ಲೋಕಸಭೆ ಸಮರ: ಕೈ ಪಾಲಿಗೆ ಕಠಿಣ ಮತ್ತು ಗೆಲ್ಲುವ ನಿರೀಕ್ಷೆಇರುವ 50-50 ಇರೋ ಕ್ಷೇತ್ರಗಳ ಲಿಸ್ಟ್ ಇಲ್ಲಿದೆ.

Bengaluru: 2024ರ ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ (Congress) ಭಾರೀ ತಯಾರಿ ಆರಂಭಿಸಿದೆ. ಮೋದಿ ಅಲೆಯನ್ನು ಎದುರಿಸಿ, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ಜಿದ್ದಿಗೆ ಬಿದ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು, ಪ್ರತಿ ಲೋಕಸಭಾ ಕ್ಷೇತ್ರವಾರು ಸಮೀಕ್ಷೆ ಆರಂಭಿಸಿದ್ದಾರೆ. 2019ರ ಲೋಜಸಭಾ ಚುನಾವಣೆಯಲ್ಲಿ ತೋರಿದ ಹೀನಾಯ ಪ್ರದರ್ಶನ ಈ ಬಾರಿ ಪುನರಾವರ್ತನೆ ಆಗದಂತೆ ತಂತ್ರಗಾರಿಕೆ ರೂಪಿಸುತ್ತಿದೆ.

ರಾಜ್ಯದ 28 ಕ್ಷೇತ್ರಗಳನ್ನು ಮೂರು ವಿಭಾಗಗಳಾಗಿ ಗುರುತಿಸಲಾಗಿದೆ. ಕಠಿಣ ಕ್ಷೇತ್ರಗಳು, ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳು ಮತ್ತು 50-50 ಇರೋ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ. ಹಾಗಾದರೆ ಅವುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಗೆಲ್ಲಲು ಸಾಧ್ಯತೆ ಇರುವ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ, 50-50 ಇರುವ ಕ್ಷೇತ್ರಗಳಿಗೆ ಜಾಸ್ತಿ ಒತ್ತು ಕೊಡಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಸಮೀಕ್ಷೆಗಳನ್ನು ಆಧರಿಸಿ ಟಿಕೆಟ್ (Ticket) ನೀಡಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ಕೆಲವೊಂದು ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಿಲ್ಲದ ಮತ್ತು 50-50 ಅವಕಾಶ ಇರುವ ಕ್ಷೇತ್ರಗಳ ಬಗ್ಗೆ ಪಟ್ಟಿಮಾಡಿಕೊಂಡಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ತಂತ್ರಗಾರಿಕೆ ರೂಪಿಸಲು ನಿರ್ಧಾರವನ್ನು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಕೈ ಪಾಲಿಗೆ ಗೆಲುವು ಕಷ್ಟವಾಗಿರುವ ಕ್ಷೇತ್ರಗಳು :
ದಕ್ಷಿಣ ಕನ್ನಡ (Dakshina Kannada)
ಬೀದರ್
ಚಿಕ್ಕೋಡಿ
ಧಾರವಾಡ
ಹಾಸನ
ಉಡುಪಿ ಚಿಕ್ಕಮಗಳೂರು
ಉತ್ತರ ಕನ್ನಡ (Uttara Kannada)
ಬೆಂಗಳೂರು ದಕ್ಷಿಣ
ಶಿವಮೊಗ್ಗ

ಗೆಲ್ಲಲು ಸಾಧ್ಯತೆ ಇರುವ ಕ್ಷೇತ್ರಗಳು :
ಬೆಂಗಳೂರು ಗ್ರಾಮಾಂತರ
ತುಮಕೂರು (Tumakuru)
ಚಾಮರಾಜನಗರ
ಮಂಡ್ಯ
ಕೋಲಾರ
ಬೆಳಗಾವಿ
ಕಲಬುರಗಿ
ಬಳ್ಳಾರಿ
ಮೈಸೂರು (Mysore)
ಚಿಕ್ಕಬಳ್ಳಾಪುರ
ಚಿತ್ರದುರ್ಗ
ವಿಜಯಪುರ
ರಾಯಚೂರು

50-50 ಇರುವ ಕ್ಷೇತ್ರಗಳು :
ಕೊಪ್ಪಳ
ಬಾಗಲಕೋಟೆ
ಹಾವೇರಿ
ಬೆಂಗಳೂರು ಉತ್ತರ
ಬೆಂಗಳೂರು ಸೆಂಟ್ರಲ್
ದಾವಣಗೆರೆ (Davanagere)

Exit mobile version