9,999 ಗುಲಾಬಿಗಳಿಂದ ನೇಯ್ದ ಬಟ್ಟೆಯನ್ನು ಗಿಫ್ಟ್ ಆಗಿ ನೀಡುವ ಮೂಲಕ ಪ್ರೀತಿ ನಿವೇದನೆ ಮಾಡಿದ ಪ್ರೇಮಿ

Love

ಮದುವೆ(Marriage) ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎನ್ನುವುದು ನಂಬಿಕೆ. ಒಂದು ಗಂಡಿಗೆ ಒಂದು ಹೆಣ್ಣು, ಒಂದು ಹೆಣ್ಣಿಗೆ ಒಂದು ಗಂಡು ಅಂತ ಆ ಭಗವಂತ ಮೊದಲೇ ಜೋಡಿ ಮಾಡಿರುತ್ತಾನಂತೆ, ನಾವು ನಮ್ಮ ಜೋಡಿಯನ್ನು ಹುಡುಕಿಕೊಳ್ಳಬೇಕು ಅಷ್ಟೇ. ಹುಡುಕಿಕೊಳ್ಳುವುದು ಎಂದರೆ ಹೇಗೆ? ಕೆಲಸ ಕಾರ್ಯ ಬಿಟ್ಟು, ಜೋಡಿಯನ್ನು ಹುಡುಕುತ್ತ ಕೂರೋಕೆ ಆಗುತ್ತಾ ಎಂದು ಯೋಚಿಸ್ತಿದ್ದೀರಾ? ಅದರ ಅವಶ್ಯಕತೆಯಿಲ್ಲ, ಜೀವನದ ಯಾವುದೋ ಒಂದು ಹಂತದಲ್ಲಿ ನಿಮ್ಮ ಸಂಗಾತಿ ನಿಮ್ಮ ಎದುರು ಬಂದೇ ಬರುತ್ತಾರೆ.

ಅವರನ್ನ ಸರಿಯಾಗಿ ಗುರುತಿಸಿ, ಪ್ರೀತಿ ನಿವೇದನೆ ಮಾಡಿಕೊಂಡು, ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳೋದು ನಿಮ್ಮ ಬುದ್ಧಿವಂತಿಕೆಗೆ ಬಿಟ್ಟದ್ದು. ಪ್ರೀತಿ ಮಾಡುವುದು, ಪ್ರೀತಿಯಲ್ಲಿ ಬೀಳುವುದು ಎಂದರೆ ಅಷ್ಟು ಸುಲಭವೇನಲ್ಲ ಬಿಡಿ. ಅದರಲ್ಲೂ ಒಬ್ಬರನ್ನ ನೀವೇ ನನ್ನ ಪ್ರೀತಿ ಅಂತ ಅವರ ಮುಂದೆ ಪ್ರೀತಿ ನಿವೇದನೆ ಮಾಡಿಕೊಳ್ಳೊದಂತೂ ಇನ್ನೂ ಕಷ್ಟ. ಹೆಚ್ಚಾಗಿ ನಾವೆಲ್ಲ ರೋಮ್ಯಾಂಟಿಕ್ ಚಲನಚಿತ್ರಗಳನ್ನ ನೋಡಿಕೊಂಡು, ಪ್ರಣಯ ಕಾದಂಬರಿಗಳನ್ನು ಓದಿಕೊಂಡೆ ಬೆಳೆದವರು. ಅದರಲ್ಲಿ ಹುಡುಗ-ಹುಡುಗಿ ಪರಸ್ಪರ ಪ್ರೀತಿ ನಿವೇದನೆ ಮಾಡಿಕೊಳ್ಳುವುದನ್ನು ನೋಡಿ ರೋಮಾಂಚನಗೊಂಡಿದ್ದೇವೆ.

ಆದರೆ, ಇವರೇ ನಮ್ಮ ಬಾಳಸಂಗಾತಿ ಅಂತಾ ನಿರ್ಧರಿಸಿದ ಮೇಲೆ ಅವರ ಎದುರು ಹೋಗಿ ಪ್ರೇಮ ನಿವೇದನೆ ಮಾಡೋದು ಬಲು ಕಷ್ಟದ ಕೆಲಸ. ಅದರಲ್ಲೂ ಐ ಲವ್ ಯೂ ಅಂತಾ ಹೇಳೋಕೆ ಧೈರ್ಯ ಎಷ್ಟಿದ್ದರೂ ಸಾಲದು. ಕೆಲವೊಬ್ಬರಿಗೆ ಬಾಯಿ ಮಾತಲ್ಲಿ ಪ್ರೇಮ ನಿವೇದನೆ ಮಾಡಲು ಇಷ್ಟವಿರುವುದಿಲ್ಲ. ಜೊತೆಗೆ ಈಗಿನ ಆಧುನಿಕ ಹುಡುಗಿಯರಿಗೆ ಗುಲಾಬಿ ಗೊಂಚಲನ್ನು ಹಿಡಿದು ಮೊಣಕಾಲೂರಿ ಪ್ರೇಮ ನಿವೇದನೆ ಮಾಡುವ ವಿಧಾನವು ಹಳೆಯದು ಎನಿಸುತ್ತದೆ. ಇದು ಸಾಂಪ್ರದಾಯಿಕ ಶೈಲಿಯಾಗಿದ್ದರೂ ಸಹ ಇನ್ನೂ ಅನೇಕ ವಿಧಾನಗಳು ಚಾಲ್ತಿಯಲ್ಲಿವೆ.


ಆದರೆ ಇಲ್ಲೊಬ್ಬ ಪ್ರೇಮಿ ತೀರಾ ಭಿನ್ನವಾಗಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಇಂತಹ ವಿಶಿಷ್ಟ ಪ್ರಪೋಸಲ್ ನೋಡಿದ ಆತನ ಪ್ರೇಯಸಿ ಅಕ್ಷರಶಃ ಮೂಕವಿಸ್ಮಿತಳಾಗಿದ್ದಾಳೆ. ಹೌದು, ಈ ಪ್ರೇಮಿ ಗುಲಾಬಿ ಹೂವುಗಳಿಂದ ಮಾಡಿದ ಬಟ್ಟೆಯನ್ನು ಉಡುಗೊರೆಯಾಗಿ ನೀಡಿ ತನ್ನ ಪ್ರೇಯಸಿಗೆ ಪ್ರೊಪೋಸ್ ಮಾಡಿದ್ದಾನೆ. ಇದು ನಡೆದಿರುವುದು ಚೀನಾದಲ್ಲಿ. ಚೀನಾದ ಪ್ರೇಮಿಯೊಬ್ಬ ಸುಮಾರು 9,999 ಗುಲಾಬಿ ಹೂವುಗಳಿಂದ ನೇಯ್ದ ಬಟ್ಟೆಯನ್ನು ಉಡುಗೊರೆಯಾಗಿ ನೀಡಿ, ಪ್ರೇಯಸಿಯನ್ನು ಇಂಪ್ರೆಸ್ ಮಾಡಿದ್ದಾನೆ. ಇಂತಹ ವಿಶಿಷ್ಟ ಪ್ರಪೋಸಲ್ ನೀಡಿದ ಹುಡುಗನನ್ನು ಆ ಹುಡುಗಿ ಒಪ್ಪದಿರಲು ಸಾಧ್ಯವೇ?

Exit mobile version