೈಬಿಟ್ಟಿರುವ ಬಿಜೆಪಿ ಹೈಕಮಾಂಡ್, ಕೆಲ ಹೊಸ ಮುಖಗಳಿಗೆ ಮಣೆ ಹಾಕಿದೆ. ಈ ಮಧ್ಯೆ ಜಾತಿವಾರು ಲೆಕ್ಕಾಚಾರದಲ್ಲಿಯೂ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಬಿಜೆಪಿ ಹೈಕಮಾಂಡ್ #Highcommand, ಎಲ್ಲ ಪ್ರಬಲ ಜಾತಿಗಳಿಗೂ ಪ್ರಾತಿನಿಧ್ಯ ನೀಡಿರುವ ಸಂದೇಶ ರವಾನಿಸಿದೆ.

ಇನ್ನು ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ಲಿಂಗಾಯತರು ನಿರ್ಣಾಯಕರಾಗಿರುವ ಕಾರಣ ಬಿಜೆಪಿಯ ಪಟ್ಟಿಯಲ್ಲಿ ಈ ಸಮುದಾಯದವರಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಇನ್ನು ಹಳೇ ಮೈಸೂರು @Mysore ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಇಬ್ಬರಿಗೆ ಬಿಜೆಪಿ ಟಿಕೆಟ್ ನೀಡಿದೆ. ಮಿತ್ರ ಪಕ್ಷ ಜೆಡಿಎಸ್ (JDS) ಕೂಡಾ ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಸಾಧ್ಯತೆಗಳೇ ಹೆಚ್ಚು.

ಜಾತಿವಾರು ಟಿಕೆಟ್ :
ಲಿಂಗಾಯತ – 08
ಒಕ್ಕಲಿಗ – 02
ಪರಿಶಿಷ್ಟ ಜಾತಿ – 03
ಬ್ರಾಹ್ಮಣ – 02
ಪರಿಶಿಷ್ಟ ಪಂಗಡ – 01
ಬಂಟ – 01
ಬಿಲ್ಲವ – 01
ಬಲಿಜ – 01
ಕ್ಷತ್ರಿಯ – 01

ಟಿಕೆಟ್ ಕಳೆದುಕೊಂಡ ಹಾಲಿ ಸಂಸದರು :
ಪ್ರತಾಪ್ ಸಿಂಹ (Prathap Simha) – ಮೈಸೂರು-ಕೊಡಗು
ವಿ.ಶ್ರೀನಿವಾಸ ಪ್ರಸಾದ್ – ಚಾಮರಾಜನಗರ
ಜಿ.ಎಸ್.ಬಸವರಾಜು – ತುಮಕೂರು
ಶಿವಕುಮಾರ ಉದಾಸಿ – ಹಾವೇರಿ
ಡಿ.ವಿ. ಸದಾನಂದಗೌಡ (D.V Sadanandagowda) – ಬೆಂಗಳೂರು ಉತ್ತರ
ಕರಡಿ ಸಂಗಣ್ಣ – ಕೊಪ್ಪಳ
ದೇವೇಂದ್ರಪ್ಪ – ಬಳ್ಳಾರಿ
ನಳಿನ್ಕುಮಾರವ ಕಟೀಲ್ – ದಕ್ಷಿಣ ಕನ್ನಡ
ಜಿ.ಎಂ.ಸಿದ್ದೇಶ್ವರ – ದಾವಣಗೆರೆ

Exit mobile version