Delhi: ಲೋಕಸಭೆ ಚುನಾವಣಾ (Lok Sabha Election) ದಿನಾಂಕವನ್ನು ಮಾರ್ಚ್ (March) 16ರಂದು ಘೋಷಣೆ ಮಾಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಚುನಾವಣಾ ಆಯೋಗದ ನೂತನ ಆಯುಕ್ತರು ನಾಳೆ ಸಂಜೆ 3.00 ಗಂಟೆ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.
ಇಂದು (ಮಾ.15) ನೂತನ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ (Jnanesh Kumar) ಮತ್ತು ಸುಖಬೀರ್ ಸಂಧು ಅವರು ಅಧಿಕಾರ ಸ್ವೀಕಾರಿಸಿದ್ದಾರೆ. ಈಗಾಗಲೇ ಚುನಾವಣಾ ಆಯೋಗವು ವಿವಿಧ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದೆ.
ವರದಿಗಳ ಪ್ರಕಾರ, ಚುನಾವಣಾ ಆಯೋಗವು ಲೋಕಸಭೆ ಚುನಾವಣೆ (Loksabha Election) ವೇಳಾಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ಕಾರ್ಯನಿರತವಾಗಿದೆ. ಈ ಸಮಯಲ್ಲಿ ಇದೀಗ ನೂತನ ಆಯುಕ್ತರ ನೇಮಕ ಮಾಡಿ. ಚುನಾವಣಾ ಆಯುಕ್ತ ಅರುಣ್ ಗೋಯೆಲ್ (Arun Goel) ರಾಜೀನಾಮೆ ನೀಡದಿದ್ದಾರೆ. ಇದರ ಜತೆಗೆ 18ನೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯ ಬಗ್ಗೆ ತಿಳಿಸಿದೆ.
2019ರ ಚುನಾವಣಾ ವಿವರ
ಕಳೆದ 2019ರಲ್ಲಿ ಮಾರ್ಚ್ 10ರ ಭಾನುವಾರ ಲೋಕಸಭಾ ಚುನಾವಣೆ ಘೋಷಣೆ ಆಗಿತ್ತು. ಕೇಂದ್ರ ಚುನಾವಣಾ ಆಯೋಗ ಒಟ್ಟು 7 ಹಂತದಲ್ಲಿ ಮತದಾನ ನಡೆದಿತ್ತು. 11 ಏಪ್ರಿಲ್ (April) 2019 ರಿಂದ 19 ಮೇ 2019ರವರೆಗೆ 17ನೇ ಲೋಕಸಭಾ ಚುನಾವಣೆ ನಡೆದಿತ್ತು. 2019ರ ಮೇ 23 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು.
ಕರ್ನಾಟಕದಲ್ಲಿ (Karnataka) 2019ರ ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಈ ಬಾರಿಯೂ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯುವುದು ಬಹುತೇಕ ಪಕ್ಕಾ ಎನ್ನಲಾಗಿದೆ.