Bengaluru: ಕೇಂದ್ರ ಚುನಾವಣಾ ಆಯೋಗವು ಇಂದು ಲೋಕಸಭಾ ಚುನಾವಣೆಯನ್ನು ಘೋಷಿಸಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೇಶಾದ್ಯಂತ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗದ ಘೋಷಣೆಯಂತೆ ಕರ್ನಾಟಕದಲ್ಲಿ (Karnataka) ಲೋಕಸಭಾ ಚುನಾವಣೆಯು 2 ಹಂತದಲ್ಲಿ ನಡೆಯಲಿದೆ. ಶನಿವಾರದಿಂದಲೇ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಫಲಿತಾಂಶ ಬರುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅದೇ ರೀತಿಯಾಗಿ ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ (April) 26ರಂದು ಮೊದಲನೇ ಹಂತದ ಮತದಾನ ನಡೆಯಲಿದ್ದು ಹಾಗೂ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ ಎಂದು ದೆಹಲಿ (Delhi) ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajeev Kumar) ಚುನಾವಣಾ ದಿನಾಂಕವನ್ನ ಪ್ರಕಟಿಸಿದ್ದಾರೆ.
ಏಪ್ರಿಲ್ 26ಕ್ಕೆ ಎಲ್ಲೆಲ್ಲಿ ಮತದಾನ?
1) ಚಿತ್ರದುರ್ಗ
2) ಉಡುಪಿ-ಚಿಕ್ಕಮಗಳೂರು
3) ದಕ್ಷಿಣ ಕನ್ನಡ
4) ಹಾಸನ (Hassan)
5) ತುಮಕೂರು
6) ಚಿಕ್ಕಬಳ್ಳಾಪುರ
7) ಕೋಲಾರ
8) ಮಂಡ್ಯ (Mandya)
9) ಮೈಸೂರು-ಕೊಡಗು
10) ಚಾಮರಾಜನಗರ
11) ಬೆಂಗಳೂರು ಗ್ರಾಮಾಂತರ
12) ಬೆಂಗಳೂರು ದಕ್ಷಿಣ (Bengaluru)
13) ಬೆಂಗಳೂರು ಉತ್ತರ
14) ಬೆಂಗಳೂರು ಕೇಂದ್ರ
ಮೇ 7ರಂದು ಎಲ್ಲೆಲ್ಲಿ ಮತದಾನ?
1) ಬೆಳಗಾವಿ
2) ಬಳ್ಳಾರಿ
3) ಚಿಕ್ಕೋಡಿ
4) ಹಾವೇರಿ-ಗದಗ
5) ಕಲಬುರಗಿ
6) ಬೀದರ್ (Bidar)
7) ಹುಬ್ಬಳಿ – ಧಾರವಾಡ
8) ಕೊಪ್ಪಳ
9) ರಾಯಚೂರು
10) ಉತ್ತರ ಕನ್ನಡ
11) ದಾವಣಗೆರೆ
12) ಶಿವಮೊಗ್ಗ (Shivamogga)
13) ಬಾಗಲಕೋಟೆ
14) ವಿಜಯಪುರ ಜಿಲ್ಲೆಯಲ್ಲಿ ಮತದಾನ ನಡೆಯಲಿದೆ.