ಕಾಲೇಜ್ ಕ್ಯಾಂಪಸ್‌ನಲ್ಲಿ ಲವ್ ಪ್ರಪೋಸ್: ಹುಡುಗ-ಹುಡುಗಿಗೆ ಗೇಟ್ ಪಾಸ್ ಕೊಟ್ಟ ಕಾಲೇಜು ಆಡಳಿತ ಮಂಡಳಿ

ಲಾಹೋರ್, ಮಾ. 14: ಕಾಲೇಜು ಕ್ಯಾಂಪಸ್‌ನಲ್ಲಿ ಪ್ರೇಮ ನಿವೇದನೆ ಮಾಡಿದ ಹುಡುಗಿ ಹಾಗೂ ಅದಕ್ಕೆ ಒಪ್ಪಿದ ಹುಡುಗ ಇಬ್ಬರನ್ನು ಲಾಹೋರ್‌ ವಿವಿ ಶಾಶ್ವತವಾಗಿ ಹೊರಗಟ್ಟಿದೆ.

ಲವ್‌ ಪ್ರಪೋಸ್‌ ಮಾಡಿದ ವಿಡಿಯೋವೊಂದು ವೈರಲ್‌ ಆಗ ಬೆನ್ನಿಗೇ ಲಾಹೋರ್‌ ವಿವಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ.

ಲಾಹೋರ್‌ ವಿವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದಾಳೆ. ಇದಕ್ಕೆ ಒಪ್ಪಿದ ಹುಡುಗನು ಆಕೆಯನ್ನು ತಬ್ಬಿ ಮುತ್ತಿಕ್ಕಿದ್ದಾನೆ. ಈ ದೃಶ್ಯವನ್ನು ನೋಡುತ್ತಿದ್ದ ಇತರ ಸಹಪಾಠಿಗಳು ಚೀರಿದ್ದಾರೆ.

ಈ ನಡುವೆ ಪ್ರೇಮ ನಿವೇದನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು ಆಡಳಿತ ಮಂಡಳಿ, ಇದರಲ್ಲಿ ಹೆಚ್ಚಿನದ್ದು ಏನೂ ಹೇಳುವುದಿಲ್ಲ. ವಿವಿ ನಿಯಮಗಳನ್ನು ಮೀರಿದ ಹಿನ್ನೆಲೆಯಲ್ಲಿ ಇಬ್ಬರನ್ನೂ ಹೊರಗಟ್ಟಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Exit mobile version